Advertisement

ಪ್ರಿಯಾಂಕಾ ಬಾಲಿವುಡ್ ತೊರೆಯಲು ಕರಣ್ ಜೋಹರ್ ಕಾರಣ! ಕಂಗನಾ V/S ಪ್ರಿಯಾಂಕಾ ಚೋಪ್ರಾ

01:46 PM Mar 28, 2023 | Team Udayavani |

ವಾಷಿಂಗ್ಟನ್/ಮುಂಬೈ: ಬಾಲಿವುಡ್ ಖ್ಯಾತ ನಟಿ, ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ…ಭಾರತೀಯ ಸಿನಿಮಾರಂಗದ ಬಹು ಬೇಡಿಕೆಯ ನಟಿಯಾಗಿದ್ದರು. ದ ಹೀರೋ ಲವ್ ಸ್ಟೋರಿ ಆಫ್ ಸ್ಪೈ, ಅಂದಾಝ್, ಮುಜಸೇ ಶಾದಿ ಕರೋಗಿ, ಡಾನ್ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಅಭಿನಯಿಸಿದ್ದ ಚೋಪ್ರಾ ಎರಡು ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ಹಾಗೂ ಐದು ಫಿಲ್ಮ್ ಫೇರ್ ಅವಾರ್ಡ್ಸ್ ಗೆ ಭಾಜನರಾಗಿದ್ದರು. ಆದರೆ ಬಹುಬೇಡಿಕೆಯ ನಟಿಯಾಗಿದ್ದ ಪ್ರಿಯಾಂಕಾ ಚೋಪ್ರಾ ದಿಢೀರನೆ ಬಾಲಿವುಡ್ ತೊರೆದು ಅಮೆರಿಕಕ್ಕೆ ವಲಸೆ ಹೋಗಿರುವ ಹಿಂದಿನ ಕಾರಣ ಏನು ಎಂಬುದನ್ನು ಸ್ವತಃ ಚೋಪ್ರಾ ಬಹಿರಂಗಪಡಿಸಿದ್ದಾರೆ.

Advertisement

ಇದನ್ನೂ ಓದಿ:ಉಮೇಶ್ ಪಾಲ್ ಪ್ರಕರಣ: ಗ್ಯಾಂಗ್ ಸ್ಟರ್ ಅತೀಖ್ ಅಹಮದ್ ದೋಷಿ ಎಂದು ಕೋರ್ಟ್ ತೀರ್ಪು

ಪ್ರಿಯಾಂಕಾ ಅವರು ಡಾಕ್ಸ್ ಶೇಫರ್ಡ್ ಅವರ ಪಾಡ್ ಕಾಸ್ಟ್ Armchair ಎಕ್ಸ್ ಪರ್ಟ್ ನಲ್ಲಿ ಮಾತನಾಡುತ್ತ, ಸಿನಿಮಾರಂಗದಲ್ಲಿನ ರಾಜಕೀಯದಿಂದ ಬೇಸತ್ತಿದ್ದೆ. ಯಾಕೆಂದರೆ ಬಾಲಿವುಡ್ ನಲ್ಲಿ ನನ್ನ ಮೂಲೆಗುಂಪು ಮಾಡಲಾಗಿತ್ತು. ಅಲ್ಲದೇ ನನ್ನ ಕಾರ್ಯಕ್ಷೇತ್ರದ ಬದಲಾವಣೆಯನ್ನು ಅವರು ಬಯಸಿದ್ದರು. ಹಿಂದಿ ಸಿನಿಮಾರಂಗದಲ್ಲಿ ನನ್ನ ಉದ್ದೇಶಪೂರ್ವಕವಾಗಿ ದೂರ ಇಡುತ್ತಿರುವ ಪ್ರಸಂಗದಿಂದ ನಾನು ಬಾಲಿವುಡ್ ಬಿಡುವಂತೆ ಮಾಡಿರುವುದಾಗಿ ಚೋಪ್ರಾ ದೂರಿದ್ದಾರೆ.

