Advertisement

ಬೆಂಗಳೂರು ಬುಲ್ಸ್‌-ಮುಂಬಾ ಪ್ರೊ ಕಬಡ್ಡಿ ಉದ್ಘಾಟನಾ ಪಂದ್ಯ

11:00 PM Dec 01, 2021 | Team Udayavani |

ಬೆಂಗಳೂರು: ಈ ಬಾರಿ ಪ್ರೊ ಕಬಡ್ಡಿ ಕೂಟದ ಅಷ್ಟೂ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿದ್ದು, ಆತಿಥೇಯ ಬೆಂಗಳೂರು ಬುಲ್ಸ್‌ ಮತ್ತು ಯು ಮುಂಬಾ ಉದ್ಘಾಟನಾ ಪಂದ್ಯದಲ್ಲಿ ಎದುರಾಗಲಿವೆ. ವೈಟ್‌ಫೀಲ್ಡ್‌ನಲ್ಲಿರುವ ಶೆರಟಾನ್‌ ಗ್ರ್ಯಾಂಡ್‌ ಹೊಟೇಲ್‌ನಲ್ಲಿ ಕೂಟ ನಡೆಯಲಿದ್ದು, ಅಲ್ಲೇ ಜೈವಿಕ ಸುರûಾ ವಲಯವನ್ನೂ ನಿರ್ಮಿಸಲಾಗಿದೆ.

Advertisement

8ನೇ ಆವೃತ್ತಿ ಪ್ರೊ ಕಬಡ್ಡಿ ಕೂಟದ ಅರ್ಧ ಭಾಗದ ವೇಳಾಪಟ್ಟಿ ಮಾತ್ರ ಪ್ರಕಟವಾಗಿದೆ. ಈ ಪ್ರಕಾರ ಡಿ. 22ರಿಂದ ಜ. 22ರ ವರೆಗಿನ ಪಂದ್ಯಗಳ ಮಾಹಿತಿ ಲಭ್ಯವಾಗಿದೆ. ಆರಂಭದ 4 ದಿನಗಳ ಕಾಲ ಹಾಗೂ ಜ. 1, 8 ಮತ್ತು 15ರಂದು ತಲಾ ಮೂರು ಪಂದ್ಯಗಳು ನಡೆಯಲಿವೆ. ಉಳಿದೆಲ್ಲ ದಿನಗಳಲ್ಲಿ ತಲಾ ಎರಡು ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ:ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌100 ರೂ. ಏರಿಕೆ

ಪಾಟ್ನಾಗೆ ಪ್ರಶಾಂತ್‌ ರೈ ನಾಯಕ
ಪುತ್ತೂರಿನವರಾದ ಪ್ರಶಾಂತ್‌ ಕುಮಾರ್‌ ರೈ ಪಾಟ್ನಾ ಪೈರೇಟ್ಸ್‌ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಕೂಟದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವ ರೈ, ಪ್ರಬಲ ರೈಡಿಂಗ್‌ನಿಂದ ಗಮನ ಸೆಳೆದಿದ್ದಾರೆ. ಒಟ್ಟು 97 ಪಂದ್ಯ ಗಳನ್ನಾಡಿದ್ದಾರೆ. ದಾಳಿಯ ಮೂಲಕ 403 ಅಂಕ ಗಳಿಸಿದ್ದಾರೆ. ಕ್ಯಾಚ್‌ ಮತ್ತು ಇತರ ಆಟವೆಲ್ಲ ಸೇರಿದರೆ 412 ಅಂಕಗಳು ಅವರ ಬಳಿಯಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next