Advertisement

ಪ್ರಿಯಾಂಕಾ ಗಾಂಧಿಯ ಸಹಾಯಕನ ವಿರುದ್ಧ ಎಫ್ಐಆರ್‌

07:38 PM Mar 08, 2023 | Team Udayavani |

ಮೀರತ್‌: ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯ ಖಾಸಗಿ ಸಹಾಯಕ ಸಂದೀಪ್‌ ಸಿಂಗ್‌ ವಿರುದ್ಧ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ.

Advertisement

ಪಕ್ಷದ ಕಾರ್ಯಕರ್ತೆ-ನಟಿ ಅರ್ಚನಾ ಗೌತಮ್‌ ಅವರ ತಂದೆ ನೀಡಿದ ದೂರು ಇದಕ್ಕೆ ಕಾರಣ! ಅರ್ಚನಾ ಜೊತೆಗೆ ಸಂದೀಪ್‌ ತಪ್ಪಾಗಿ ನಡೆದುಕೊಂಡಿದ್ದಾನೆ, ಜೀವ ಬೆದರಿಕೆ ಒಡ್ಡಿದ್ದಾನೆಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಳೆದ ತಿಂಗಳು ಛತ್ತೀಸಗಢದ ರಾಯಪುರದಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆದಿದ್ದಾಗ; ಪ್ರಿಯಾಂಕಾ ಗಾಂಧಿ ನಿಮ್ಮನ್ನು ಭೇಟಿ ಮಾಡಲು ಬಯಸಿದ್ದಾರೆ ಎಂದು ಸಂದೀಪ್‌ ಸಿಂಗ್‌ ತಿಳಿಸಿದ್ದ. ಆ ವೇಳೆ ಸಂದೀಪ್‌ ಮಗಳೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾನೆಂದು ಗೌತಮಬುದ್ಧ ದೂರಿನಲ್ಲಿ ತಿಳಿಸಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next