ಹೈದರಾಬಾದ್: ಯು ಮುಂಬಾ ಮೇಲೆ ಸವಾರಿ ಮಾಡಿದ ತಮಿಳ್ ತಲೈವಾಸ್ ಮಂಗಳವಾರದ ಮೊದಲ ಪ್ರೊ ಕಬಡ್ಡಿ ಪಂದ್ಯವನ್ನು 34-20 ಅಂಕಗಳ ಅಂತರದಿಂದ ತನ್ನದಾಗಿಸಿಕೊಂಡಿತು.
Advertisement
ನಾಯಕ ಹಾಗೂ ಡಿಫೆಂಡರ್ ಸಾಗರ್ (8 ಅಂಕ), ರೈಡರ್ ನರೇಂದರ್ (7 ಅಂಕ), ಅಜಿಂಕ್ಯ ಪವಾರ್ (5 ಅಂಕ) ಅವರ ಉತ್ತಮ ಪ್ರದರ್ಶನ ತಲೈವಾಸ್‌ಗೆ ವರವಾಗಿ ಪರಿಣಮಿಸಿತು.
ಮುಂಬಾದಲ್ಲಿ ಯಾರಿಂದಲೂ ಗಮನಾರ್ಹ ಪ್ರದರ್ಶನ ಕಂಡುಬರಲಿಲ್ಲ. ರೈಡರ್ ಗುಮಾನ್ ಸಿಂಗ್ ಮತ್ತು ಡಿಫೆಂಡರ್ ಮೋಹಿತ್ 4 ಅಂಕ ಗಳಿಸಿದ್ದೇ ಉತ್ತಮ ಸಾಧನೆ.
ಇದು 16 ಪಂದ್ಯಗಳಲ್ಲಿ ತಮಿಳ್ ಸಾಧಿಸಿದ 7ನೇ ಗೆಲುವು. ಮುಂಬಾ ಇಷ್ಟೇ ಪಂದ್ಯಗಳಿಂದ 8ನೇ ಸೋಲನುಭವಿಸಿತು.