ಹೊಸದಿಲ್ಲಿ : ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಚಿತ್ರವನ್ನು ತಿರುಚಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕಾ ಶರ್ಮಾಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ನೀಡಿದೆ.
ಪ್ರಿಯಾಂಕಾ ಬಂಧನ ಪ್ರಕರಣವನ್ನು ವಿಚಾರಣೆ ನಡೆಸಿದ ಕೋರ್ಟ್ ಮಮತಾ ಬ್ಯಾನರ್ಜಿ ಅವರ ಬೇಷರತ್ ಕ್ಷಮೆ ಯಾಚಿಸಿದರೆ ಮಾತ್ರ ಜಾಮೀನು ನೀಡುವುದಾಗಿ ಹೇಳಿತು.
ಬಳಿಕ ಪ್ರಿಯಾಂಕಾ ಪರ ವಕೀಲ ಎನ್‌ಕೆ ಕೌಲ್ ಅವರನ್ನು ಕರೆಸಿಕೊಂಡು ಕ್ಷಮೆ ಯಾಚಿಸಬೇಕೆಂದಅದರ ಆದೇಶವನ್ನು ಮಾರ್ಪಾಡು ಮಾಡಿ , ಕ್ಷಮಾಪಣೆಯ ಸ್ಥಿತಿಯನ್ನು ಬಿಟ್ಟುಬಿಟ್ಟಿದೆ ಎಂದು ತಿಳಿದು ಬಂದಿದೆ. ಪ್ರಿಯಾಂಕಾ ಅವರನ್ನು ತಕ್ಷಣ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಪ್ರಿಯಾಂಕಾ ಶರ್ಮಾರನ್ನು ಮೇ 10 ರಂದು ಬಂಧಿಸಲಾಗಿತ್ತು. ಮೆಟ್ ಗಾಲಾ ಕಾರ್ಯ ಕ್ರಮದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಫೋಟೋಗೆ ಮಮತಾ ಬ್ಯಾನರ್ಜಿ ಮುಖವನ್ನು ಅಂಟಿಸಿ, ಹಂಚಿಕೊಳ್ಳಲಾಗಿತ್ತು. ಸ್ಥಳೀಯ ಕೋರ್ಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲದ್ದರಿಂದ ಸುಪ್ರೀಂಕೋರ್ಟ್‌ಗೆದೂರು ಸಲ್ಲಿಸಲಾಗಿತ್ತು.