Advertisement

ಪ್ರೊ ಕಬಡ್ಡಿ: ಮೊದಲ ಸೋಲನುಭವಿಸಿದ ದಬಾಂಗ್‌ ದಿಲ್ಲಿ

10:12 PM Jan 10, 2022 | Team Udayavani |

ಬೆಂಗಳೂರು: ದಬಾಂಗ್‌ ದಿಲ್ಲಿ ಪ್ರಸಕ್ತ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಮೊದಲ ಸೋಲ ನುಭವಿಸಿದೆ. ಅಗ್ರಸ್ಥಾನಿಯಾಗಿದ್ದ ದಿಲ್ಲಿಯನ್ನು ಸೋಮವಾರದ ಮುಖಾಮುಖಿಯಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ 30-28 ಅಂತರದಿಂದ ಕೆಡವಿತು.

Advertisement

ಪಂದ್ಯ ಕೊನೆಯ ತನಕ ರೋಚಕ ವಾಗಿ ಸಾಗಿತು. ಒಂದೆರಡು ಅಂಕಗಳ ಅಂತರದಲ್ಲಿ ಜೈಪುರ್‌ ಮೇಲುಗೈ ಹೊಂದಿತ್ತು. ಇದನ್ನು ಮೀರಿ ನಿಲ್ಲಲು ದಿಲ್ಲಿಯಿಂದಾಗಲಿಲ್ಲ.

ಜೈಪುರ್‌ ಪರ ಆಲ್‌ರೌಂಡರ್‌ ದೀಪಕ್‌ ಹೂಡಾ 9 ಅಂಕ ಗಳಿಸಿ ರೈಡಿಂಗ್‌ನಲ್ಲಿ ಒಟ್ಟು 900 ಅಂಕ ಸಂಪಾದಿಸಿದ ಸಾಧನೆಗೈದರು. ಆಲ್‌ರೌಂಡರ್‌ ಸಾಹುಲ್‌ ಕುಮಾರ್‌ 8, ರೈಡರ್‌ ಅರ್ಜುನ್‌ ದೇಶ್ವಾಲ್‌ 7 ಅಂಕ ತಂದಿತ್ತರು. ಇದು 8 ಪಂದ್ಯಗಳಲ್ಲಿ ಜೈಪುರ್‌ ಸಾಧಿಸಿದ 4ನೇ ಜಯ. ದಿಲ್ಲಿ ಪರ ಆಶು ಮಲಿಕ್‌ (8), ನವೀನ್‌ ಕುಮಾರ್‌ (7), ಮಂಜೀತ್‌ ಚಿಲ್ಲಾರ್‌ (4) ಉತ್ತಮ ಪ್ರದರ್ಶನವಿತ್ತರು.

ತಮಿಳ್‌ಗೆ 3ನೇ ಗೆಲುವು
ದಿನದ ಮೊದಲ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ 45-26 ಅಂಕಗಳಿಂದ ಹರ್ಯಾಣ ಸ್ಟೀಲರ್ಸ್‌ಗೆ ಸೋಲುಣಿಸಿ ಕೂಟದಲ್ಲಿ ತನ್ನ 3ನೇ ಗೆಲುವು ದಾಖಲಿಸಿತು.

ತಲೈವಾಸ್‌ನ ಈ ಭರ್ಜರಿ ಗೆಲುವಿನಲ್ಲಿ ರೈಡರ್‌ ಮನ್‌ಜಿàತ್‌, ನಾಯಕ ಸುರ್ಜೀತ್‌ ಸಿಂಗ್‌ ಕೊಡುಗೆ ಮಹತ್ವದ್ದಾಗಿತ್ತು. ಮನ್‌ಜಿàತ್‌ 16 ರೈಡ್‌ ನಡೆಸಿ 10 ಅಂಕ ತಂದುಕೊಟ್ಟರು. ಸುರ್ಜೀತ್‌ ಗಳಿಕೆ 8 ಅಂಕ.

Advertisement
Advertisement

Udayavani is now on Telegram. Click here to join our channel and stay updated with the latest news.

Next