Advertisement
ಇದು ಪ್ರೊ ಕಬಡ್ಡಿಯ ಇತಿಹಾಸದ ಎರಡನೇ ಗರಿಷ್ಠ ಮೊತ್ತ. 6ನೇ ಆವೃತ್ತಿಯ ಲೀಗ್‌ನಲ್ಲಿ ಮೋನು ಗೋಯತ್ ಹರ್ಯಾಣ ಸ್ಟೀಲರ್ ತಂಡಕ್ಕೆ 1.51 ಕೋಟಿ ರೂ.ಗೆ ಮಾರಾಟಗೊಂಡಿದ್ದರು. ಇದು ಪ್ರೊ ಕಬಡ್ಡಿಯ ಇತಿಹಾಸದಲ್ಲಿ ಪಡೆದಿದ್ದ ಗರಿಷ್ಠ ಮೊತ್ತವಾಗಿತ್ತು.
ಸಿದ್ಧಾರ್ಥ್ ದೇಸಾಯಿ ಮೂಲತಃ ಮಹಾರಾಷ್ಟ್ರದ ಸಾಂಗ್ಲಿಯವರು. 6ನೇ ಆವೃತ್ತಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಹೀಗಾಗಿ ಈ ಸಲ ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಆದರೆ ಕಳೆದ ಆವೃತ್ತಿಯಲ್ಲಿ ಮೋನು ಗೋಯತ್ ಪಡೆದ ಮೊತ್ತಕ್ಕೆ ಕೇವಲ 6 ಲಕ್ಷ ಕಡಿಮೆ ಆಗಿದ್ದರಿಂದ ಹೊಸ ಇತಿಹಾಸ ನಿರ್ಮಿಸುವ ಅವಕಾಶದಿಂದ ದೇಸಾಯಿ ವಂಚಿತರಾದರು. ಆದರೆ ಮೋನು ಗೋಯತ್ ಈ ಬಾರಿ 93 ಲಕ್ಷ ರೂ.ಗೆ ಯುಪಿ ಯೋಧಾ ತಂಡಕ್ಕೆ ಮಾರಾಟವಾಗಿದ್ದಾರೆ. ನಿತಿನ್‌ಗೆ 1.20 ಕೋಟಿ ರೂ.
ಕಳೆದ ಬಾರಿ ಪುನೇರಿ ಪಲ್ಟಾನ್ ಪರ ಆಡಿದ್ದ ನಿತಿನ್ ತೋಮರ್ ಅವರನ್ನು ಅದೇ ತಂಡದ ಫ್ರಾಂಚೈಸಿ 1.20 ಕೋಟಿ ರೂ. ನೀಡಿ ತಮ್ಮಲ್ಲೇ ಉಳಿಸಿಕೊಂಡಿದೆ. ರಾಹುಲ್ ಚೌಧರಿ ಅವರನ್ನು ತಮಿಳ್ ತಲೈವಾಸ್ 94 ಲಕ್ಷ ರೂ.ಗೆ ಖರೀದಿಸಿದೆ.
ಆಲ್‌ರೌಂಡರ್ ಸಂದೀಪ್ ನರ್ವಲ್ ಅವರನ್ನು ಯು ಮುಂಬಾ ತಂಡ 89 ಲಕ್ಷ ರೂ.ಗೆ ಖರೀದಿಸಿದೆ. ಮಂಗಳವಾರ ಕೂಡ ಹರಾಜು ನಡೆಯಲಿದೆ. ಹರಾಜಿನಲ್ಲಿ ಒಟ್ಟು 388 ಭಾರತೀಯರು ಹಾಗೂ 53 ವಿದೇಶಿ ಆಟಗಾರರಿದ್ದಾರೆ.