Advertisement

ಪ್ರೊ ಕಬಡ್ಡಿ: ಮುಳುಗಿದ ಟೈಟಾನ್ಸ್‌

06:00 AM Nov 27, 2018 | |

ಪುಣೆ: ಇಲ್ಲಿನ ಶಿವಛತ್ರಪತಿ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಆರನೇ ಆವೃತ್ತಿ ಬೆಂಗಳೂರು ಬುಲ್ಸ್‌ ನ ಪುಣೆ ಚರಣದಲ್ಲಿ ತಮಿಳ್‌ ತಲೈವಾಸ್‌ 31-25 ಅಂಕಗಳಿಂದ ತೆಲುಗು ಟೈಟಾನ್ಸ್‌ ವಿರುದ್ಧ ಜಯ ಕಂಡಿದೆ.

Advertisement

ಫಾರ್ಮ್ಗೆ ಬಂದ ಮಂಜಿತ್‌: ತಮಿಳ್‌ ತಲೈವಾಸ್‌ ಪ್ರಸ್ತುತ ಕೂಟದಲ್ಲಿ ಸತತ ಸೋಲು ಅನುಭವಿಸಿದೆ. “ಬಿ’ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದೆ. ಅಂತಹ ತಂಡ ಸೋಮವಾರದ ಆಟದಲ್ಲಿ ಅದ್ಭುತ ಆಟವಾಡಿತು. ಇದಕ್ಕೆ ಕಾರಣ ಮಂಜಿತ್‌ ಚಿಲ್ಲಾರ್‌ ( 7 ಅಂಕ) ಫಾರ್ಮ್. ಕಳೆದ ಕೆಲವು ಪಂದ್ಯಗಳಲ್ಲಿ ಮಂಜಿತ್‌ ಕಳಪೆ ಆಟ ಪ್ರದರ್ಶಿಸಿದ್ದರು. ಈ ಪಂದ್ಯದಲ್ಲಿ ಮಂಜಿತ್‌  ಭರ್ಜರಿ 7 ಟ್ಯಾಕಲ್‌ ನಡೆಸಿದರು. ಸುಬ್ರಹ್ಮಣ್ಯನ್‌ ಕೂಡ (7 ಅಂಕ) ಟ್ಯಾಕಲ್‌ ನಡೆಸಿದರು. ಅಜಯ್‌ ಕುಮಾರ್‌ (7 ಅಂಕ) ಹಾಗೂ ಸುಕೇಶ್‌ ಹೆಗ್ಡೆ (4 ಅಂಕ) ರೈಡಿಂಗ್‌ನಲ್ಲಿ ಅಂಕ ತಂದರು. ತೆಲುಗು ಟೈಟಾನ್ಸ್‌ ಪರ ರಾಹುಲ್‌ ಚೌಧರಿ (6 ಅಂಕ) ಸೇರಿದಂತೆ ಎಲ್ಲ ಆಟಗಾರರು ವಿಫ‌ಲರಾದರು.

Advertisement

Udayavani is now on Telegram. Click here to join our channel and stay updated with the latest news.

Next