“ತನ್ನ ಮ್ಯೂಸಿಕ್ ವಿಡಿಯೋವನ್ನು ಗಮನಿಸಿದ್ದ ದೇಸಿ ಹಿಟ್ಸ್ ನ ಅಂಜುಲಾ ಆಚಾರ್ಯ ಅವರು ನಾನು “ಸಾತ್ ಖೂನ್ ಮಾಫ್” ಸಿನಿಮಾದ ಚಿತ್ರೀಕರಣದಲ್ಲಿದ್ದ ವೇಳೆ ಕರೆ ಮಾಡಿ, ಅಮೆರಿಕದಲ್ಲಿ ನಿಮಗೆ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇದೆಯಾ ಅಂತ ಕೇಳಿದ್ದರು. ಹೀಗೆ ನಾನು ಬಾಲಿವುಡ್ ನಿಂದ ನನ್ನ ವೃತ್ತಿ ಜೀವನದ ಮತ್ತೊಂದು ಮಜಲನ್ನು ಪ್ರವೇಶಿಸಲು ಕಾರಣವಾಯ್ತು. ಅದಕ್ಕೆ ನನಗೆ ಸಾಥ್ ನೀಡಿದ್ದು ಸಂಗೀತ ಕ್ಷೇತ್ರ ಎಂಬುದಾಗಿ ಪ್ರಿಯಾಂಕಾ ಚೋಪ್ರಾ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.

ಅಮೆರಿಕದಲ್ಲಿದ್ದಾಗ ನನಗೆ ಯಾರೋ ಒಬ್ಬರು ನೀವು ಹಾಲಿವುಡ್ ನಲ್ಲಿ ನಟಿಸಲು ಯಾಕೆ ಪ್ರಯತ್ನಿಸಬಾರದು ಎಂದು ಸಲಹೆ ನೀಡಿದ್ದರು. ಅದರಂತೆ 2015ರಲ್ಲಿ ಹಾಲಿವುಡ್ ನ ಕ್ವಾಂಟಿಕೋ ಸಿನಿಮಾದಲ್ಲಿ ಚೋಪ್ರಾ ಲೀಡ್ ರೋಲ್ ನಲ್ಲಿ ನಟಿಸಿದ್ದರು.

Advertisement

ಪ್ರಿಯಾಂಕಾ ಚೋಪ್ರಾ ಅಮೆರಿಕನ್ ಸಿಂಗರ್, ನಟ ನಿಕ್ ಜೋನಾಸ್ ಜೊತೆ ಡೇಟಿಂಗ್ ನಲ್ಲಿದ್ದು, 2018ರಲ್ಲಿ ನಿಕ್ ಮತ್ತು ಜೋನಾಸ್ ವಿವಾಹವಾಗಿದ್ದರು. ಅಮೆರಿಕದಲ್ಲಿ ವಾಸವಾಗಿರುವ ದಂಪತಿಗೆ ಒಂದು ಹೆಣ್ಣು (ಬಾಡಿಗೆ ತಾಯಿ ಮೂಲಕ) ಮಗುವಿದೆ.

ಪ್ರಿಯಾಂಕಾ ಚೋಪ್ರಾ ಬಾಲಿವುಡ್ ತೊರೆಯಲು ಕರಣ್ ಜೋಹರ್ ಕಾರಣ: ಕಂಗನಾ

ಸಿನಿಮಾರಂಗದ ರಾಜಕೀಯದಿಂದ ತಾನು ಬಾಲಿವುಡ್ ಬಿಟ್ಟು ಅಮೆರಿಕ ಸೇರುವಂತಾಗಿತ್ತು ಎಂಬ ಪ್ರಿಯಾಂಕಾ ಚೋಪ್ರಾ ಹೇಳಿಕೆಗೆ ಮತ್ತೊಬ್ಬ ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದು, ಪ್ರಿಯಾಂಕಾ ಬಾಲಿವುಡ್ ತೊರೆಯಲು ನಿರ್ಮಾಪಕ ಕರಣ್ ಜೋಹರ್ ಕಾರಣ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬಾಲಿವುಡ್ ನಟ ಶಾರುಖ್ ಖಾನ್ ಜೊತೆಗಿನ ಚೋಪ್ರಾ ಗೆಳೆತನದ ಕಾರಣದಿಂದಾಗಿ ಕರಣ್ ಜೋಹರ್ ಪ್ರಿಯಾಂಕಾಳನ್ನು ಬ್ಯಾನ್ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ ಎಂದು ಕಂಗನಾ ಸರಣಿ ಟ್ವೀಟ್ ಗಳ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಶಾರುಖ್ ಖಾನ್ ಜೊತೆಗಿನ ಗೆಳೆತನ ಹಾಗೂ ಸಿನಿಮಾರಂಗದ ಮಾಫಿಯಾದ ಪರಿಣಾಮ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ತೊರೆಯುವಂತೆ ಮಾಡಲಾಯ್ತು. ಇದಕ್ಕೆ ಕರಣ್ ಜೋಹರ್ ಕಾರಣ ಎಂದು ಕಂಗನಾ ಆರೋಪಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next