ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಅಭಿವೃದ್ಧಿಗೆ ರಾಜ್ಯ ಬಿಜೆಪಿ ಸರ್ಕಾರ ಕಾಳಜಿತೋರುತ್ತಿಲ್ಲ. ಈ ಭಾಗಕ್ಕೆ ಸಚಿವ ಸಂಪುಟದಲ್ಲಿಸೂಕ್ತ ಪ್ರಾತಿನಿಧ್ಯ ಸಿಗದ ಕಾರಣ ಮತ್ತು ಸರಿಯಾದ ಅನುದಾನ ಬಿಡುಗಡೆ ಮಾಡದೇಇರುವುದರಿಂದ ಕಲ್ಯಾಣ ಕರ್ನಾಟಕಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಕೋಮಾಸ್ಥಿತಿಗೆ ಜಾರಿದೆ ಎಂದು ಕೆಪಿಸಿಸಿ ವಕ್ತಾರರಾದ ಚಿತ್ತಾಪುರಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಯಾವುದೇ ಬದ್ಧತೆ ಇಲ್ಲ. ಕೆಕೆಆರ್‌ಡಿಬಿ ಅಧ್ಯಕ್ಷರನ್ನಾಗಿ ಸಂಪುಟ ದರ್ಜೆಯ ಸಚಿವರನ್ನು ನೇಮಿಸಬೇಕಿತ್ತು. ಆದರೆ, ಶಾಸಕರನ್ನು ನೇಮಿಸುವ ಮೂಲಕ ಕೆಕೆಆರ್‌ಡಿಬಿಯನ್ನು ಮೇಲ್ದರ್ಜೆಯಿಂದ ಕೆಳದರ್ಜೆಗೆ ಇಳಿಸಿದಂತೆ ಆಗಿದೆ.ಈಗಿನ ಕೆಕೆಆರ್‌ಡಿಬಿ ಅಧ್ಯಕ್ಷರು ಸಂಪುಟ ಸಮಿತಿ, ಹಣಕಾಸು ಸಮಿತಿ, ಯೋಜನಾಸಮಿತಿ ಸೇರಿದಂತೆ ಸರ್ಕಾರದ ಉನ್ನತ ಮಟ್ಟದಸಭೆಯಲ್ಲಿ ಭಾಗವಹಿಸುವಂತಿಲ್ಲ. ಹೀಗಿದ್ದಾಗ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಪ್ರತಿ ವರ್ಷ ಕೆಕೆಆರ್‌ಡಿಬಿಗೆ 1,500 ಸಾವಿರ ಕೋಟಿ ರೂ. ಅನುದಾನ ನೀಡಬೇಕು. ಆದರೆ, ಈ ಬಾರಿ ಕೇವಲ 1,131 ಕೋಟಿ ರೂ. ನೀಡಲಾಗಿದೆ. ಅದರಲ್ಲೂ 952 ಕೋಟಿ ರೂ.ಗೆ ಮಾತ್ರ ಕ್ರಿಯಾಯೋಜನೆ ರೂಪಿಸಲಾಗಿದೆ. ಉಳಿದ 179 ಕೋಟಿ ರೂ.ಗಳ ಕ್ರಿಯಾಯೋಜನೆ ಯಾಕೆ ನೀಡಿಲ್ಲ? ಮೇಲಾಗಿ ಇಲ್ಲಿಯ ವರೆಗೆ ಸರ್ಕಾರದಿಂದ ಎರಡು ಕಂತಿನಲ್ಲಿ ಬರೀ 544 ಕೋಟಿ ರೂ. ಮಾತ್ರ ಬಿಡುಗಡೆಮಾಡಲಾಗಿದೆ. ಪ್ರಸಕ್ತ ವರ್ಷ ಮುಗಿಯುತ್ತಾಬಂದರೂ ಅಗತ್ಯ ಅನುದಾನ ಬಿಡುಗಡೆ ಆಗುತ್ತಿಲ್ಲ.ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಸದ್ಯ ಡಿಸೆಂಬರ್ ತಿಂಗಳು ಪೂರ್ತಿ ಗ್ರಾಮ ಪಂಚಾಯಿತಿಚುನಾವಣೆ ನೀತಿ ಸಂಹಿತೆಯಲ್ಲೇ ಕಳೆದು ಹೋಗುತ್ತದೆ.