Advertisement

ಪ್ರೊ ಕಬಡ್ಡಿ ಪಂದ್ಯ: ಪುನೇರಿ ಪಲ್ಟಾನ್ಸ್‌ಗೆ ಅಚ್ಚರಿಯ ಸೋಲು

11:16 PM Nov 29, 2022 | Team Udayavani |

ಹೈದರಾಬಾದ್‌: ಮಂಗಳ ವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಪುನೇರಿ ಪಲ್ಟಾನ್ಸ್‌ 39-51 ಅಂತರದ ಅಚ್ಚರಿಯ ಸೋಲುಂಡಿದೆ. ಆದರೆ ಇದರಿಂದ ಪುನೇರಿಯ ಅಗ್ರಸ್ಥಾನ ಕ್ಕೇನೂ ಧಕ್ಕೆಯಾಗಿಲ್ಲ.

Advertisement

ಇದು 19 ಪಂದ್ಯಗಳಲ್ಲಿ ಪುನೇರಿಗೆ ಎದುರಾದ ಕೇವಲ 5ನೇ ಆಘಾತ. ಇನ್ನೊಂದೆಡೆ ಗುಜರಾತ್‌ 18 ಪಂದ್ಯ ಗಳಲ್ಲಿ 6ನೇ ಗೆಲುವು ಸಾಧಿಸಿತು.

ಸರ್ವಾಧಿಕ 19 ಅಂಕ ಗಳಿಸಿದ ಆಲ್‌ರೌಂಡರ್‌ ಪ್ರತೀಕ್‌ ದಹಿಯಾ ಗುಜರಾತ್‌ ತಂಡದ ಹೀರೊ ಎನಿಸಿದರು. ರೈಡರ್‌ ಸೋನು 6, ಮತ್ತೋರ್ವ ರೈಡರ್‌ ಚಂದ್ರನ್‌ ರಂಜಿತ್‌ ಮತ್ತು ಆಲ್‌ರೌಂಡರ್‌ ಅರ್ಕಮ್‌ ಶೇಖ್‌ ತಲಾ 5 ಅಂಕ ಗಳಿಸಿದರು.

ಪುನೇರಿ ಪರ ರೈಡರ್‌ಗಳಾದ ಆಕಾಶ್‌ ಶಿಂಧೆ 9, ಪಂಕಜ್‌ ಮೋಹಿತೆ 6 ಅಂಕ ತಂದಿತ್ತರು. ರೈಡರ್‌ ಅಸ್ಲಾಮ್‌  ಕೂಡ 6 ಅಂಕ ಗಳಿಸಿದರು.

ಹರ್ಯಾಣ ಗೆಲುವು
ದ್ವಿತೀಯ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಹರ್ಯಾಣ ಸ್ಟೀಲರ್ 35-33 ಅಂಕಗಳ ರೋಚಕ ಜಯ ದಾಖಲಿಸಿತು. ಮನ್‌ಜಿàತ್‌, ಮೋಹಿತ್‌ ನಂದಲ್‌ (ತಲಾ 7 ಅಂಕ), ರಾಕೇಶ್‌ ನರ್ವಾಲ್‌ (6 ಅಂಕ) ಹರ್ಯಾಣ ಪರ ಉತ್ತಮ ಪ್ರದರ್ಶನ ನೀಡಿದರು. ಇದು 18 ಪಂದ್ಯಗಳಲ್ಲಿ ಹರ್ಯಾಣ ಸಾಧಿಸಿದ 7ನೇ ಗೆಲುವು.

Advertisement

ಮುಂಬಾ 18ನೇ ಮುಖಾಮುಖಿಯಲ್ಲಿ 9ನೇ ಸೋಲನುಭವಿಸಿತು. ರೈಡರ್‌ಗಳಾದ ಆಶಿಷ್‌, ಜೈ ಭಗವಾನ್‌, ನಾಯಕ ರಿಂಕು (ತಲಾ 6 ಅಂಕ) ಮಾತ್ರ ಮಿಂಚಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next