Advertisement

ಪ್ರಿಯಾಂಕಾ ‘ಉಗ್ರಾವತಾರ’ ಟೀಸರ್ ಬಿಡುಗಡೆ

05:19 PM Aug 06, 2022 | Team Udayavani |

ನಟಿ ಪ್ರಿಯಾಂಕಾ ಉಪೇಂದ್ರ ಮೊದಲ ಬಾರಿಗೆ ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಲುಕ್‌ ನಲ್ಲಿ ಕಾಣಿಸಿಕೊಂಡಿರುವ “ಉಗ್ರಾವತಾರ’ ಸಿನಿಮಾದ ಮೊದಲ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ.

Advertisement

ಮಿಸಸ್‌ ಯೂನಿವರ್ಸ್‌ ಸುಧಾ. ಎಂ ನಡೆಸಿರುವ ಫ್ಯಾಷನ್‌ ಶೋ ಕಾರ್ಯಕ್ರಮದಲ್ಲಿ “ಉಗ್ರಾವತಾರ’ ಸಿನಿಮಾದ ಟೀಸರ್‌ ಬಿಡುಗಡೆಗೊಂಡಿತು.

ಸದ್ಯ ಹೊರಬಂದಿರುವ “ಉಗ್ರಾವತಾರ’ ಸಿನಿಮಾದ ಒಂದು ನಿಮಿಷದ ತುಣುಕುಗಳಲ್ಲಿ ಪ್ರಿಯಾಂಕಾ ಉಪೇಂದ್ರ ಸೆಣೆದಾಡುವ ಭರ್ಜರಿ ಸಾಹಸ ದೃಶ್ಯಗಳಿವೆ. ಗುರುಮೂರ್ತಿ ನಿರ್ದೇಶನದಲ್ಲಿ, ಎಸ್‌. ಜಿ ಸತೀಶ್‌ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಉಗ್ರಾವತಾರ’ ಸಿನಿಮಾದಲ್ಲಿ ಪ್ರಿಯಾಂಕಾ ಅವರೊಂದಿಗೆ ಸುಮನ್‌, ಪವಿತ್ರಾ ಲೋಕೇಶ್‌, ಶೋಭ, ನಟರಾಜ್‌ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next