Advertisement

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

10:50 PM Jan 19, 2022 | Team Udayavani |

ಬೆಂಗಳೂರು: ಕೊನೆಗೂ ತೆಲುಗು ಟೈಟಾನ್ಸ್‌ ತಂಡ ಪ್ರಸಕ್ತ ಋತುವಿನ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಬುಧವಾರದ ರೋಚಕ ಮುಖಾಮುಖಿಯಲ್ಲಿ ಅದು 35- 34 ಅಂತರದಿಂದ ಜೈಪುರ್‌ ಪಿಂಕ್‌ ಪ್ಯಾಂಥರ್ ವಿರುದ್ಧ ಮೇಲುಗೈ ಸಾಧಿಸಿತು. ಇದು ಟೈಟಾನ್ಸ್‌ನ 11ನೇ ಮುಖಾಮುಖಿಆಗಿದ್ದು, ಎಂಟರಲ್ಲಿ ಸೋಲೇ ಸಂಗಾತಿ ಆಗಿತ್ತು.

Advertisement

ತೆಲುಗು ಟೈಟಾನ್ಸ್‌ನ ಡಿಫೆಂಡರ್‌ ಆದರ್ಶ್‌ 9 ಅಂಕದೊಂದಿಗೆ ಮೆರೆ ದರು. ರೈಡರ್‌ ರಜನೀಶ್‌ 7 ಅಂಕ ತಂದು ಕೊಟ್ಟರು. ಜೈಪುರ್‌ ತಂಡದ ರೈಡರ್‌ ಅರ್ಜುನ್‌ ದೇಶ್ವಾಲ್‌ ಆಟ ಅಮೋಘ ಮಟ್ಟದಲ್ಲಿತ್ತು (9 ಅಂಕ).

ಹರ್ಯಾಣಕ್ಕೆ 4ನೇ ಜಯ
ದಿನದ ಮೊದಲ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್‌ 37-30 ಅಂತರದಿಂದ ಪುನೇರಿ ಪಲ್ಟಾನ್‌ಗೆ ಸೋಲುಣಿಸಿತು. ಇದು ಹರ್ಯಾಣಕ್ಕೆ ಒಲಿದ 4ನೇ ಜಯ. ಎರಡೂ ತಂಡಗಳು ತಮ್ಮ ಹಿಂದಿನ ಮುಖಾಮುಖಿಗಳಲ್ಲಿ ಸೋಲನುಭವಿಸಿದ್ದವು.

ಇದನ್ನೂ ಓದಿ:ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಹರ್ಯಾಣ ಪರ ನಾಯಕ ವಿಕಾಸ್‌ ಖಂಡೋಲ (8 ಅಂಕ) ಮತ್ತು ಡಿಫೆಂಡರ್‌ ಜೈದೀಪ್‌ (7 ಅಂಕ) ಗಮನಾರ್ಹ ಪ್ರದರ್ಶನವಿತ್ತರು. ಪುನೇರಿ ಆಟ ಸಾಧಾರಣ ಮಟ್ಟದಲ್ಲಿತ್ತು. ನಾಯಕ ನಿತಿನ್‌ ತೋಮರ್‌ (5 ಅಂಕ), ರೈಡರ್‌ ಅಸ್ಲಾಮ್‌ ಇನಾಮಾªರ್‌ (4 ಅಂಕ) ಹೊರತುಪಡಿಸಿದರೆ ಉಳಿದವರ್ಯಾರೂ ಮಿಂಚಲಿಲ್ಲ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next