Advertisement

ಕಲಬುರಗಿ: ಪ್ರೊಬೆಷನರಿ KAS ಅಧಿಕಾರಿಗೆ IAS ಭಾಗ್ಯ; UPSCಯಲ್ಲಿ ರಾಜ್ಯಕ್ಕೆ 15ನೇ ರ‍್ಯಾಂಕ್

09:47 PM Aug 04, 2020 | Hari Prasad |

ಕಲಬುರಗಿ: ಕಳೆದ ಒಂದುವರೆ ತಿಂಗಳ ಹಿಂದೆಯಷ್ಟೇ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಪ್ರೊಬೆಷನರಿ ಕೆಎಎಸ್ ಅಧಿಕಾರಿಯಾಗಿರುವ ಬಂದಿರುವವರಿಗೆ ಈಗ ಐಎಎಸ್ ಭಾಗ್ಯ ಲಭಿಸಿದೆ.

Advertisement

ಮಂಗಳವಾರ ಪ್ರಕಟಗೊಂಡ ಪ್ರಸಕ್ತ ಯುಪಿಎಸ್‌ಸಿಯಲ್ಲಿ (ಕೇಂದ್ರ ಲೋಕಸೇವಾ ಆಯೋಗ) ಪರೀಕ್ಷೆಯಲ್ಲಿ ಪ್ರೋಬೆಷನರಿ ಕೆಎಎಸ್ ಅಧಿಕಾರಿಯಾಗಿ ಜಿಲ್ಲೆಯ ಕೊವಿಡ್ ನಿಯಂತ್ರಣ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಗದೀಶ ಅಡಹಳ್ಳಿ  440ನೇ ರ‍್ಯಾಂಕ್ ಗಳಿಸಿ ಉತ್ತೀರ್ಣರಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ (ಮೊದಲು ಅಥಣಿ) ತಾಲೂಕಿನ ಮೊಳೆ ಗ್ರಾಮದವರಾಗಿರುವ ಜಗದೀಶ ಅಡಹಳ್ಳಿ ಅವರು ಕೊನೆಯ ಆರನೇ ಪ್ರಯತ್ನದಲ್ಲಿ ಐಎಎಸ್ ಕನಸು ನನಸು ಮಾಡಿಕೊಂಡಿದ್ದಾರೆ.

ಯುಪಿಎಸ್‌ಯಲ್ಲಿ ಪ್ರಸಕ್ತ ರಾಜ್ಯಕ್ಕೆ 15ನೇ ರ‍್ಯಾಂಕ್ ಪಡೆದಿದ್ದಾರೆ. ಕಳೆದ 2019ರ ಕೆಎಎಸ್‌ ನಲ್ಲಿ 23ನೇ ರ‍್ಯಾಂಕ್ ಪಡೆದಿರುವ ಜಗದೀಶ ಅವರು ನವದೆಹಲಿಯ ವಾಜಿರಾಮ ಹಾಗೂ ರವಿ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ.

ಕಳೆದ ಒಂದುವರೆ ತಿಂಗಳಿನಿಂದ ಜಿಲ್ಲೆಯಲ್ಲಿ ಕೊವಿಡ್ ಕೇರ್ ಸೆಂಟರ್, ಚೆಕ್‌ ಪೊಸ್ಟ್ ಸೇರಿದಂತೆ ಕೊವಿಡ್ ನಿಯಂತ್ರಣದ ಕುರಿತಾಗಿಯೇ ಕಾರ್ಯನಿರ್ವಹಿಸುತ್ತಿದ್ದು, ಮಂಗಳವಾರ ಕೊವಿಡ್ ನಿಯಂತ್ರಣ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಸಂದರ್ಭದಲ್ಲೇ ಐಎಎಸ್‌ನಲ್ಲಿ ರ‍್ಯಾಂಕ್ ಪಡೆದಿರುವ ವಿಷಯವನ್ನು ಗೆಳೆಯರು ಜಗದೀಶ್ ಅವರಿಗೆ ತಿಳಿಸಿದ್ದಾರೆ.

Advertisement

ಜಗದಿಶ್ ಅವರ ತಂದೆ ವಾಹನ ಚಾಲಕರಾಗಿದ್ದಾರೆ. ಒಟ್ಟಾರೆಯಾಗಿ ತಮ್ಮ ಈ ಸಾಧನೆ ತಮ್ಮ ಅವಿರತ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಜಗದೀಶ್ ಅವರು ತಮ್ಮ ಸಂತೋಷವನ್ನು ಮಾದ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

ತಂದೆ-ತಾಯಿಯ ಆಶೀರ್ವಾದ ಹಾಗೂ ಐಎಎಸ್ ಪಾಸಾಗಬೇಕೆಂಬ ದೃಢ ಇಚ್ಚೆಯೇ ಇದನ್ನು ಸಾಕಾರಗೊಳಿಸಲು ಸಾಧ್ಯವಾಗಿದೆ ಎಂದು ತಿಳಿಸುವ ಜಗದೀಶ ಅಡಹಳ್ಳಿ ಅವರು, ಕಲಬುರಗಿಯಲ್ಲಿನ ಪ್ರೊಬೆಷನರಿ ಸೇವೆ ಸಾಕಷ್ಟು ಅನುಭವ ನೀಡಿದೆ ಎಂದು ಸ್ಮರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next