Advertisement

ಬೆಲೆ ಏರಿಕೆ ನಡುವೆ ಆಯುಧಪೂಜೆ ಸಂಭ್ರಮ

11:47 AM Oct 14, 2021 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಆಯುಧಪೂಜೆ- ವಿಜಯದಶಮಿ ಹಬ್ಬಕ್ಕೆ ಸಿದ್ಧತೆಗಳು ನಡೆದಿದೆ. ಬೂದುಕುಂಬಳ ಹೊರತಾಗಿ ಹೂ ಹಣ್ಣು, ಬಾಳೆಕಂದು ಸೇರಿದಂತೆ ಮಿಕ್ಕೆಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿದ್ದು, ಹಬ್ಬಕ್ಕೆ ಸ್ವಾಗತ ನಡೆದಿದೆ. ನಗರದ ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿಗಳು ಹಬ್ಬಕ್ಕೆಂದೇ ತೆರೆದಿವೆ.

Advertisement

ಬೂದು ಕುಂಬಳಕಾಯಿ ಕೆ.ಜಿ.ಗೆ 10ರಿಂದ 15 ರೂ. ಇದೆ. ಆದರೆ, ಹೂವಿನ ಬೆಲೆಗಳು ಗಗನಕ್ಕೇರಿವೆ. ಕಾಕಡ, ಮಳ್ಳೆ ಹೂವಿನ ಬೆಲೆ ಕೆ.ಜಿ.ಗೆ 400ರಿಂದ 500 ರೂ.ಗಳ ವರೆಗಿದ್ದರೆ, ಕನಕಾಂಬರ 1,200 ರೂ. ಸೆವಂತಿಗೆ, ಬಟನ್ಸ್‌, ಗುಲಾಬಿ ಮೊದಲಾದ ಹೂವಿನ ಬೆಲೆಗಳು ಕೆ.ಜಿ.ಗೆ 150 ರೂ. ದಾಟಿವೆ. ಬಾಳೆ ಹಣ್ಣು ಕೆ.ಜಿ.ಗೆ 20ರಿಂದ 60 ರೂ. ಸೇರಿದಂತೆ ಇತರ ಹಣ್ಣುಗಳ ಬೆಲೆಯೂ ಕೆ.ಜಿ.ಗೆ 20ರಿಂದ 30 ರೂ. ಹೆಚ್ಚಾಗಿವೆ. ಬಾಳೆಕಂದುಗಳ ಬೆಲೆ ಸಹ ಹೆಚ್ಚಾಗಿದ್ದು, ಆಯುಧ ಪೂಜೆಗಾಗಿ ಮಗ್ಗಗಳ ಯಂತ್ರಗಳು, ವಾಹನಗಳು ಮೊದಲಾದವುಗಳನ್ನು ಶುದ್ಧ ಮಾಡಿ ಪೂಜೆಗೆ ಅಣಿ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಇದನ್ನೂ ಓದಿ:- ಜಪಾನ್ ಪ್ರಧಾನಿ ಶಿಷ್ಯವೇತನಕ್ಕೆ ಮುದ್ದೇಬಿಹಾಳದ ಗೌರಿ ಬಗಲಿ ಆಯ್ಕೆ

 ಸರ್ಕಾರಿ ಕಚೇರಿಗಳಲ್ಲಿ ಆಯುಧ ಪೂಜೆ: ತಾಲೂಕು ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಸಿಡಿಪಿಒ ಕಚೇರಿ ಮೊದಲಾಗಿ ಸರ್ಕಾರಿ ಕಚೇರಿಗಳಲ್ಲಿ ಬುಧವಾರವೇ ಆಯುಧ ಪೂಜಾ ಕಾರ್ಯಕ್ರಮಗಳು ನಡೆದು ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿತ್ತು. ಸರ್ಕಾರ ಆಯುಧಪೂಜೆ ಮಾಡಲೆಂದೇ ರಜೆ ನಿಗದಿ ಮಾಡಿದೆ. ಆದರೆ, ಬಹಳಷ್ಟು ಸರ್ಕಾರಿ ಕಚೇರಿಗಳಲ್ಲಿ ಬುಧವಾರವೇ ನಡೆದಿದೆ. ಇದರಿಂದ ಸಾರ್ವಜನಿಕರ ಯಾವುದೇ ಕೆಲಸಗಳಿದ್ದರೂ ಅದು ಆನಂತರವಷ್ಟೇ.

ಕೆಲಸ ವಿಳಂಬ: ಕಚೇರಿಯಲ್ಲಿ ಸರಳವಾಗಿಯಾದರೂ ಸರಿ ರಜಾ ದಿನವೇ ಬಂದು ಮಾಡಲಿ. ಇಲ್ಲವೇ ಕಚೇರಿ ಅವಧಿ ಮುಗಿದ ನಂತರ ರಾತ್ರಿ 8 ಗಂಟೆಯವರೆಗಾ ದರೂ ಮಾಡಿಕೊಳ್ಳಲಿ. ಉಳಿದಂತೆ ಮನೆಗಳಲ್ಲಿ ಆಚರಿಸಿಕೊಳ್ಳಲಿ. ಈಗಾಗಲೇ ಎರಡನೇ ಹಾಗೂ ನಾಲ್ಕನೇ ಶ ನಿವಾರಗಳಂದು ರಜೆ ಇದ್ದು, ಕೆಲಸಗಳು ಸಾಗುತ್ತಿಲ್ಲ.

Advertisement

ಸಾರ್ವಜನಿಕರ ಕೆಲಸದ ಸಮಯದಲ್ಲಿ ಪೂಜೆಗಾಗಿ ಸಮಯ ಕಳೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸುತ್ತಾರೆ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ರಾಮಕೃಷ್ಣ ತಾಜಾ ಹೂವುಗಳಿಗೆ ಬೆಲೆ ಅಧಿಕವಾದರೂ ಹೆಚ್ಚಿದ ಬೇಡಿಕೆ ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಮಳೆ ಬೀಳುತ್ತಿದ್ದು, ಹೂವುಗಳ ಮೇಲೆ ತೇವಾಂಶ ಹೆಚ್ಚಾಗಿ ಸಹಜವಾಗಿ ಬೆಲೆಗಳು ಹೆಚ್ಚಾಗಿವೆ. ಮಳೆಯಲ್ಲಿ ತೊಯ್ದಿರುವ ಹೂಗಳ ಬೆಲೆ ಕಡಿಮೆಯಿದ್ದರೆ, ತಾಜಾ ಹೂವುಗಳ ಬೆಲೆಗಳು ಹೆಚ್ಚಾಗಿವೆ. ಬೆಲೆ ಏರಿಕೆ ನೋಡಿದರೆ ಹಬ್ಬ ಮಾಡಲು ಉತ್ಸಾಹವೇ ಇಲ್ಲದಿದ್ದರೂ, ಹಿಂದಿನಿಂದಲೂ ಆಚರಿಸುತ್ತಿರುವ ಹಬ್ಬಗಳನ್ನು ಆಚರಿಸಲೇಬೇಕಲ್ಲ ಎನ್ನುತ್ತಾರೆ ಬಹುಪಾಲು ಸಾರ್ವಜನಿಕರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next