Advertisement

Pro Kabaddi: ದಬಾಂಗ್‌ ಡೆಲ್ಲಿ, ಯುಪಿ ಯೋಧಾಸ್‌, ಜೈಪುರ-ಯು ಮುಂಬಾ ಪಂದ್ಯಗಳೆರಡೂ ಟೈ

01:48 AM Dec 06, 2024 | Team Udayavani |

ಪುಣೆ: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌)ನಲ್ಲಿ ಶುಕ್ರವಾರ ನಡೆದ ಎರಡು ಪಂದ್ಯಗಳು ಟೈಯಲ್ಲಿ ಅಂತ್ಯಗೊಂಡಿವೆ. ಮೊದಲು ನಡೆದ ದಬಾಂಗ್‌ ಡೆಲ್ಲಿ ಮತ್ತು ಯುಪಿ ಯೋಧಾಸ್‌ ನಡುವಿನ ಪಂದ್ಯ 32-32ರಿಂದ ಟೈಯಲ್ಲಿ ಅಂತ್ಯಗೊಂಡಿತು.

Advertisement

ಈ ಮೂಲಕ ಯುಪಿ ಆಡಿರುವ 16 ಪಂದ್ಯಗಳಲ್ಲಿ 8 ಜಯ, 6 ಸೋಲು, 2 ಪಂದ್ಯ ಡ್ರಾಗೊಳಿಸಿದೆ. ಡೆಲ್ಲಿ ತಂಡ 17 ಪಂದ್ಯಗಳಲ್ಲಿ 7 ಜಯ, 5 ಸೋಲು, 4 ಪಂದ್ಯ ಡ್ರಾಗೊಳಿಸಿದೆ. ದಿನದ ಇನ್ನೊಂದು ಪಂದ್ಯದಲ್ಲಿ ಜೈಪುರ ಮತ್ತು ಯು ಮುಂಬಾ ಪ್ರಬಲವಾಗಿ ಹೋರಾಡಿದ್ದು ಅಂತಿಮವಾಗಿ ಪಂದ್ಯ 22-22 ಅಂಕಗಳಿಂದ ಟೈ ಗೊಂಡಿದೆ.

ಯುಪಿ ಯೋಧಾಸ್‌ ಪರ ಗಗನ್‌ ಗೌಡ 13, ಭವಾನಿ ರಜಪೂತ್‌ 10, ಭರತ್‌ 4 ಅಂಕ ಗಳಿಸಿ ಹೋರಾಟ ನೀಡಿದರು. ಅತ್ತ ದಬಾಂಗ್‌ ಡೆಲ್ಲಿ ಪರ ಆಶು ಮಲಿಕ್‌ 11, ನವೀನ್‌ ಕುಮಾರ್‌ 8, ರಾಹುಲ್‌ ಕಲಿರಾವಣ 3, ನಿತಿನ್‌ ಪನ್ವಾರ್‌ ಮತ್ತು ಹಿಮಾಂಶು ನರ್ವಾಲ್‌ ತಲಾ 2 ಅಂಕ ಗಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next