Advertisement

ಬುಲ್ಸ್‌ ದಾಳಿಗೆ ಬೆದರಿದ ತಲೈವಾಸ್‌

12:05 AM Sep 02, 2019 | Team Udayavani |

ಬೆಂಗಳೂರು: ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡವು ಪ್ರೊ ಕಬಡ್ಡಿ 7ನೇ ಆವೃತ್ತಿಯ ಬೆಂಗಳೂರು ಚರಣದಲ್ಲಿ ರವಿವಾರ ನಡೆದ ಎರಡನೇ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ ತಂಡವನ್ನು 33-27 ಅಂಕಗಳಿಂದ ಸೋಲಿಸಿದೆ.

Advertisement

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರಂಭದಿಂದಲೇ ಬುಲ್ಸ್‌ ಆಕ್ರಮಣಕಾರಿಯಾಗಿ ಆಡಿ ಮೇಲುಗೈ ಸಾಧಿಸುತ್ತ ಬಂತು. ತಲೈವಾಸ್‌ ತೀವ್ರ ಪೈಪೋಟಿ ನೀಡಿದರೂ ಗೆಲುವಿನಿಂದ ದೂರ ಉಳಿಯಿತು.

ಪವನ್‌ ಸೆಹ್ರಾವತ್‌ ಅವರ ಭರ್ಜರಿ ರೈಡಿಂಗ್‌ನಿಂದ ತಂಡ ಗೆಲುವು ಕಾಣುವಂತಾಯಿತು. 21 ಪ್ರಯತ್ನದಲ್ಲಿ ಅವರು 17 ಅಂಕ ಗಳಿಸಿದರು. ಟ್ಯಾಕಲ್‌ನಲ್ಲಿ ಅಮಿತ್‌ ಶೇರಾನ್‌ ಮಿಂಚಿ 5 ಅಂಕ ಪಡೆದರು. ತಲೈವಾಸ್‌ ತಂಡವನ್ನು ಗಮನಿಸಿದರೆ ಬುಲ್ಸ್‌ ರೈಡಿಂಗ್‌ನಲ್ಲಿಯೇ 22 ಅಂಕ ಗಳಿಸಿತ್ತು. ತಲೈವಾಸ್‌ 14 ಅಂಕ ಪಡೆದಿತ್ತು. ತಲೈವಾಸ್‌ ಪರ ರಾಹುಲ್‌ ಚೌಧರಿ 16 ಪ್ರಯತ್ನಗಳಲ್ಲಿ 7 ಅಂಕ ಪಡೆದರು.

ಈ ಗೆಲುವಿನಿಂದ ಬುಲ್ಸ್‌ ಇಷ್ಟರವರೆಗೆ ಆಡಿದ 13 ಪಂದ್ಯಗಳಿಂದ 7ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ರಿಷಾಂಕ್‌ ಮತ್ತೆ ವಿಫ‌ಲ
ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳು ವಲ್ಲಿ ಯುಪಿ ಯೋಧಾ ತಂಡದ ತಾರಾ ಆಟಗಾರ ರಿಷಾಂಕ್‌ ವಿಫ‌ಲರಾ ದರು. ಅವರ ಮೇಲೆ ಭಾರೀ ನಿರೀಕ್ಷೆ ಇಡಲಾಗಿತ್ತು. ಅವರು ಕಳಪೆ ಪ್ರದರ್ಶ ನ ನೀಡಿದರೂ ಶ್ರೀಕಾಂತ್‌ ಜಾಧವ್‌, ನಿತೀಶ್‌ ಭರ್ಜರಿ ಆಟವಾಡಿ ತಂಡಕ್ಕೆ ಮಹತ್ವತದ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

Advertisement

ಯುಪಿ ಗೆ ಭರ್ಜರಿ ಗೆಲುವು
ರವಿವಾರದ ಮೊದಲ ಪಂದ್ಯದಲ್ಲಿ ಯುಪಿ ಯೋಧಾ ತಂಡ 32-29 ಅಂಕಗಳ ಅಂತರದಿಂದ ಬೆಂಗಾಲ್‌ ವಾರಿಯರ್ ತಂಡವನ್ನು ಪರಾಭವಗೊಳಿಸಿದೆ.

ಯುಪಿ ಯೋಧಾ ಪರ ನಿತೇಶ್‌ ಕುಮಾರ್‌ ಟ್ಯಾಕಲ್‌ನಲ್ಲಿ 7 ಅಂಕ ಸಂಪಾದಿಸಿದ್ದೇ ಶ್ರೇಷ್ಠ ಆಟ. ನಿತೇಶ್‌ ಅತ್ಯುತ್ತಮ ರಕ್ಷಣಾ ಆಟಗಾರ ಎನಿಸಿಕೊಂಡರು. ಇನ್ನು ಬೆಂಗಾಲ್‌ ತಂಡದಲ್ಲಿ ಎಲ್ಲವೂ ಅಂದುಕೊಂಡಂತೆ ಸಾಗಲಿಲ್ಲ. ತಾರಾ ಆಟಗಾರರಾದ ಮಣಿಂದರ್‌ ಸಿಂಗ್‌, ಕೆ. ಪ್ರಪಂಜನ್‌ ಹಾಗೂ ಮೊಹಮ್ಮದ್‌ ನಬೀಭಕ್‌ ಶ್ರೇಷ್ಠ ನಿರ್ವಹಣೆ ನೀಡಲು ಅಸಮರ್ಥರಾದರು. ಇದರಿಂದಾಗಿ ತಂಡ ಸೋಲು ಕಾಣುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next