Advertisement

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

10:49 PM Jan 16, 2022 | Team Udayavani |

ಬೆಂಗಳೂರು: ಹ್ಯಾಟ್ರಿಕ್‌ ಗೆಲುವಿನ ಇರಾದೆಯೊಂದಿಗೆ ಆಡಲಿಳಿದ ಬೆಂಗಳೂರು ಬುಲ್ಸ್‌ ಕನ್ನಡಿಗ ಪ್ರಶಾಂತ್‌ ಕುಮಾರ್‌ ರೈ ಸಾರಥ್ಯದ ಪಾಟ್ನಾ ಪೈರೇಟ್ಸ್‌ ವಿರುದ್ಧ 38-31ಅಂತರದಿಂದ ಸೋಲನುಭವಿಸಿತು.

Advertisement

ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಡವಾಡಿದ ಪಾಟ್ನಾ ರೈಡಿಂಗ್‌ ಮತ್ತು ಟ್ಯಾಕಲ್ಸ್‌ನಲ್ಲಿ ಸರ್ವಾಂಗಿಣ ಪ್ರದರ್ಶನ ತೋರಿತು. ಪಾಟ್ನಾ ಪರ ಸುನೀಲ್‌ (9), ಸಚಿನ್‌ (8) ಗುಮಾನ್‌ ಸಿಂಗ್‌(7) ಅಂಕ ಗಳಿಸಿ ಮಿಂಚಿದರು.
ಬುಲ್ಸ್‌ ನಾಯಕ ಪವನ್‌ ಹೆಚ್ಚು ಕಾಲ ಅಂಕಣದಲ್ಲಿ ಇರ ದಿದ್ದುದು ತಂಡದ ಸೋಲಿಗೆ ಪ್ರಮುಖ ಕಾರಣ. ಅವರು 40 ನಿಮಿಷದ ಆಟದಲ್ಲಿ ಕೇವಲ 15 ರೈಡ್‌ಗಳನ್ನು ಮಾಡಿ ಹತ್ತು ಅಂಕಕ್ಕಷ್ಟೆ ಸೀಮಿತರಾದರೂ ಇನ್ನೋರ್ವ ರೈಡರ್‌ ಚಂದ್ರನ್‌ ರಂಜಿತ್‌ (3) ಕೂಡ ರೈಡಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದರು.

ಟೈ ಮಾಡಿಕೊಂಡ ಜೈಪುರ್‌
ಸತತ 4ನೇ ಗೆಲುವಿನ ಕನಸು ಕಾಣುತ್ತಿದ್ದ ಜೈಪುರ್‌ ಪಿಂಕ್‌ ಪ್ಯಾಂಥರ್ ರವಿವಾರದ ಮೊದಲ ಪ್ರೊ ಕಬಡ್ಡಿ ಮುಖಾಮುಖೀಯಲ್ಲಿ ತಮಿಳ್‌ ತಲೈವಾಸ್‌ ವಿರುದ್ಧ 31-31 ಅಂತರದಿಂದ ಟೈ ಸಾಧಿಸಿದೆ. ಜೈಪುರಕ್ಕೆ ಇದು ಮೊದಲ ಟೈ ಫ‌ಲಿತಾಂಶವಾದರೆ, ತಲೈವಾಸ್‌ಗೆ ಐದನೆಯದು.

ತಮಿಳ್‌ ಕೊನೆಯ ಹಂತದಲ್ಲಿ 2 ಅಂಕಗಳ ಮುನ್ನಡೆಯಲ್ಲಿತ್ತು. ಅಂತಿಮ ಡು ಆರ್‌ ಡೈನಲ್ಲಿ ರೈಡ್‌ ಮಾಡಿದ ಮನ್‌ಜಿàತ್‌ ಸೂಪರ್‌ ಟ್ಯಾಕಲ್‌ಗೆ ಸಿಲುಕಿದ್ದರಿಂದ ಜೈಪುರಕ್ಕೆ 2 ಅಂಕ ಸಿಕ್ಕಿತು. ಪಂದ್ಯ ಸಮಬಲಗೊಂಡಿತು. ಮನ್‌ಜಿàತ್‌ ಅತೀ ಹೆಚ್ಚು 9 ಅಂಕ ಗಳಿಸಿ ಕೊಟ್ಟಿದ್ದರು. ಅವರ 18 ರೈಡ್‌ಗಳಲ್ಲಿ 6 ಯಶಸ್ಸು ಕಂಡಿತ್ತು. ಎಲ್ಲವೂ ಟಚ್‌ ಪಾಯಿಂಟ್‌ಗಳಾಗಿದ್ದವು. ಜೈಪುರ್‌ ಪರ ರೈಡರ್‌ಗಳಾದ ಅರ್ಜುನ್‌ ದೇಶ್ವಾಲ್‌ ಮತ್ತು ನವೀನ್‌ ಗಮನಾರ್ಹ ಪ್ರದರ್ಶನ ನೀಡಿ ತಲಾ 6 ಅಂಕ ಗಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next