Advertisement

ಪ್ರೊ ಕಬಡ್ಡಿ: ಬೆಂಗಾಲನ್ನು ಮಣಿಸಿದ ತಲೈವಾಸ್‌

09:40 PM Nov 21, 2022 | Team Udayavani |

ಹೈದರಾಬಾದ್‌: 9ನೇ ಆವೃತ್ತಿ ಪ್ರೊ ಕಬಡ್ಡಿಯ ಸೋಮವಾರದ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ 35-30 ಅಂಕಗಳಿಂದ ಬೆಂಗಾಲ್‌ ವಾರಿಯರ್ಸ್‌ ತಂಡವನ್ನು ಮಣಿಸಿದೆ. ಇದರೊಂದಿಗೆ ತಮಿಳುನಾಡು ಆಡಿದ 15 ಪಂದ್ಯಗಳಲ್ಲಿ ಸರಿಯಾಗಿ 6 ಜಯ, 6 ಸೋಲುಗಳನ್ನು ಕಂಡಂತಾಗಿದೆ.

Advertisement

ತಮಿಳುನಾಡು ಪರ ಖ್ಯಾತ ಆಟಗಾರ ನರೇಂದರ್‌ 20 ಬಾರಿ ದಾಳಿ ಮಾಡಿದರು. ಆ ಮೂಲಕ 13 ಅಂಕಗಳನ್ನು ಸಂಗ್ರಹಿಸಿದರು. ಅಜಿಂಕ್ಯ ಪವಾರ್‌ 16 ದಾಳಿಗಳಲ್ಲಿ 6 ಅಂಕ ಗಳಿಸಿದರು, ರಕ್ಷಣೆಯಲ್ಲೂ ಮಿಂಚಿ 1 ಅಂಕ ಸಂಪಾದಿಸಿದರು. ಸಾಗರ್‌ ರಕ್ಷಣೆಯಲ್ಲಿ ಅದ್ಭುತವಾಗಿ ಆಡಿ 5 ಅಂಕ ಪಡೆದರು.

ಇನ್ನು ಬೆಂಗಾಲ್‌ ಪರ ಎಂದಿನಂತೆ ಮಣಿಂದರ್‌ ಸಿಂಗ್‌ ಭರ್ಜರಿಯಾಗಿ ಆಡಿದರು. ಬರೀ 19 ದಾಳಿಗಳಲ್ಲಿ 15 ಅಂಕ ಸಂಪಾದಿಸಿದರು. ಬೇಸರದ ಸಂಗತಿಯೆಂದರೆ ದಾಳಿಯಲ್ಲಿ ಇವರಿಗೆ ಸರಿಸಮನಾದ ಪ್ರದರ್ಶನವನ್ನು ತಂಡದ ಇತರರು ನೀಡಲಿಲ್ಲ. ಅದು ಹಿನ್ನಡೆಯಾಗಿ ಪರಿಣಮಿಸಿತು. ರಕ್ಷಣೆಯಲ್ಲಿ ಸುರೇಂದರ್‌ ನಾಡಾ ಒಬ್ಬರೇ ಉತ್ತಮವಾಗಿ ಪ್ರದರ್ಶನ ನೀಡಿದ್ದು. ಅವರು 3 ಅಂಕ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next