Advertisement

ಚೆನ್ನೈ ಮೇಯರ್‌ ಆಗಿ ಮೊದಲ ದಲಿತ ಮಹಿಳೆ?

08:47 PM Mar 03, 2022 | Team Udayavani |

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಬೃಹತ್‌ ಚೆನ್ನೈ ಮಹಾನಗರ ಪಾಲಿಕೆಯ ಮೇಯರ್‌ ಸ್ಥಾನಕ್ಕೆ ಸದ್ಯದಲ್ಲೇ ನಡೆಯಲಿರುವ ಚುನಾವಣೆಗಾಗಿ ಆಡಳಿತಾರೂಢ ಡಿಎಂಕೆ, ಆರ್‌. ಪ್ರಿಯಾ (28) ಎಂಬ ದಲಿತ ಮಹಿಳೆಯರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.

Advertisement

ಚೆನ್ನೈ ಮಹಾನಗರ ಪಾಲಿಕೆಯಲ್ಲಿ ಇತ್ತೀಚೆಗೆ ಅತಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವ ಡಿಎಂಕೆಯ ಅಭ್ಯರ್ಥಿಯೇ ಗೆಲುವು ಕಾಣುವುದು ನಿಶ್ಚಿತವಾಗಿದ್ದು, ಆ ಹಿನ್ನೆಲೆಯಲ್ಲಿ ಪ್ರಿಯಾ ಅವರೇ ಮೇಯರ್‌ ಹುದ್ದೆಗೆ ಏರುವುದು ಖಚಿತವಾಗಿದೆ.

ಹಾಗಾದಲ್ಲಿ, ಈ ಹುದ್ದೆಗೇರಿದ ಮೊಟ್ಟಮೊದಲ ದಲಿತ ಮಹಿಳೆ ಎಂಬ ಹೆಗ್ಗಳಿಕೆಗೆ ಪ್ರಿಯಾ ಅವರು ಪಾತ್ರರಾಗಲಿದ್ದಾರೆ. ಪ್ರಿಯಾ ಅವರು, ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತರ ಚೆನ್ನೈನ ತಿರು ವಿ ಕಾ ನಗರ್‌ನಿಂದ ಜಯ ಗಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next