Advertisement
ಬರ್ದಾರ್ ತಾಲಿಬಾನ್ ಭಯೋತ್ಪಾದಕ ಸಂಘಟನೆಯ ಸಹ ಸ್ಥಾಪಕರಲ್ಲಿ ಒಬ್ಬನಾಗಿದ್ದಾನೆ. ಈತ ಉಗ್ರಗಾಮಿ ಸಂಘಟನೆಯ ರಾಜಕೀಯ ಕಚೇರಿಯ ಮುಖ್ಯಸ್ಥನಾಗಿದ್ದಾನೆ. ಮುಲ್ಲಾ ಬರ್ದಾರ್ ತಾಲಿಬಾನ್ ಸಂಘಟನೆಯ ಸ್ಥಾಪಕ ಮುಲ್ಲಾ ಓಮರ್ ನ ನಂಬಿಕಸ್ಥ ಕಮಾಂಡರ್ ಆಗಿದ್ದಾನೆ. 2010ರಲ್ಲಿ ದಕ್ಷಿಣ ಪಾಕಿಸ್ತಾನದ ಕರಾಚಿ ನಗರದಲ್ಲಿ ಬರ್ದಾರ್ ನಲ್ಲಿ ಭದ್ರತಾ ಪಡೆ ಸೆರೆ ಹಿಡಿದಿತ್ತು. ನಂತರ 2018ರಲ್ಲಿ ಬಿಡುಗಡೆಗೊಂಡಿದ್ದ.
Advertisement
2010ರಲ್ಲಿ ಪಾಕಿಸ್ತಾನದಲ್ಲಿ ಬರ್ದಾರ್ ನನ್ನು ಬಂಧಿಸಿದ ಮೇಲೆ ಅಮೆರಿಕ ಒತ್ತಡ ಹೇರಿ ಆತನನ್ನು 2018ರಲ್ಲಿ ಬಿಡುಗಡೆ ಮಾಡುವವರೆಗೂ ಜೈಲಿನಲ್ಲಿದ್ದ, ನಂತರ ಬರ್ದಾರ್ ಕತಾರ್ ಗೆ ಸ್ಥಳಾಂತರಗೊಂಡಿದ್ದ. ಅಲ್ಲಿ ಬರ್ದಾರ್ ನನ್ನು ತಾಲಿಬಾನ್ ರಾಜಕೀಯ ವ್ಯವಹಾರದ ಮುಖ್ಯಸ್ಥನನ್ನಾಗಿ ನೇಮಕ ಮಾಡಲಾಗಿತ್ತು.
ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದ:
2020ರ ಮಾರ್ಚ್ ನಲ್ಲಿ ಮೊದಲ ಬಾರಿಗೆ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಗ್ರ ಸಂಘಟನೆಯನ್ನು ಮಾತುತೆಗೆ ಆಹ್ವಾನಿಸಿದ್ದರು. ಈ ವೇಳೆ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವ ಕುರಿತ ಮಾತುಕತೆ ಹಿನ್ನೆಲೆಯಲ್ಲಿ ಟ್ರಂಪ್ ಬರ್ದಾರ್ ಜತೆ ದೂರವಾಣಿಯಲ್ಲಿ ಚರ್ಚಿಸಿದ್ದರು. 2020ರ ಫೆ.29ರಂದು ತಾಲಿಬಾನ್ ಜತೆ ಅಮೆರಿಕ ಮಾಡಿಕೊಂಡ ಒಪ್ಪಂದದ ಪ್ರಕಾರ ಹಿಂಸಾಚಾರವನ್ನು ಕಡಿಮೆಗೊಳಿಸುವ ಅಗತ್ಯವಿದೆ ಎಂದು ಟ್ರಂಪ್ ಅಭಿಪ್ರಾಯವ್ಯಕ್ತಪಡಿಸಿದ್ದರು.
