Advertisement

ಠಾಕೂರ್‌ ದಾಳಿಗೆ ಬೆಚ್ಚಿದ ಗುಜರಾತ್‌

12:16 AM Aug 11, 2019 | Sriram |

ಅಹ್ಮದಾಬಾದ್‌: ಅಹ್ಮದಾಬಾದ್‌ ಚರಣದ ಮೊದಲ ದಿನದ ಪ್ರೊ ಕಬಡ್ಡಿ ಕಾಳಗದಲ್ಲಿ ತಮಿಳ್‌ ತಲೈವಾಸ್‌ ಆತಿಥೇಯ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ಗೆ 34-28 ಅಂಕಗಳ ಆಘಾತವಿಕ್ಕಿದೆ.

Advertisement

ದಿನದ ದ್ವಿತೀಯ ಮುಖಾಮುಖೀಯಲ್ಲಿ ದಬಾಂಗ್‌ ಡೆಲ್ಲಿ 32-30 ಅಂತರದಿಂದ ಪುನೇರಿಗೆ ಸೋಲುಣಿಸಿತು.

ಅಜಯ್‌ ಠಾಕೂರ್‌ ಪರಾಕ್ರಮ
ಶನಿವಾರ ನಡೆದ ಪಂದ್ಯದಲ್ಲಿ ತಲೈವಾಸ್‌ ಅತ್ಯಂತ ಚುರುಕಿನ ಆಟ ಪ್ರದರ್ಶಿಸಿತು. ತಾರಾ ರೈಡರ್‌ ಅಜಯ್‌ ಠಾಕೂರ್‌ (9 ಅಂಕ) ಅದ್ಭುತ ರೈಡಿಂಗ್‌ ಪ್ರದರ್ಶಿಸಿದರು. ಇವರಿಗೆ ಮೋಹಿತ್‌ ಚಿಲ್ಲಾರ್‌ (5 ಅಂಕ) ಟ್ಯಾಕಲ್‌ನಿಂದ ಉತ್ತಮ ಸಾಥ್‌ ನೀಡಿದರು. ಇವರಿಬ್ಬರು ಮೊದಲ ಅವಧಿಯಿಂದಲೇ ಬಿರುಸಿನ ಆಟಕ್ಕಿಳಿದರು. ಈ ಹಂತದಲ್ಲಿ ಗುಜರಾತ್‌ ಕೂಡ ತಕ್ಕ ತಿರುಗೇಟು ನೀಡಿತ್ತು. ಒಂದು ಹಂತದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ಪ್ರದರ್ಶಿಸಿದ್ದವು.

ತಲೈವಾಸ್‌ ತಂಡದ ಉಳಿದ ಆಟಗಾರರಾದ ಮಂಜೀತ್‌ ಚಿಲ್ಲಾರ್‌ (4 ಅಂಕ), ರಾಹುಲ್‌ ಚೌಧರಿ (4 ಅಂಕ) ಕೂಡ ಉತ್ತಮ ಪ್ರದರ್ಶನ ನೀಡಿದರು. ತಲೈವಾಸ್‌ ತನ್ನ ಹಿಂದಿನ ಪಂದ್ಯದಲ್ಲಿ ಯುಪಿ ಯೋಧಾ ವಿರುದ್ಧ 28-28 ಅಂಕಗಳ ರೋಚಕ ಟೈ ಸಾಧಿಸಿದ್ದನ್ನು ಸ್ಮರಿಸಬಹುದು.

ರೋಹಿತ್‌ ಹೋರಾಟ ವ್ಯರ್ಥ
ತಾರಾ ರೈಡರ್‌ ರೋಹಿತ್‌ ಗುಲಿಯಾ (9 ಅಂಕ), ಸುನೀಲ್‌ ಕುಮಾರ್‌ (6 ಅಂಕ) ಮತ್ತು ಸಚಿನ್‌ (5 ಅಂಕ) ಗುಜರಾತ್‌ ಗೆಲುವಿಗಾಗಿ ಶ್ರಮಿಸಿದರೂ ಇವರ ಪ್ರಯತ್ನ ಫ‌ಲ ಕೊಡಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next