ಪುಣೆ: ಪ್ರಚಂಡ ಫಾರ್ಮ್ ಮುಂದುವರಿಸಿದ ಆತಿಥೇಯ ಪುನೇರಿ ಪಲ್ಟಾನ್ಸ್ ಶುಕ್ರವಾರದ ಪ್ರೊ ಕಬಡ್ಡಿ ಮುಖಾಮುಖಿಯಲ್ಲಿ 41-28 ಅಂಕಗಳ ಅಂತರದಿಂದ ಹರ್ಯಾಣ ಸ್ಟೀಲರ್ ಗೆ ಸೋಲುಣಿಸಿ ಮೇಲೇರಿತು.
ಇದು 15 ಪಂದ್ಯಗಳಲ್ಲಿ ಪುನೇರಿ ಸಾಧಿಸಿದ 9ನೇ ಗೆಲುವು. ಹರ್ಯಾಣ ಇಷ್ಟೇ ಪಂದ್ಯಗಳಲ್ಲಿ 8ನೇ ಸೋಲನುಭವಿಸಿತು.
ಪುನೇರಿ ಜಯದಲ್ಲಿ ಮಹತ್ವದ ಪಾತ್ರ ವಹಿಸಿದವರು ರೈಡರ್ಗಳಾದ ಅಸ್ಲಾಮ್ ಇನಾಮಾªರ್ ಮತ್ತು ಮೋಹಿತ್ ಗೋಯತ್. ಇಬ್ಬರೂ ತಲಾ 10 ಅಂಕ ಗಳಿಸಿ ಕೊಟ್ಟರು. ಮತ್ತೋರ್ವ ರೈಡರ್ ಆಕಾಶ್ ಶಿಂಧೆ 7 ಅಂಕ ತಂದಿತ್ತರು. ನಾಯಕ ಫಜಲ್ ಅಟ್ರಾಚಲಿ ಗಳಿಕೆ 4 ಅಂಕ.
ಹರ್ಯಾಣ ಆಕ್ರಮಣಕಾರಿ ಆಟವಾಡಲು ವಿಫಲವಾಯಿತು. ರೈಡರ್ ಮೀತು ಶರ್ಮ ನಾಲ್ಕಂಕ ಗಳಿಸಿದ್ದೇ ಅತ್ಯುತ್ತಮ ಸಾಧನೆ.
Related Articles
ಟೈಟಾನ್ಸ್ಗೆ 14ನೇ ಸೋಲು
ದ್ವಿತೀಯ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ 36-28 ಅಂಕಗಳಿಂದ ತೆಲುಗು ಟೈಟಾನ್ಸ್ ತಂಡವನ್ನು ಮುಳುಗಿಸಿತು. ಇದು 15 ಪಂದ್ಯಗಳಲ್ಲಿ ಟೈಟಾನ್ಸ್ ಅನುಭವಿಸಿದ 14ನೇ ಸೋಲು. ಬೆಂಗಾಲ್ 7ನೇ ಜಯ ದಾಖಲಿಸಿತು.