Advertisement

ಓಪ್ರಾ ವಿನ್ಫ್ರೇ ನಡೆಸಿಕೊಡುವ ‘Super Soul’ನ ಮುಂದಿನ ಅತಿಥಿ ಪ್ರಿಯಾಂಕಾ ಚೋಪ್ರಾ..!?  

06:18 PM Mar 14, 2021 | Team Udayavani |

ನವ ದೆಹಲಿ : ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ, ಪ್ರಸ್ತುತ ಅವರ ಆತ್ಮಚರಿತ್ರೆ “ಅನ್ ಫಿನಿಶ್ಡ್” ಪ್ರಚಾರಗಳಲ್ಲಿ ನಿರತರಾಗಿದ್ದಾರೆ, ಓಪ್ರಾ ವಿನ್ಫ್ರೇ ಅವರ ಟಾಕ್ ಶೋ ಸೂಪರ್ ಸೋಲ್ (Super Soul ) ನಲ್ಲಿ ಪ್ರಿಯಾಂಕ ಸದ್ಯದಲ್ಲೆ  ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಚಾರ ಈಗ ಬಹಿರಂಗಗೊಂಡಿದೆ.

Advertisement

ಡಿಸ್ಕವರಿ ಪ್ಲಸ್‌ ನ ಅಧಿಕೃತ ಇನ್‌ ಸ್ಟಾಗ್ರಾಮ್ ಖಾತೆಯಲ್ಲಿ ಸಂದರ್ಶನದ ಪ್ರೋಮೋ ವೀಡಿಯೊವನ್ನು ಹಂಚಿಕೊಂಡಿದ್ದು, ಇದರಲ್ಲಿ ಟಾಕ್ ಶೋ ಹೋಸ್ಟ್, ಪ್ರಿಯಾಂಕಾ ಚೋಪ್ರಾ ಅವರನ್ನು “ನೀವು ಮತ್ತು ನಿಕ್ ಒಂದು ದಿನ ಕುಟುಂಬವನ್ನು ಹೊಂದಬೇಕೆಂದು ಆಶಿಸುತ್ತೀರಾ?” ಎಂದು ಕೇಳಿದ್ದನ್ನು ಗಮನಿಸಬಹುದಾಗಿದೆ.

ಓದಿ : ಪಂಚ ರಾಜ್ಯಗಳ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಪ್ರಿಯಾಂಕ ಚೋಪ್ರಾ ಅವರ ಸಹಸ್ರ ಸಹಸ್ರ ಅಭಿಮಾನಿಗಳ ಕುತೂಹಲ ಭರಿತವಾದ ಪ್ರಶ್ನೆಗೆ ಉತ್ತರ  ಪಡೆಯಲು ಪ್ರದರ್ಶನ ಪ್ರಸಾರವಾಗುವವರೆಗೆ  ಕಾಯಬೇಕಾಗಿದೆ.  ಪ್ರಿಯಾಂಕಾ ಚೋಪ್ರಾ ಜೊತೆಗೆ, ಸಿಸಿಲಿ ಟೈಸನ್, ಶರೋನ್ ಸ್ಟೋನ್, ಜೂಲಿಯಾನಾ ಮಾರ್ಗುಲೀಸ್, ಮಾರ್ಥಾ ಬೆಕ್, ಜಾನ್ ಮೀಚಮ್, ಮತ್ತು ಚಿಪ್ ಮತ್ತು ಜೊವಾನ್ನಾ ಗೇನ್ಸ್ ಕೂಡ ಸೂಪರ್ ಸೋಲ್‌ನಲ್ಲಿ ಅತಿಥಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.

Advertisement

“ಜೀವನದ ಆಳವಾದ ಅರ್ಥದ ಬಗ್ಗೆ ಯೋಚಿಸಲು, ನಮ್ಮೆಲ್ಲರನ್ನು ಪ್ರೇರೇಪಿಸುವ ಜನರೊಂದಿಗೆ ಥಾಟ್ ಪ್ರವೋಕಿಂಗ್, ಹಾರ್ಟ್ ಎಕ್ಸ್ಪಾಂಡಿಂಗ್ ಮಾತುಕತೆಗಳನ್ನು ನಡೆಸಲು ನಾನು ಇಷ್ಟಪಡುತ್ತೇನೆ” ಎಂದು ಚೋಪ್ರಾ ಹೇಳುವುದನ್ನು ಓಫ್ರಾ ಪ್ರೋಮೋ ವೀಡಿಯೊದಲ್ಲಿ ಗಮನಿಸಬಹುದಾಗಿದೆ.

ಇನ್ನು, ಸಂದರ್ಶನವು ಮಾರ್ಚ್ 20 ರಂದು ಡಿಸ್ಕವರಿ + ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.

ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ 2003 ರಲ್ಲಿ ಬಾಲಿವುಡ್‌ನಲ್ಲಿ ಪಾದಾರ್ಪಣೆ ಮಾಡಿದರು. ಮುಜ್ಸೆ ಶಾದಿ ಕರೋಗಿ, ಐತ್ರಾಜ್, ಕ್ರಿಶ್, ಡಾನ್ ಸರಣಿ, ದಿಲ್ ಧಡಕ್ನೆ ದೋ ಮತ್ತು ಬಾಜಿರಾವ್ ಮಸ್ತಾನಿ ಮುಂತಾದ ಹಿಟ್‌ ಸಿನೆಮಾಗಳಲ್ಲಿ ಅವರು ನಟಿಸಿದರು.

ಓದಿ : ಸಾವಿಗೆದುರಾಗಿ ನಿಂತ ‘ಮರುಭೂಮಿಯ ಹೂ’ವಿನ ಘಮ…! 

ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳಾದ ಫ್ಯಾಶನ್, 7 ಖೂನ್ ಮಾಫ್, ಬಾರ್ಫಿ! ಮತ್ತು ಮೇರಿ ಕೋಮ್ ಸಿನೆಮಾಗಳಲ್ಲಿ ಮನೋಜ್ಞವಾದ ಅಭಿನಯದ ಮೂಲಕ ಪ್ರೇಕ್ಷಕರ ಪ್ರೀತಿ ಗಳಿಸಿದ್ದಾರೆ ಪ್ರಿಯಾಂಕ. ಅವರು ಯುಎಸ್ ದೂರದರ್ಶನ ಸಿರಿಸ್ ಕ್ವಾಂಟಿಕೋದಲ್ಲಿ ನಟಿಸಿದರು, ಇದು ಮೂರು ಯಶಸ್ವಿ ಕಂತುಗಳನ್ನು ಪ್ರಸಾರ ಮಾಡಿತು. ಈಸ್ ನಾಟ್ ಇಟ್ ರೊಮ್ಯಾಂಟಿಕ್ ?, ವಿ ಕ್ಯಾನ್ ಬಿ ಹೀರೋಸ್ ಮುಂತಾದ ಚಿತ್ರಗಳಲ್ಲಿಯೂ ಅವರು ನಟಿಸಿದ್ದಾರೆ. ನೆಟ್‌ ಫ್ಲಿಕ್ಸ್‌ನ ದಿ ವೈಟ್ ಟೈಗರ್‌ ನಲ್ಲಿ ಕಾಣಿಸಿಕೊಂಡಿದ್ದನ್ನು ಹೊರತಾಗಿ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿರಲಿಲ್ಲ.

ಓದಿ : ಸಿಡಿ ಪ್ರಕರಣರದ ಸತ್ಯ ತನಿಖೆ ನಂತರ ಗೊತ್ತಾಗುತ್ತದೆ : ವಿಜಯೇಂದ್ರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next