ಕೊಪ್ಪಳ: ಗಣ್ಯ ವ್ಯಕ್ತಿಗಳಂತೆ ರೈತರು ಸಹ ಸ್ಮಾರ್ಟ್ ಕಾರ್ಡ್ ಹೊಂದಿರಬೇಕು. ಸರ್ಕಾರದ ಪ್ರತಿಯೊಂದು ಸೌಲಭ್ಯವೂ ಅವರಿಗೆ ನೇರವಾಗಿ ಸಿಗುವಂತಾಗಬೇಕೆಂಬ ಸದುದ್ದೇಶದಿಂದ ರಾಜ್ಯಸರ್ಕಾರವು ರೈತರಿಗಾಗಿ “ಸ್ವಾಭಿಮಾನಿ ಕಾರ್ಡ್’ ಯೋಜನೆ ಜಾರಿಗೊಳಿಸಿ ಜಿಲ್ಲೆಯಲ್ಲಿಯೇ ಮಾದರಿಯನ್ನಾಗಿ ಮಾಡಿದೆ. ಆದರೆ ಇಲ್ಲಿಯವರೆಗೂ 1.41 ಲಕ್ಷ ರೈತರ ಪೈಕಿ, 18 ಸಾವಿರ ರೈತರಿಗೆ ಮಾತ್ರಕಾರ್ಡ್ ವಿತರಿಸಲಾಗಿದೆ. ಇನ್ನೂ 1.23 ಲಕ್ಷ ರೈತರಿಗೆಕಾರ್ಡ್ ತಲುಪಿಸುವ ಕೆಲಸ ನಡೆಯಬೇಕಿದೆ.
ಆಧುನಿಕ ಕಾಲಘಟ್ಟದಲ್ಲಿ ಎಲ್ಲವೂ ಡಿಜಿಟಲ್ ಆಗಿ ರೂಪಗೊಳ್ಳುತ್ತಿದೆ. ಕೃಷಿ ಇಲಾಖೆಯೂ ಇದಕ್ಕೆಹೊರತಾಗಿಲ್ಲ. ಸಂಘ- ಸಂಸ್ಥೆಗಳು, ರಾಜಕೀಯಜನಪ್ರತಿನಿ ಧಿಗಳು, ನೌಕರ ವರ್ಗದವರು ಹೇಗೆತಮ್ಮ ಕೆಲಸದ ಗುರುತಿನ ಚೀಟಿ ಹೊಂದಿರುತ್ತಾರೋಅದೇ ಮಾದರಿಯಲ್ಲಿ ರೈತರೂ ತಮ್ಮದೇ ಸ್ಮಾರ್ಟ್‌ಕಾರ್ಡ್ ಹೊಂದಬೇಕು. ನಾನೊಬ್ಬ ಹೆಮ್ಮೆಯ ರೈತ, ಸ್ವಾಭಿಮಾನಿ ರೈತ ಎಂದು ಹೇಳಿಕೊಳ್ಳಲು ಅವರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲು ಸರ್ಕಾರ ಯೋಜನೆ ಜಾರಿ ತಂದಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ ಅವರುಕೊಪ್ಪಳ ಜಿಲ್ಲಾ ಉಸ್ತುವಾರಿಯಾಗಿದ್ದರಿಂದ ಈ ಜಿಲ್ಲೆಯಲ್ಲೇ ಎಲ್ಲ ರೈತರಿಗೂ ಸ್ವಾಭಿಮಾನಿ ಕಾರ್ಡ್ ವಿತರಿಸಲು ಮುಂದಾಗಿದ್ದಾರೆ.
