ವಾಡಿ: ಸಾರ್ವಜನಿಕವಾಗಿ ಭಾಷಣ ಮಾಡುತ್ತ ಕಲಬುರಗಿ ಜಿಲ್ಲೆಯ ಬಿಜೆಪಿ ನಾಯಕರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ.
ಈ ಕುರಿತು ಬುಧವಾರ ಸಂಜೆ ತಮ್ಮ ಕಾರ್ಯಕರ್ತರೊಂದಿಗೆ ಚಿತ್ತಾಪುರ ತಾಲೂಕಿನ ವಾಡಿ ಪೋಲಿಸ್ ಠಾಣೆಗೆ ಆಗಮಿಸಿದ ಬಿಜೆಪಿ ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ, ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಠಾಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ನ.10 ರಂದು ವಾಡಿಯಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿರುವ ಖರ್ಗೆ, ನಾನು ಮನಸ್ಸು ಮಾಡಿದರೆ ಕಲಬುರಗಿ ಜಿಲ್ಲೆಯ ಒಬ್ಬ ಬಿಜೆಪಿ ನಾಯಕನೂ ಹೊರಗಡೆ ಓಡಾಡದಂತೆ ಮಾಡುತ್ತೇನೆ ಎಂದು ಹೇಳುವ ಮೂಲಕ ಕೊಲೆ ಬೆದರಿಕೆ ಹಾಕಿದ್ದಾರೆ. ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಚಿತ್ತಾಪುರ ಮೀಸಲು ಮತಕ್ಷೇತ್ರದ ಭಾಜಪ ಟಿಕೇಟ್ ಆಕಾಂಕ್ಷಿಗಳಾದ ಅರವಿಂದ ಚವ್ಹಾಣ, ವಿಠ್ಠಲ ವಾಲ್ಮೀಕಿ ನಾಯಕ, ಮಣಿಕಂಠ ರಾಠೋಡ, ಎಸ್ ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ರಾವೂರ ಶಕ್ತಿಕೇಂದ್ರ ಅಧ್ಯಕ್ಷ ಬಸವರಾಜ ಮಡ್ಡಿ, ಮುಖಂಡರಾದ ಶಾಮಸನ್ ಐಸಿಯಾ, ಕಿಶನ ಜಾಧವ, ರಿಚ್ಚರ್ಡ್ ಮರೆಡ್ಡಿ, ವಿಜಯ ಪವಾರ ಮತ್ತಿತರರು ಇದ್ದರು.
Related Articles
ಇದನ್ನೂ ಓದಿ : ದಂತ ವೈದ್ಯರ ಸಾವು ಆತ್ಮಹತ್ಯೆಯಿಂದ? ಕಾಸರಗೋಡಿನಿಂದ ಕುಂದಾಪುರಕ್ಕೆ ಬಸ್‌ನಲ್ಲಿ ಬಂದಿದ್ದರು