ತಾಲಿಬಾನ್ ಗೆ ಬಹುದೊಡ್ಡ ಬೆಂಬಲ ದೊರೆತದ್ದು ಪಾಕಿಸ್ತಾನದಿಂದ…ತಾಲಿಬಾನಿಗಳು ಉಗ್ರರಲ್ಲ, ಹೋರಾಟಗಾರರು ಎಂದು ಪಾಕಿಸ್ತಾನದ ಪ್ರತಿಪಾದಿಸಿತ್ತು. ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ ವಿಶ್ಲೇಷಣೆ ಪ್ರಕಾರ, 1996ರ ವೇಳೆಗೆ ಪಾಕಿಸ್ತಾನದ ಬೆಂಬಲದ ಮೂಲಕ ತಾಲಿಬಾನ್ ಸೆಂಟ್ರಲ್ ಏಷ್ಯಾದಲ್ಲಿ ಬಲಿಷ್ಠವಾಗಿ ಬೆಳೆಯಬೇಕಾಗಿದ್ದು, ಇದಕ್ಕಾಗಿ ಶಸ್ತ್ರಾಸ್ತ್ರ, ಆಹಾರ ಮತ್ತು ಇಂಧನದ ಅಗತ್ಯವಿತ್ತು. 1994ರಲ್ಲಿ ಅಫ್ಘಾನಿಸ್ತಾನದ ಸ್ಪಿನ್ ಬೋಲ್ಡಕ್ ಪ್ರದೇಶ ತಾಲಿಬಾನ್ ಗೆ ಟರ್ನಿಂಗ್ ಪಾಯಿಂಟ್ ಆಗಿತ್ತು. ಸ್ಪಿನ್ ಬೋಲ್ಡಕ್ ಕಂದಹಾರ್ ಪ್ರಾಂತ್ಯದಲ್ಲಿರುವ ಪಾಕಿಸ್ತಾನ- ಅಫ್ಘಾನಿಸ್ತಾನ್ ಗಡಿಪ್ರದೇಶದ ನಗರವಾಗಿದೆ. ಈ ವೇಳೆ ತಾಲಿಬಾನ್ 800 ಟ್ರಕ್ ಲೋಡ್ ಗಳಷ್ಟು ಸೋವಿಯತ್ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಗುಹೆಯಲ್ಲಿ ಅಡಗಿಸಿಟ್ಟಿತ್ತು. ಅದಾಗಲೇ ಪಾಕಿಸ್ತಾನ ತಾಲಿಬಾನ್ ಗೆ ಶಸ್ತ್ರಾಸ್ತ್ರ, ಸ್ಫೋಟಕ ಮತ್ತು ಹಣಕಾಸು ನೆರವು ನೀಡಲು ಆರಂಭಿಸಿತ್ತು. ಇದರ ಪರಿಣಾಮ ದೇಶದಾದ್ಯಂತ ತಾಲಿಬಾನ್ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸಿತ್ತು.
ಪಾಕಿಸ್ತಾನದ ಮಾದರಿಯಲ್ಲೇ ಚೀನಾ ಕೂಡಾ ತಾಲಿಬಾನ್ ಗೆ ನಿಕಟವಾಗಿದೆ. ಅಫ್ಘಾನಿಸ್ತಾನದ ಆಡಳಿತವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ತಾಲಿಬಾನ್ ನ ಒಂಬತ್ತು ಮಂದಿ ಉನ್ನತ ಕಮಾಂಡರ್ ಗಳ ನಿಯೋಗದ ಜತೆ ಚೀನಾ ಸಭೆಯೊಂದನ್ನು ಆಯೋಜಿಸಿತ್ತು. ಉಗ್ರ ಬರ್ದಾರ್ ನೇತೃತ್ವದ ನಿಯೋಗ ಬೀಜಿಂಗ್ ನಿಂದ ನೂರು ಕಿಲೋ ಮೀಟರ್ ದೂರದಲ್ಲಿರುವ ಬಂದರು ನಗರವಾದ ಟಿಯಾನ್ ಜಿನ್ ನಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಯನ್ನು ಭೇಟಿಯಾಗಿ ಮಾತುಕತೆ ನಡೆಸಿತ್ತು.