ಮುಂದಿನ ಮೂರು ತಿಂಗಳಲ್ಲಿ ಯಾವ ಕೆಲಸಮಾಡಲು ಸಾಧ್ಯ? ಬಾಕಿ ಅನುದಾನದ ಬಿಡುಗಡೆಮಾಡುವುದು ಯಾವಾಗ? ಹೊಸ ಕ್ರಿಯಾಯೋಜನೆ ರೂಪಿಸುವುದು ಯಾವಾಗ? ಅವುಗಳಿಗೆ ಆಡಳಿತಾತ್ಮಕ ಅನುಮೋದನೆ ಪಡೆಯುವುದು ಯಾವಾಗ? ಎಂದು ಪ್ರಶ್ನಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಶಾಸಕರಿಗೆ ಸಚಿವ ಸ್ಥಾನಮಾನ ನೀಡದೆ ನಿಗಮ ಮಂಡಳಿ ನೀಡಿ,ತೃಪ್ತಿಪಡಿಸುವ ಕೆಲಸ ಮಾಡಲಾಗುತ್ತಿದೆ. ಯಾವೊಬ್ಬ ಬಿಜೆಪಿ ಶಾಸಕರೂ ಈ ಭಾಗಕ್ಕೆ ಆಗುತ್ತಿರುವಅನ್ಯಾಯದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಶ್ನೆ ಮಾಡುತ್ತಿಲ್ಲ. ಅಲ್ಲದೇ, ಅನುದಾನ ಬಿಡುಗಡೆ ಬಗ್ಗೆಕೆಕೆಆರ್‌ಡಿಬಿ ಅಧ್ಯಕ್ಷರು ಜನರ ದಾರಿ ತಪ್ಪಿಸುತ್ತಿದ್ದಾರೆ. ಕಳೆದ ಸಾಲಿನ 368 ಕೋಟಿ ರೂ. ಬಾಕಿ ಉಳಿದಿದೆ.ಇದನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂಬಂತೆ ಹೇಳಿಕೆ ಕೊಡುತ್ತಿದ್ದಾರೆ. ಈ ನಡುವೆ ಕಳೆದ ಸಾಲಿನ ಅನುದಾನ ಮತ್ತು ಈ ಬಾರಿ ಬಿಡುಗಡೆಗೊಂಡ ಅನುದಾನವನ್ನು ಖರ್ಚು ಮಾಡಲು ಆಗಿಲ್ಲ. ಶೇ.78 ಮೊತ್ತ ಖರ್ಚು ಮಾಡದಿದ್ದರೆ ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದು ಕೆಕೆಆರ್ ಡಿಬಿ ಕಾರ್ಯದರ್ಶಿಗಳಿಗೆ ಸರ್ಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖೀÂಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಇದು ಮಂಡಳಿ ಅಧ್ಯಕ್ಷರು ಮತ್ತು ಬಿಜೆಪಿಶಾಸಕರ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು. ಈ ಬಾರಿ ಮುಖ್ಯಮಂತ್ರಿ, ಸರ್ಕಾರ ಮತ್ತು ಕೆಕೆಆರ್‌ಡಿಬಿ ಅಧ್ಯಕ್ಷರ ವಿವೇಚನಾ ಕೋಟಾ ಅನುದಾನ ರದ್ದು ಮಾಡಬೇಕು. ಪ್ರವಾಹದಿಂದ ಜನರು ಸಂಕಷ್ಟದಲ್ಲಿದ್ದು,ಮೈಕ್ರೋ ಯೋಜನೆಗಳ ಅನುದಾನ ನೆರೆ ಪರಿಹಾರಕ್ಕೆ ಬಳಕೆ ಮಾಡಬೇಕೆಂದು ಒತ್ತಾಯಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಠೊಡ, ಯುವ ಘಟಕದ ಅಧ್ಯಕ್ಷ ಈರಣ್ಣ ಝಳಕಿ, ಮುಖಂಡ ಸುಭಾಷ ರಾಠೊಡ, ಯುವ ವಕ್ತಾರ ಗೋನಾಯಕ ಇದ್ದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಕೆಕೆಆರ್‌ಡಿಬಿಯ ಉಪ ಸಮಿತಿ ರಚಿಸಲು ಆಗಿಲ್ಲ. ಬಿಜೆಪಿಶಾಸಕರಿಗೆ ಸರ್ಕಾರದ ಎದುರು ಮಾತನಾಡಲುಸಾಧ್ಯವಾಗದಿದ್ದರೇ, ಪ್ರತಿಪಕ್ಷದ ಶಾಸಕರನ್ನು ಕರೆದುಕೊಂಡು ಹೋಗಿ. ನಮಗೆ ಸರ್ಕಾರದ ಎದುರು ಧ್ವನಿ ಎತ್ತಲು ಯಾವುದೇ ಭಯವಿಲ್ಲ. –
ಪ್ರಿಯಾಂಕ್ ಖರ್ಗೆ, ಕೆಪಿಪಿಸಿ ವಕ್ತಾರ