ಫೋಟೋ ಮಿಸ್‌ಮ್ಯಾಚ್ : ರೈತರಿಗೆ ಸರ್ಕಾರದಸ್ವಾಭಿಮಾನಿ ರೈತರ ಕಾರ್ಡ್ ವಿತರಣೆಗೆ ರೈತರಫೋಟೋಗಳ ಮಿಸ್‌ಮ್ಯಾಚ್‌ನಿಂದ ತೊಂದರೆ ಎದುರಾಗುತ್ತಿದೆ. ಕೃಷಿ ಇಲಾಖೆಯು ಮೊದಲೆಲ್ಲಾ ಸರ್ಕಾರಿ ಸೌಲಭ್ಯಕ್ಕೆ ಕೇವಲ ಅವರಿಂದ ದಾಖಲೆ ಪಡೆದಿದೆ. ಫ್ರೊಟ್ ಐಡಿಯಲ್ಲೂ ದಾಖಲೆಗಳು ಮಾತ್ರ ಲಿಂಕ್ ಆಗಿದ್ದು, ಫೋಟೋಗಳು ಲಿಂಕ್ ಇಲ್ಲ. ಹಾಗಾಗಿ ಸ್ವಾಭಿಮಾನಿ ರೈತರ ಕಾರ್ಡ್‌ಗೆ ಫೋಟೋಅವಶ್ಯವಾಗಿ ಬೇಕಿದ್ದರಿಂದ ಕೆಲವುಕಡೆ ಫೋಟೋಗಳು ಮಿಸ್‌ಮ್ಯಾಚ್ ಆಗುತ್ತಿವೆ. ಹಾಗಾಗಿ ಕಾರ್ಡ್ ವಿತರಣೆಯಲ್ಲಿ ತೊಂದರೆಯಾಗುತ್ತಿದೆ.
18 ಸಾವಿರ ಕಾರ್ಡ್ ವಿತರಣೆ: ಜಿಲ್ಲೆಯಲ್ಲಿ ಇಲ್ಲಿವರೆಗೂ ಆಯಾ ರೈತ ಸಂಪರ್ಕ ಕೇಂದ್ರಗಳ ಮೂಲಕ 18,903 ರೈತರಿಗೆ ಸ್ವಾಭಿಮಾನಿ ಕಾರ್ಡ್ ವಿತರಿಸಲಾಗಿದೆ.ಈ ಪೈಕಿ ಕೊಪ್ಪಳ ತಾಲೂಕಿನಲ್ಲಿ 5502, ಕುಷ್ಟಗಿ ತಾಲೂಕಿನಲ್ಲಿ 4815, ಯಲಬುರ್ಗಾ ತಾಲೂಕಿನಲ್ಲಿ 5631, ಗಂಗಾವತಿ ತಾಲೂಕಿನಲ್ಲಿ 2955 ಸೇರಿ ಒಟ್ಟಾರೆ 18903 ರೈತರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗಿದೆ. 1.23 ಕಾರ್ಡ್ ವಿತರಣೆ ಬಾಕಿ: ಕೃಷಿ ಇಲಾಖೆಯ ಲೆಕ್ಕಾಚಾರದ ಪ್ರಕಾರ ಜಿಲ್ಲೆಯಲ್ಲಿ ಒಟ್ಟಾರೆ 2.18 ಲಕ್ಷರೈತರಿದ್ದಾರೆ. ಆದರೆ ಇಲಾಖೆಯ ಪ್ರೂÂಟ್ ಸಾಫ್ಟವೇರ್ ನಲ್ಲಿ 1.41 ಲಕ್ಷ ರೈತರು ನೋಂದಣಿಯಾಗಿದ್ದಾರೆ.ಅವರು ಮೊದಲ ಹಂತದಲ್ಲಿ ಸ್ಮಾರ್ಟ್ ಕಾರ್ಡ್‌ಪಡೆಯಲು ಅರ್ಹರಿದ್ದಾರೆ. ಅವರಿಗೆ ಕಾರ್ಡ್‌ವಿತರಿಸಲು ಸರ್ಕಾರ ಯೋಜನೆ ರೂಪಿಸಿದ್ದು, ಈ ಪೈಕಿ18 ಸಾವಿರ ಕಾರ್ಡ್ ವಿತರಿಸಿದರೆ, ಇನ್ನೂ 1.23 ಲಕ್ಷರೈತರಿಗೆ ಕಾರ್ಡ್ ವಿತರಿಸುವುದು ಬಾಕಿಯಿದೆ.
