ಮಂಗಳೂರು: ಕಾರ್‌ಸ್ಟ್ರೀಟ್‌ನ ಡಾ| ದಯಾನಂದ ಪೈ, ಡಾ| ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ| ರಾಜಶೇಖರ ಹೆಬ್ಬಾರ್ ಅವರಿಗೆ ಭಡ್ತಿ ನೀಡಿ ಶಿವಮೊಗ್ಗ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ ವರ್ಗಾವಣೆಗೊಳಿಸಲಾಗಿದೆ.
Advertisement
1986ರಲ್ಲಿ ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉಪನ್ಯಾಸಕರಾಗಿ ಸೇರ್ಪಡೆಯಾದ ಪ್ರೊ| ಹೆಬ್ಬಾರ್ , ಶಂಕರನಾರಾಯಣ ಕಾಲೇಜು, ಬಾರ್ಕೂರು ಕಾಲೇಜಿನಲ್ಲಿ ಪ್ರಭಾರ ಪ್ರಾಂಶುಪಾಲರಾಗಿದ್ದರು.
2014ರಲ್ಲಿ ಬೆಳ್ಳಾರೆ ಡಾ|ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದರು. 2015ರಿಂದ ಇಲ್ಲಿ ಪ್ರಾಂಶುಪಾಲರಾಗಿದ್ದಾರೆ.