ನವದೆಹಲಿ: ಇಲ್ಲಿನ ಪಶ್ಚಿಮ ವಿಹಾರದ ಗೋಡೆಗಳ ಮೇಲೆ ಬರೆಯಲಾಗಿದ್ದ ದೇಶವಿರೋಧಿ ಬರಹಗಳನ್ನು ದೆಹಲಿ ಪೊಲೀಸರು ಗುರುವಾರ ಅಳಿಸಿ ಹಾಕಿದ್ದಾರೆ.
Advertisement
“ಖಲಿಸ್ತಾನ ಜಿಂದಾಬಾದ್’, ರೆಫೆರೆಂಡಮ್ 2020′ ಎಂದು ಬರೆಯಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸ್ ವಕ್ತಾರೆ ಸುಮನ್ ನಲ್ವಾ, ಪ್ರತ್ಯೇಕ ಸಿಖ್ ರಾಷ್ಟ್ರಕ್ಕಾಗಿ ಆಗ್ರಹಿಸುವ ಖಲಿಸ್ತಾನ ಚಳವಳಿಯನ್ನು ಈಗಾಗಲೇ ನಿಷೇಧಿಸಲಾಗಿದೆ.
ಹಾಗೆಯೇ ಸಿಖ್ ಫಾರ್ ಜಸ್ಟೀಸ್ ಸಂಘಟನೆಯೂ ನಿಷೇಧಕ್ಕೊಳಗಾಗಿದೆ. ಕೆಲವು ವ್ಯಕ್ತಿಗಳು ಗೋಡೆಗಳ ಮೇಲೆ ದೇಶವಿರೋಧಿ ಹೇಳಿಕೆಗಳನ್ನು ಬರೆದಿದ್ದಾರೆ, ಆದರೆ ಇದರಿಂದ ಭದ್ರತೆಗೇನು ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆ.