Advertisement

ಪ್ರೊ ಕಬಡ್ಡಿ: ತೆಲುಗು ಟೈಟಾನ್‌ಗೆ ಏಳನೇ ಸೋಲು

10:13 PM Jan 15, 2022 | Team Udayavani |

ಬೆಂಗಳೂರು: ಪ್ರಸಕ್ತ ಋತುವಿನ ಪ್ರೊ ಕಬಡ್ಡಿಯಲ್ಲಿ ಈವರೆಗೆ ಗೆಲುವಿನ ಮುಖ ಕಾಣುವಲ್ಲಿ ವಿಫ‌ಲವಾದ ತೆಲುಗು ಟೈಟಾನ್ಸ್‌ 7ನೇ ಸೋಲಿನೊಂದಿಗೆ ದಿಕ್ಕು ತಪ್ಪಿದೆ.

Advertisement

ಶನಿವಾರದ ಮುಖಾಮುಖಿಯಲ್ಲಿ ಯುಪಿ ಯೋಧ 39-33 ಅಂತರದಿಂದ ಟೈಟಾನ್ಸ್‌ಗೆ ಆಘಾತವಿಕ್ಕಿತು. ಇದು ಟೈಟಾನ್ಸ್‌ನ 9ನೇ ಪಂದ್ಯ.ಉಳಿದೆರಡು ಪಂದ್ಯಗಳನ್ನು ಅದು ಟೈ ಮಾಡಿಕೊಂಡಿದೆ.

ಯುಪಿ ಪರ ಶ್ರೀಕಾಂತ್‌ ಜಾಧವ್‌, ಸುರೇಂದರ್‌ ಗಿಲ್‌, ನಿತೀಶ್‌ ಕುಮಾರ್‌ ಸಾಂ ಕ ಪ್ರದರ್ಶನ ನೀಡಿ ತಲಾ 7 ಅಂಕ ಗಳಿಸಿ ಕೊಟ್ಟರು. ತೆಲುಗು ಟೈಟಾನ್ಸ್‌ನ ರೈಡರ್‌ಗಳಾದ ರಜನೀಶ್‌ ಮತ್ತು ಅಂಕಿತ್‌ ಬೇನಿವಾಲ್‌ (ತಲಾ 9 ಅಂಕ) ಉತ್ತಮ ಹೋರಾಟ ನೀಡಿದರೂ ತಂಡವನ್ನು ದಡ ಸೇರಿಸುವಲ್ಲಿ ವಿಫ‌ಲರಾದರು.

ಅಂತಿಮ ಕ್ಷಣದಲ್ಲಿ ಗೆದ್ದ ದಿಲ್ಲಿ
ದಿನದ ಮೊದಲ ಪಂದ್ಯದಲ್ಲಿ ವಿಜಯ್‌ ಕುಮಾರ್‌ ಅವರ ಸೂಪರ್‌ ರೈಡಿಂಗ್‌ ಸಾಹಸದಿಂದ ಹರ್ಯಾಣ ಸ್ಟೀಲರ್ ವಿರುದ್ಧ ದಬಾಂಗ್‌ ದಿಲ್ಲಿ 28-25 ಅಂತರದಿಂದ ಗೆಲುವು ಸಾಧಿಸಿ ಮತ್ತೆ ಹಳಿ ಏರಿತು.

ಪಂದ್ಯದ ಮುಕ್ತಾಯಕ್ಕೆ ಇನ್ನೇನು ಒಂದು ನಿಮಿಷ ಬಾಕಿ ಇರುವಾಗ 2 ಅಂಕದಮುನ್ನಡೆ ಹೊಂದಿದ್ದ ಹರ್ಯಾಣ ತನ್ನ ಅತಿಯಾದ ಆತ್ಮವಿಶ್ವಾಸದ ಆಟಕ್ಕಿಳಿದು ಕೈ ಸುಟ್ಟುಕೊಂಡಿತು.

Advertisement

ಇದನ್ನೂ ಓದಿ:ಸರಣಿ ಸೋಲಿನ ಬೆನ್ನಲ್ಲೇ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ

ಗಾಯದ ಸಮಸ್ಯೆಯಿಂದ ಚೇತರಿಸಿ ಆಡಲಿಳಿದ ನವೀನ್‌ ಕುಮಾರ್‌ ಅಷ್ಟೇನೂ ಯಶಸ್ವಿಯಾಗಲಿಲ್ಲ. ಅವರು ಕೇವಲ 5 ಅಂಕಕ್ಕೆ ಸೀಮಿತರಾದರು. ಆದರೆ ಮತ್ತೋರ್ವ ರೈಡರ್‌ ವಿಜಯ್‌ ಕುಮಾರ್‌ 11 ಅಂಕ ಕಲೆಹಾಕಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹರ್ಯಾಣ ಪರ ಆಶಿಷ್‌, ಮೀತೂ ರೈಡಿಂಗ್‌ನಲ್ಲಿ ತಲಾ 5 ಅಂಕ ಸಂಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next