Advertisement

Pro Kabaddi; ತೆಲುಗು ಟೈಟಾನ್ಸ್‌  ಮೇಲೆ ಡೆಲ್ಲಿ ಸವಾರಿ

02:36 AM Dec 13, 2024 | Team Udayavani |

ಪುಣೆ: ಗುರುವಾರದ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ದಬಾಂಗ್‌ ಡೆಲ್ಲಿ 33-27 ಅಂತರದಿಂದ ತೆಲುಗು ಟೈಟಾನ್ಸ್‌ ವಿರುದ್ಧ ಜಯ ಸಾಧಿಸಿತು. ಇದು ಡೆಲ್ಲಿಗೆ ಒಲಿದ 9ನೇ ಗೆಲುವು. ಟೈಟಾನ್ಸ್‌ 9ನೇ ಸೋಲನುಭವಿಸಿತು.

Advertisement

ಡೆಲ್ಲಿ ಪರ ರೈಡರ್‌ ನವೀನ್‌ ಕುಮಾರ್‌ 11, ನಾಯಕ ಆಶು ಮಲಿಕ್‌ 9 ಅಂಕ ತಂದಿತ್ತರು. ಟೈಟಾನ್ಸ್‌ ತಂಡದ ಆಲ್‌ರೌಂಡರ್‌ ವಿಜಯ್‌ ಮಲಿಕ್‌ 10, ರೈಡರ್‌ ಆಶಿಷ್‌ ನರ್ವಾಲ್‌ 8 ಅಂಕ ಗಳಿಸಿದರು.

ಯುಪಿ-ಬೆಂಗಾಲ್‌ ಟೈ: ಯುಪಿ ಯೋಧಾಸ್‌ ಮತ್ತು ಬೆಂಗಾಲ್‌ ವಾರಿಯರ್ ನಡುವಿನ ದ್ವಿತೀಯ ಪಂದ್ಯ 31-31ರಿಂದ ಟೈ ಆಯಿತು.

 

Advertisement

Udayavani is now on Telegram. Click here to join our channel and stay updated with the latest news.

Next