Advertisement

ಪ್ರೊ ಕಬಡ್ಡಿ ಲೀಗ್ : ‘ಕೂ’ಗೆ ಸೇರಿದ ಬೆಂಗಳೂರು ಬುಲ್ಸ್

10:25 AM Nov 25, 2021 | Team Udayavani |

ಬೆಂಗಳೂರು: ಇನ್ನೇನು ಕೆಲವೇ ವಾರಗಳಲ್ಲಿ ಕಬ್ಬಡಿ ಹಬ್ಬ ಶುರುವಾಗಲಿದೆ, ಇದೇ ವೇಳೆ ಸ್ಥಳೀಯ ಭಾಷೆಗಳಲ್ಲಿ ಅಭಿಮಾನಿಗಳೊಂದಿಗೆ ಬೆರೆಯಲು ಅತ್ಯಂತ ಭರವಸೆಯ ಪ್ರೊ ಕಬಡ್ಡಿ ಲೀಗ್ ತಂಡಗಳಲ್ಲಿ ಒಂದಾದ ಬೆಂಗಳೂರು ಬುಲ್ಸ್ ಇತ್ತೀಚೆಗೆ ಭಾರತದ ಬಹು-ಭಾಷಾ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ‘ಕೂ’ ಅನ್ನು ಸೇರಿದೆ.

Advertisement

ತಮ್ಮ ಅಧಿಕೃತ ಹ್ಯಾಂಡಲ್ @bengalurubullsofficial ನಿಂದ ಕೂ ಮಾಡಿದ್ದು, ತಂಡವು ತಮ್ಮ ಸ್ಟಾರ್ ಆಟಗಾರರೊಬ್ಬರು ತೂಕ ಎತ್ತುವ ವೀಡಿಯೊವನ್ನು ಹಂಚಿಕೊಂಡಿದೆ. ಲೀಗ್‌ ನ ಎಂಟನೇ ಸೀಸನ್‌ಗೆ ಬೆಂಗಳೂರು ಬುಲ್ಸ್ ಆಟಗಾರರು ಸಜ್ಜಾಗುತ್ತಿದ್ದು, ಇದೇ ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ:ಕಾನ್ಪುರದಲ್ಲಿ ಕೇನ್ ಪಡೆ ಸವಾಲು: ಟಾಸ್ ಗೆದ್ದ ಭಾರತ; ಶ್ರೇಯಸ್ ಅಯ್ಯರ್ ಪದಾರ್ಪಣೆ

ಬೆಂಗಳೂರು ಬುಲ್ಸ್ , “ನಾವು ನಿಂಗೆ ಗೆಲ್ಲೋಕೆ ಕೊಡಲ್ಲ! ಇದು ನಿಜವಾದ ಯುದ್ಧವಾಗಿದೆ ಮತ್ತು ಮೃಗದ ರೀತಿ ನಮ್ಮ ಗೂಳಿಗಳು ಸಿದ್ಧವಾಗುತ್ತಿದ್ದಾರೆ!’

Koo App

ವೃತ್ತಿಪರತೆಯ ಹೊಸ ಹಂತಗಳನ್ನು ಒಳಗೊಳ್ಳುವ ಹಾಗೂ ಉದಯೋನ್ಮುಖ ಆಟಗಾರರು ಮತ್ತು ಅಭಿಮಾನಿಗಳಲ್ಲಿ ಮಹತ್ವಾಕಾಂಕ್ಷೆ ರೂಪಿಸುವ ಮೂಲಕ ಪ್ರೊ ಕಬಡ್ಡಿ ಲೀಗ್ ಸ್ಥಳೀಯ ಆಟವಾದ ಕಬಡ್ಡಿಗೆ ಹೆಚ್ಚು ಆಕರ್ಷಣೆಯನ್ನು ತಂದಿದೆ. ಇತ್ತೀಚೆಗೆ, ಯು ಮುಂಬಾ, ಯುಪಿ ಯೋದ್ಧ, ಪುಣೇರಿ ಪಲ್ಟನ್, ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್‌ನಂತಹ ಇತರ ಪ್ರೊ ಕಬಡ್ಡಿ ಲೀಗ್ ತಂಡಗಳು ಕೂಡ ‘ಕೂ’ಗೆ ಸೇರಿವೆ. ಈ ಜನಪ್ರಿಯ ತಂಡಗಳ ಉಪಸ್ಥಿತಿಯು ಸ್ವಯಂ ಅಭಿವ್ಯಕ್ತಿ ವೇದಿಕೆಯಾದ ‘ಕೂ’ ನಲ್ಲಿ ತೀವ್ರ ಚಟುವಟಿಕೆಯನ್ನು ಸೃಷ್ಟಿಸಲಿದೆ ಮತ್ತು ಬಳಕೆದಾರರಿಗೆ ಕ್ರೀಡಾ ತಲ್ಲೀನತೆ ಅನುಭವವನ್ನು ನೀಡುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next