ಎಲ್ಲ ಸೌಲಭ್ಯಕ್ಕೂ ಅರ್ಹ: ಇನ್ಮುಂದೆ ರೈತರು ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಕೃಷಿಸೇರಿ ಇತರೆ ಇಲಾಖೆಗೆ ನೂರೆಂಟು ದಾಖಲೆಗಳನ್ನುಹಿಡಿದು ಅಲೆದಾಡುವ ಅಗತ್ಯವಿಲ್ಲ. ಬದಲಾಗಿ ಈಸ್ಮಾರ್ಟ್ ಕಾರ್ಡ್ ಒಂದೇ ತೆಗೆದುಕೊಂಡು ಹೋಗಿಕೊಟ್ಟರೆ ಸಾಕು. ಕಾರ್ಡ್‌ನಲ್ಲಿಯೇ ರೈತರ ಪಹಣಿ,ಬ್ಯಾಂಕ್ ಖಾತೆ, ಯಾವ ಜಮೀನು, ದೊಡ್ಡ, ಸಣ್ಣಹಿಡುವಳಿದಾರ, ನೀರಾವರಿ, ಒಣ ಬೇಸಾಯಸೇರಿದಂತೆ ಪ್ರತಿ ಮಾಹಿತಿ ಅದರಲ್ಲಿ ಅಡಕವಾಗಿರಲಿದೆ.ಸರ್ಕಾರದ ಮುಂದಿನ ಪ್ರತಿ ಸೌಲಭ್ಯಕ್ಕೂ ಇದುಬೇಕಾಗಲಿದೆ. ಆ ಉದ್ದೇಶದಿಂದಲೇ ಸರ್ಕಾರ ಈ ಕಾರ್ಡ್ ವಿತರಣೆಗೆ ಮುಂದಾಗಿದೆ. ಆದರೆ ವಿತರಣೆ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆದಿದೆ.
ರೈತರ ಸ್ವಾಭಿಮಾನಿ ಕಾರ್ಡ್ ವಿತರಣೆಗೆ ಸದ್ಯ ರೈತರಿಂದ ಯಾವುದೇ ದಾಖಲೆಪಡೆದಿಲ್ಲ. ಈಗಾಗಲೇ ನಮ್ಮ ಇಲಾಖೆಯಲ್ಲಿ ಸೌಲಭ್ಯ ಪಡೆದ ರೈತರ ದಾಖಲೆ ಆಧಾರದಲ್ಲೇ ಅಂತಹ ರೈತರಿಗೆ ಕಾರ್ಡ್ ವಿತರಿಸುತ್ತಿದ್ದೇವೆ. ಅದರಲ್ಲೂ ಪ್ರೊಟ್ ಐಡಿಯಲ್ಲಿ ರೈತರ ಫೋಟೋ ಮಿಸ್‌ಮ್ಯಾಚ್ ಬಂದಿವೆ. ಅವುಗಳನ್ನು ಸರಿಪಡಿಸಲು ನಮಗೆ ಲಾಗಿನ್‌ನಲ್ಲಿ ಅವಕಾಶಕೊಡುವಂತೆ ರಾಜ್ಯ ಇಲಾಖೆ ಕೇಳಿದ್ದೇವೆ. ಹಂತಹಂತವಾಗಿ ಪ್ರಿಂಟ್ ಆದ ಕಾರ್ಡ್‌ಗಳನ್ನುರೈತರಿಗೆ ವಿತರಿಸುತ್ತಿದ್ದು, ಏಪ್ರಿಲ್ ಅಂತ್ಯದೊಳಗೆ ಬಹುಪಾಲು ರೈತರಿಗೆ ಕಾರ್ಡ್ ವಿತರಿಸಲಿದ್ದೇವೆ.
– ಶಿವಕುಮಾರ, ಜಂಟಿ ಕೃಷಿ ನಿರ್ದೇಶಕ ಕೊಪ್ಪಳ