Advertisement

ಪ್ರೊ ಕಬಡ್ಡಿ: ಯುಪಿ ಯೋಧಾಸ್‌, ಯು ಮುಂಬಾ ಗೆಲುವು

10:50 PM Nov 11, 2022 | Team Udayavani |

ಪುಣೆ: ಹರ್ಯಾಣ ಸ್ಟೀಲರ್ ತಂಡವನ್ನು 40-34 ಅಂಕಗಳಿಂದ ಉರುಳಿಸುವ ಮೂಲಕ ಯುಪಿ ಯೋಧಾಸ್‌ ಪ್ರೊ ಕಬಡ್ಡಿಯಲ್ಲಿ 6ನೇ ಗೆಲುವು ಸಾಧಿಸಿದೆ. ಹರ್ಯಾಣ 7ನೇ ಸೋಲುಂಡಿತು.

Advertisement

ಯೋಧಾಸ್‌ ರೈಡರ್‌ ಸುರೇಂದರ್‌ ಗಿಲ್‌ ಅವರ ಆಟವನ್ನು ನೆಚ್ಚಿಕೊಂಡಿತು. ಅವರು ಅತ್ಯಧಿಕ 11 ಅಂಕ ಗಳಿಸಿದರು. ನಾಯಕ ಪದೀಪ್‌ ನರ್ವಾಲ್‌ 8 ಅಂಕ ತಂದಿತ್ತರು. ಹರ್ಯಾಣ ತಂಡದಲ್ಲಿ ಮಂಜೀತ್‌ ಮಿಂಚಿನ ಪ್ರದರ್ಶನವಿತ್ತರು. ಇವರ ಗಳಿಕೆ 12 ಅಂಕ. ಪ್ರದೀಪ್‌ ನರ್ವಾಲ್‌ 17 ಬಾರಿ ಹರ್ಯಾಣ ಕೋಟೆಗೆ ನುಗ್ಗಿದರು. 6 ಬಾರಿ ಅದನ್ನು ಭೇದಿಸಲು ಯಶಸ್ವಿಯಾದರು. ಸುರೇಂದರ್‌ ಗಿಲ್‌ 16 ಬಾರಿ ದಾಳಿ ಮಾಡಿದರು. ಇದರಲ್ಲಿ 7 ಬಾರಿ ಯಶಸ್ವಿಯಾಗಿ 11 ಅಂಕ ಪಡೆದರು.

ಮುಂಬಾಗೆ ರೋಚಕ ಜಯ
ಯು ಮುಂಬಾ ಮತ್ತು ಅಗ್ರಸ್ಥಾನಿ ಪುನೇರಿ ಪಲ್ಟಾನ್ಸ್‌ ನಡುವಿನ ದ್ವಿತೀಯ ಪಂದ್ಯ ಅತ್ಯಂತ ರೋಚಕವಾಗಿತ್ತು. ಇದನ್ನು ಮುಂಬಾ 34-33 ಅಂತರದಿಂದ ಜಯಿಸಿತು. ಮುಂಬಾ ಪರ ಗುಮಾನ್‌ ಸಿಂಗ್‌ (13 ಅಂಕ) ಮತ್ತು ಪುನೇರಿ ಪರ ಮೋಹಿತ್‌ ಗೋಯತ್‌ (13 ಅಂಕ) ಉತ್ತಮ ಆಟವಾಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next