Advertisement

ಪ್ರೊ ಕಬಡ್ಡಿ 8ನೇ ಆವೃತ್ತಿ: ಅಗ್ರಸ್ಥಾನಕ್ಕೇರಿದ ಪಾಟ್ನಾ ಪೈರೇಟ್ಸ್‌

10:51 PM Jan 11, 2022 | Team Udayavani |

ಬೆಂಗಳೂರು: ಕನ್ನಡಿಗ ಪ್ರಶಾಂತ್‌ ಕುಮಾರ್‌ ರೈ ನಾಯಕತ್ವದ ಪಾಟ್ನಾ ಪೈರೇಟ್ಸ್‌ ತಂಡ ಪ್ರೊ ಕಬಡ್ಡಿ 8ನೇ ಆವೃತ್ತಿಯಲ್ಲಿ ಅಗ್ರಸ್ಥಾನಕ್ಕೇರಿದೆ.

Advertisement

ಇದರ ಪರಿಣಾಮ ದಬಾಂಗ್‌ ಡೆಲ್ಲಿ, ಬೆಂಗಳೂರು ಬುಲ್ಸ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ಕುಸಿದಿವೆ.

ಮಂಗಳವಾರ ನಡೆದ ಪಂದ್ಯದಲ್ಲಿ ಪಾಟ್ನಾ ತಂಡ 43-23 ಅಂಕಗಳಿಂದ ಯು ಮುಂಬಾ ತಂಡವನ್ನು ಸೋಲಿಸಿತು.

ಪಂದ್ಯದ ಆರಂಭದಿಂದಲೇ ಪಾಟ್ನಾ ಪೈರೇಟ್ಸ್‌ ಮುನ್ನಡೆ ಸಾಧಿಸಿತ್ತು. ಇದನ್ನು ಸರಿದೂಗಿ ಸ ಲು ಮುಂಬಾಗೆ ಆಗಲೇ ಇಲ್ಲ. ಮೊದಲ ಇಪ್ಪತ್ತು ನಿಮಿಷಗಳಲ್ಲಿ ಪಾಟ್ನಾ 19, ಮುಂಬಾ ಕೇವಲ 9 ಅಂಕ ಗಳಿಸಿತ್ತು. ಬಾಕಿ ಇಪ್ಪತ್ತು ನಿಮಿಷಗಳಲ್ಲಿ ಮುಂಬಾ ತುಸು ಸುಧಾರಿತ ಆಟವಾಡಿತು.

ಹಾಗಿದ್ದರೂ ಪಾಟ್ನಾ 24, ಮುಂಬಾ 14 ಅಂಕ ಗಳಿಸಿತು. ಒಟ್ಟಾರೆ ಎರಡೂ ಅವಧಿಗಳಲ್ಲಿ ಮೆರೆದ ಪಾಟ್ನಾ ತಂಡ ನಿರ್ಣಾಯಕವಾಗಿ 20 ಅಂಕಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು.

Advertisement

ಪಾಟ್ನಾ ರಕ್ಷಣೆಯಲ್ಲಿ ಅದು ಭರ್ಜರಿ ಯಶಸ್ಸು ಸಾಧಿಸಿತು. ಆ ತಂಡದ ರಕ್ಷಣಾ ಆಟಗಾರ ನೀರಜ್‌ ಕುಮಾರ್‌ 10 ಬಾರಿ ಎದುರಾಳಿಯನ್ನು ಟ್ಯಾಕಲ್‌ ಮಾಡಲು ಯತ್ನಿಸಿದರು. ಅದರಲ್ಲಿ 8 ಬಾರಿ ಯಶಸ್ವಿಯಾಗಿ 8 ಅಂಕ ಸಂಪಾದಿಸಿದರು. ಇನ್ನು ರೈಡಿಂಗ್‌ ನಲ್ಲಿ ನಾಯಕ ಪ್ರಶಾಂತ್‌ ಕುಮಾರ್‌ ಅತ್ಯುತ್ತಮ ಯಶಸ್ಸು ಸಾಧಿಸಿದರು. ಅವರು 7 ಬಾರಿ ಮುಂಬಾ ಕೋಟೆ ಪ್ರವೇಶಿಸಿ 7 ಅಂಕ ಸಂಪಾದಿಸಿದರು. ಸಚಿನ್‌ ಕೂಡ 7 ಅಂಕ ಸಂಪಾದಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಇನ್ನೂ ಗೆಲು ವಿನ ಖಾತೆ ತೆರೆಯaದ ತೆಲುಗು ಟೈಟಾನ್ಸ್‌ ತಂಡ ಗುಜರಾತ್‌ ವಿರುದ್ಧ 22-40 ಅಂತರದ ಹೀನಾಯ ಸೋಲು ಕಂಡಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next