Advertisement
ಸ್ಥಳೀಯ ಪೊಲೀಸರಿಂದ ಕಿರುಕುಳಕ್ಕೊಳಗಾದ ಬೋಟ್ ಮೆನ್ (ದೋಣಿ ನಡೆಸುವವರು) ಅವರಿಗೆ ಬೆಂಬಲಿಸಲು ಪ್ರಿಯಾಂಕ ಪ್ರಯಾಗ್ ರಾಜ್ ಗೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.
Related Articles
Advertisement
ನಿಶಾದ್ ಸಮುದಾಯಕ್ಕೆ ಸೇರಿದ ದೋಣಿ ವಿಹಾರಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸುಜಿತ್ ಆ ಸಂದರ್ಭದಲ್ಲಿ ಪ್ರಿಯಾಂಕ ಅವರಿಗೆ ತಿಳಿಸಿದ್ದರು.ನಮ್ಮ ಸಮುದಾಯದವರ ಮೇಲೆ ಲೋಕಲ್ ಪೊಲೀಸರಿಂದ ನಮಗೆ ಸಮಸ್ಯೆಯಾಗುತ್ತಿದೆ. ನಾವು ನಿಮ್ಮ ಸಹಾಯವನ್ನು ಬಯಸುತ್ತೇವೆ ಎಂದು ಪ್ರಿಯಾಂಕ ಅವರನ್ನು ಸುಜೀತ್ ಕೇಳಿಕೊಂಡಿದ್ದರು. ಹಾಗಾಗಿ ಇಂದು ಪ್ರಿಯಾಂಕ ಪ್ರಯಾಗ್ ರಾಜ್ ಗೆ ಭೇಟಿ ನೀಡಲಿದ್ದಾರೆ ಎಂದು ಪಕ್ಷ ಹೇಳಿಕೊಂಡಿದೆ.
ಪಕ್ಷ ಬಿಡುಗಡೆ ಮಾಡಿದ ಕಾರ್ಯಕ್ರಮಗಳ ಪಟ್ಟಿಯ ಪ್ರಕಾರ, ಪ್ರಿಯಾಂಕಾ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪ್ರಯಾಗ್ ರಾಜ್ ತಲುಪಲಿದ್ದು, ಮೀನುಗಾರ ಸಮುದಾಯದ ಸದಸ್ಯರನ್ನು ಭೇಟಿ ಮಾಡಲು ಜಿಲ್ಲೆಯ ಟ್ರಾನ್ಸ್-ಯಮುನಾ ಪ್ರದೇಶದ ಬನ್ಸ್ವಾರ್ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.
ಹಿಂದುಳಿದ ನಿಷಾದ್ ಸಮುದಾಯಕ್ಕೆ ಸೇರಿದ ಕೆಲವು ದೋಣಿಗಳು ಪೊಲೀಸರಿಂದ ಹಾಗೂ ಆಡಳಿತದ ಅಧಿಕಾರಿಗಳಿಂದ ಹಾನಿಗೊಳಗಾಗಿವೆ ಎಂದು ಸುಜಿತ್ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶ ಸರ್ಕಾರವು 24 ಜೂನ್ 2019 ರಂದು ರಾಜ್ಯಾದ್ಯಂತ ಮರಳು ಗಣಿಗಾರಿಕೆಯಲ್ಲಿ ದೋಣಿಗಳ ಬಳಕೆಯನ್ನು ನಿಷೇಧಿಸಿತ್ತು. ಈ ಕಾರಣದಿಂದಾಗಿ ಇದ್ದಕ್ಕಿದ್ದಂತೆ ನಿಷಾದ್ ಸಮುದಾಯದ ಲಕ್ಷಾಂತರ ಜನರು ನಿರುದ್ಯೋಗಿಗಳಾದರು. ಅವರಲ್ಲಿ ಹಲವರು ಉತ್ತರಪ್ರದೇಶದಲ್ಲಿ ತಮ್ಮ ಜೀವನೋಪಾಯಕ್ಕಾಗಿ ಈ ಉದ್ಯೋಗವನ್ನೇ ಅವಲಂಬಿಸಿದ್ದಾರೆ. 2013 ರಲ್ಲಿ, ಎನ್ ಜಿ ಟಿ ಯಂತ್ರಗಳನ್ನು ಬಳಸಿ ನದಿಗಳಿಂದ ಮರಳು ಹೊರತೆಗೆಯುವುದನ್ನು ನಿಷೇಧಿಸಿತ್ತು, ಆದರೆ ಗಣಿಗಾರಿಕೆ ಕಂಪನಿಗಳು ಅದನ್ನು ಪೋಕ್ ಲ್ಯಾಂಡ್ ಯಂತ್ರಗಳೊಂದಿಗೆ ಹೊರತೆಗೆಯುವುದನ್ನು ಮುಂದುವರೆಸಿದವು ಎಂದು ಎ ಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಓದಿ : ಹಾಸನ: ಟಾಟಾಸುಮೋ ಗೆ ಕ್ವಾಲಿಸ್ ಡಿಕ್ಕಿ; ಸ್ಥಳದಲ್ಲೇ ನಾಲ್ವರು ಸಾವು, 13 ಮಂದಿಗೆ ಗಂಭೀರ ಗಾಯ