Advertisement

ಪ್ರೊ ಕಬಡ್ಡಿ: ಪವನ್‌ ದಾಳಿಗೆ ಬೆಚ್ಚಿಬಿದ್ದ ಗುಜರಾತ್‌

10:25 PM Jan 14, 2022 | Team Udayavani |

ಬೆಂಗಳೂರು: ಪ್ರೊ ಕಬಡ್ಡಿ 8ನೇ ಆವೃತ್ತಿಯಲ್ಲಿ ಪವನ್‌ ಸೆಹ್ರಾವತ್‌ ನಾಯಕತ್ವದ ಬೆಂಗಳೂರು ಬುಲ್ಸ್‌ ಮತ್ತೆ ಅಗ್ರಸ್ಥಾನಕ್ಕೇರಿದೆ.

Advertisement

ಅದು 46-37 ಅಂಕಗಳಿಂದ ಗುಜರಾತ್‌ ಜೈಂಟ್ಸ್‌ ತಂಡವನ್ನು ಸೋಲಿಸಿದೆ. ಪಂದ್ಯವಿಡೀ ಬೆಂಗಳೂರು ತನ್ನ ಪ್ರಾಬಲ್ಯವನ್ನು ಮುಂದುವರಿಸಿತು.

ಮೊದಲ ಇಪ್ಪತ್ತು ನಿಮಿಷಗಳಲ್ಲಿ ಬೆಂಗಳೂರು 22, ಗುಜರಾತ್‌ 17 ಅಂಕ ಗಳಿಸಿತ್ತು.

ದ್ವಿತಿಯಾರ್ಧದಲ್ಲೂ ಮುನ್ನಡೆ ಬಿಟ್ಟು ಕೊಡದ ಬೆಂಗಳೂರು ಮೇಲುಗೈ ಸಾಧಿಸಿತು. ಬೆಂಗಳೂರು ಪರ ನಾಯಕ ಸೆಹ್ರಾವತ್‌ ಏಕವ್ಯಕ್ತಿ ಪ್ರದರ್ಶನ ತೋರಿದರು ಒಟ್ಟು 27 ಬಾರಿ ಎದುರಾಳಿ ಕೋಟೆಯೊಳಗೆ ನುಗ್ಗಿ 19 ಅಂಕ ಗಳಿಸಿದರು. ಇವರ ಅದ್ಭುತ ಆಟ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಯಶಸ್ಸು ಸಾಧಿಸಿದ ಇನ್ನೊಬ್ಬ ದಾಳಿಗಾರ ಭರತ್‌. ಅವರು 9 ದಾಳಿಗಳಲ್ಲಿ 9 ಅಂಕ ಗಳಿಸಿದರು.

ಇದನ್ನೂ ಓದಿ:ಒನ್‌ಪ್ಲಸ್‌ 9ಆರ್‌ಟಿ ಬಿಡುಗಡೆ; 50 ಮೆಗಾಪಿಕ್ಸೆಲ್‌ ಟ್ರಿಪಲ್‌ ಕ್ಯಾಮೆರಾ ಸೌಲಭ್ಯ

Advertisement

ಗುಜರಾತ್‌ ಪರ ರಾಕೇಶ್‌ ಉತ್ತಮ ನಿರ್ವಹಣೆ ತೋರಿದರು. ಅವರು 21 ದಾಳಿಗಳಲ್ಲಿ 14 ಅಂಕ ಗಳಿಸಿದರು. ರಕ್ಷಣಾ ವಿಭಾಗದಲ್ಲಿ ಸುನಿಲ್‌ ಕುಮಾರ್‌, ಪರ್ವೇಶ್‌ ಭೈನ್ಸಾ$Ìಲ್‌ ಉತ್ತಮ ಆಟವಾಡಿದರು. ಇಬ್ಬರೂ ತಲಾ 4 ಅಂಕ ಗಳಿಸಿದರು.

ದ್ವಿತೀಯ ಸ್ಥಾನಕ್ಕಿಳಿದ ಪಾಟ್ನಾ
ದಿನದ ಮೊದಲ ಪಂದ್ಯದಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ ಪ್ರಶಾಂತ್‌ ರೈ ಸಾರಥ್ಯದ ಪಾಟ್ನಾ ಪೈರೆಟ್ಸ್‌ ವಿರುದ್ಧ 38-28 ಅಂತರದಿಂದ ಗೆಲುವು ಸಾಧಿಸಿತು. ಪಾಟ್ನಾ ಈ ಸೊಲಿನೊಂದಿಗೆ ಅಗ್ರಸ್ಥಾನದಿಂದ ಕೆಳಗಿಳಿದು ದ್ವಿತೀಯ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next