Advertisement

ಮನೆಯಲ್ಲಿ ಮೊಗೆದಷ್ಟು ಮುಗಿಯದ ರಾಡಿ

01:13 PM Aug 18, 2019 | Suhan S |

ರೋಣ: ತಾಲೂಕಿನ ಹೊಳೆಆಲೂರು, ಮೆಣಸಗಿ ಸೇರಿದಂತೆ ಸುತ್ತಮುತ್ತಲಿನ ನೆರೆ ಪೀಡಿತ ಗ್ರಾಮಗಳಲ್ಲಿ ನೀರಿನಲ್ಲಿ ಕೊಚ್ಚಿಬಂದ ಕಸ ಕಡ್ಡಿ, ರಾಡಿ ಎಷ್ಟು ತೊಳೆದರೂ ಮುಗಿಯುತ್ತಿಲ್ಲ. ಸಂತ್ರಸ್ತರಿಗೆ ಸ್ವಚ್ಛತಾ ಕಾರ್ಯ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Advertisement

ಪ್ರವಾಹ ಬಂದ ತಕ್ಷಣವೇ ಹಾಕಿದ ಬಟ್ಟೆಯಲ್ಲೇ ಹೋರಬಂದ ಸಂತ್ರಸ್ತರ ಮನೆಯಲ್ಲಿದ್ದ ಆಹಾರ ಪದಾರ್ಥ ಕೊಳೆತು ನಾರುತ್ತಿವೆ. ನದಿ ನೀರು ತಂದು ಬಿಟ್ಟ ಕಸ ವಿಲೇವಾರಿಯಾಗದೇ ಸಾಕ್ರಾಮೀಕ ರೋಗಗಳಿಗೆ ಆಹ್ವಾನ ನೀಡುತ್ತಿವೆ. ರಸ್ತೆ ಹಾಗೂ ಗ್ರಾಮದ ಒಳ ಸಂದಿ ಗೊಂದಿಗಳಲ್ಲಿ ಕಸ ತುಂಬಿ ತುಳುಕುತ್ತಿವೆ. ಗ್ರಾಮಗಳ ಜನತೆ ವಾರದಿಂದ ನಿರಂತರವಾಗಿ ತಮ್ಮ ತಮ್ಮ ಮನೆ ಸ್ವಚ್ಛ ಮಾಡಿ ರಾಡಿ ಹೊರಹಾಕುತ್ತಿದ್ದರೂ ಇನ್ನೂ ಪೂರ್ತಿ ಸ್ವಚ್ಛವಾಗುತ್ತಿಲ್ಲ. ದೊಡ್ಡ ದೊಡ್ಡ ಬಣವೆಗಳು ನೀರಿನಲ್ಲಿ ಮುಳುಗಿದ್ದರಿಂದ ವಟಾರದ ತುಂಬೆಲ್ಲ ನಾರುತ್ತಿದೆ.

ಊರಿನಲ್ಲಿದ್ದ ಎಲ್ಲ ಶುದ್ಧ ನೀರಿನ ಘಟಕಗಳು ಈಗ ಬಂದ್‌ ಆಗಿವೆ. ಪಂಚಾಯತ್‌ ಹಾಗೂ ದಾನಿಗಳಿಂದ ಟ್ಯಾಂಕರ್‌ ಮೂಲಕ ಬರುತ್ತಿರುವ ಕುಡಿಯುವ ನೀರಿಗಾಗಿ ಜನ ಮುಗಿ ಬೀಳುತ್ತಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಹೊಳೆಆಲೂರ ಗ್ರಾಮಕ್ಕೆ ಟ್ರ್ಯಾಕ್ಟರ್‌ ಮೂಲಕ 10 ಟ್ಯಾಂಕರ್‌ ನೀರನ್ನು ನೀಡಿದರೆ ಸಾಲುತ್ತಿಲ್ಲ.

ಕಂದಾಯ ಇಲಾಖೆಯವರು ಪ್ರತಿ ಮನೆಯನ್ನು ಭೇಟಿ ಮಾಡಿ ಸಮೀಕ್ಷೆ ಮಾಡುತ್ತಿದ್ದಾರೆ. ಇಲ್ಲಿನ ಬಹಳಷ್ಟು ಜನ ಬಾಡಿಗೆ ಅಂಗಡಿ ಹಾಗೂ ಮನೆಯಲ್ಲಿ ವಾಸವಾಗಿದ್ದು, ಅವರ ಬೆಲೆಬಾಳುವ ಎಲೆಕ್ಟ್ರಾನಿಕ್‌, ಧಾನ್ಯ, ಪೀಠೊಪಕರಣಗಳು, ಭಾಂಡೆ ಸಾಮಾನುಗಳು ನೀರು ಪಾಲಾಗಿವೆ. ನಮಗೂ ಪರಿಹಾರ ಕೊಡಿ ಎಂದು ಅಂಗಲಾಚುತ್ತಿದ್ದಾರೆ. ಅಲ್ಲದೇ ಕೊಡುವ 10 ಸಾವಿರ ರೂ. ಯಾವೂದಕ್ಕೂ ಸಾಲದು. ಹಾನಿ ಪ್ರಮಾಣ ನೋಡಿ ಪರಿಹಾರ ಮೊತ್ತ ಕೊಡಿ ಎನ್ನುತ್ತಿದ್ದಾರೆ.

ನರೆ ಹಾವಳಿಯಲ್ಲಿ ಹಾನಿಯಾಗಿರುವ ವಸ್ತುಗಳನ್ನು ಸರ್ಕಾರ ಹಾಗೂ ದಾನಿಗಳು ನೀಡುತ್ತಿದ್ದಾರೆ. ಆದರೆ ವಿಧ್ಯಾರ್ಥಿಗಳ ಹಾಗೂ ಉದ್ಯೋಗ ನಿರೀಕ್ಷೆಯಲ್ಲಿರುವವರ ಅಂಕಪಟ್ಟಿ, ವರ್ಗವಣೆ ಪ್ರಮಾಣ ಪತ್ರ, ಆಧಾರ್‌ ಕಾರ್ಡ್‌, ಚುನಾವಣಾ ಚೀಟಿ ಸೇರಿದಂತೆ ಮುಂತಾದ ಅಗತ್ಯ ದಾಖಲಾತಿಗಳು ಶಾಲಾ ಕಾಲೇಜಿನಲ್ಲಿ ಮತ್ತು ಮನೆಗಳಲ್ಲಿ ನೆರೆ ನೀರಿಗೆ ಹಾಳಾಗಿವೆ.

Advertisement

 

•ಯಚ್ಚರಗೌಡ ಗೋವಿಂದಗೌಡ್ರ

Advertisement

Udayavani is now on Telegram. Click here to join our channel and stay updated with the latest news.

Next