ಕಾಬೂಲ್, ಸಂಸತ್ ತಾಲಿಬಾನ್ ಉಗ್ರರ ವಶಕ್ಕೆ:
ತಾಲಿಬಾನ್ ಉಗ್ರರು ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ಶಸ್ತ್ರಾಸ್ತ್ರದೊಂದಿಗೆ ಅಫ್ಘಾನ್ ಸಂಸತ್ ಅನ್ನು ಪ್ರವೇಶಿಸಿದ್ದಾರೆ. ಸರ್ಕಾರಿ ಕಟ್ಟಡ, ಕಚೇರಿ, ಸಂಸತ್ ಮೇಲೆ ತಾಲಿಬಾನ್ ಬಾವುಟ ರಾರಾಜಿಸತೊಡಗಿದೆ. ಇದೀಗ ಅಫ್ಘಾನಿಸ್ತಾನದಲ್ಲಿ ಮತ್ತೆ ಕೆಲವು ಮಾರ್ಪಾಡುಗಳೊಂದಿಗೆ ಷರಿಯಾ ಕಾನೂನು ಜಾರಿಗೊಳಿಸಲು ಸಿದ್ಧತೆ ನಡೆಸಿರುವುದಾಗಿ ವರದಿ ಹೇಳಿದೆ.
ಅಮೆರಿಕದ ಇತಿಹಾಸದಲ್ಲೇ ನಡೆದ ಅತೀ ದೊಡ್ಡ ಸೋಲು: ಟ್ರಂಪ್
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಕೈಮೇಲಾಗುವುದಕ್ಕೆ ಅವಕಾಶ ಮಾಡಿಕೊಟ್ಟ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 20 ವರ್ಷಗಳ ಬಳಿಕ ತಾಲಿಬಾನ್ ಮತ್ತೆ ಅಫ್ಘಾನಿಸ್ತಾನದ ಅಧಿಕಾರಿವನ್ನು ವಶಪಡಿಸಿಕೊಂಡಿದೆ.
2020ರಲ್ಲಿ ಡೊನಾಲ್ಡ್ ಟ್ರಂಪ್ ದೋಹಾದಲ್ಲಿ ನಡೆದ ಸಭೆಯಲ್ಲಿ ಅಮೆರಿಕ ತಾಲಿಬಾನ್ ಉಗ್ರರ ಜತೆ, 2021ರ ಮೇ ಒಳಗೆ ಎಲ್ಲಾ ಸೇನೆಯನ್ನು ಹಿಂಪಡೆಯುವುದಾಗಿ ವಿವಿಧ ಷರತ್ತುಗಳ ಮೂಲಕ ಒಪ್ಪಂದ ಮಾಡಿಕೊಂಡಿತ್ತು.
ಆದರೆ ಜೋ ಬೈಡೆನ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಸೇನೆ ಹಿಂಪಡೆಯುವ ಅವಧಿಯನ್ನು ಇನ್ನಷ್ಟು ಕಡಿತಗೊಳಿಸಿ, ಯಾವುದೇ ಷರತ್ತು ವಿಧಿಸದೇ ಜಾರಿಗೊಳಿಸಿದ್ದರು ಎಂದು ಟ್ರಂಪ್ ಕಿಡಿಕಾರಿದ್ದಾರೆ. ಜೋ ಬೈಡೆನ್ ಅಫ್ಘಾನಿಸ್ತಾನದ ವಿಚಾರದಲ್ಲಿ ಮಹತ್ತರವಾದ ಕೆಲಸ ಮಾಡಿಲ್ಲ. ಇದು ಅಮೆರಿಕದ ಇತಿಹಾಸದಲ್ಲಿ ಅತೀ ದೊಡ್ಡ ಸೋಲುಗಳಲ್ಲಿ ಒಂದಾಗಿದೆ ಎಂದು ಟ್ರಂಪ್ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.