ಕಲಬುರಗಿ: ಅಕ್ರಮ ಪಿಸ್ತೂಲ್ ಖರೀದಿ ಆರೋಪದ ಮೇರೆಗೆ ಶಾಸಕ ಖರ್ಗೆ ಅವರ ಆಪ್ತರಾಗಿರುವ ಪಾಲಿಕೆ ಮಾಜಿ ಸದಸ್ಯ ರಾಜು ಕಪನೂರ ಅವರನ್ನು ಬಂಧಿಸಲಾಗಿದೆ.
ಜಿಲ್ಲೆಯ ಯಡ್ರಾಮಿ ಪೊಲೀಸರು ರಾಜು ಕಪನೂರ್ ಅವರನ್ನು ಬಂಧಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿದೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಎರಡು ಕಂಟ್ರಿಮೇಡ್ ಪಿಸ್ತೂಲ್ ಹಾಗೂ 30 ಗುಂಡು ಖರೀದಿ ಮಾಡಿದ ಆರೋಪ ಮೇರೆಗೆ ರಾಜು ಕಪನೂರ್ ಅವರನ್ನು ಬಂಧಿಸಲಾಗಿದೆ. ಸೆಪ್ಟೆಂಬರ್ನಲ್ಲಿ ಗುರಲಿಂಗಪ್ಪ ಎಂಬುವರಿಂದ ಕಂಟ್ರಿಮೇಡ್ ಗನ್ ಖರೀದಿ ಮಾಡಲಾಗಿದೆ ಎನ್ನಲಾಗಿದೆ.
ಗುರುಲಿಂಗಪ್ಪ ಪೊಲೀಸರ ಮುಂದೆ ನೀಡಿದ್ದ ವಿಡಿಯೋ ಸ್ಟೇಟ್ ಮೆಂಟ್ನಲ್ಲಿ ಕಪನೂರ್ ಹೆಸರು ಉಲ್ಲೇಖ ಮಾಡಲಾಗಿತ್ತು. ತದನಂತರ ರಾಜು ಕಪನೂರ್ ಹೆಸರು ಉಲ್ಲೇಖದ ಬಳಿಕ ಎರಡು ಪೊಲೀಸ ರು ನೋಟಿಸ್ ನೀಡಿದ್ದರು.
Related Articles
ಅದಲ್ಲದೇ ಶುಕ್ರವಾರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಪತ್ರಿಕಾ ಗೋಷ್ಠಿ ಕರೆದು ತನ್ನನ್ನೂ ಗುರಿ ಮಾಡೋದಕ್ಕೆ ರಾಜು ಕಪನೂರ್ ಗನ್ ಖರೀದಿ ಮಾಡಿದ್ದ ಎಂದು ಆರೋಪಿಸಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು.