ವಿಜಯಪುರ: ಸಾರಿಗೆ ನೌಕರರ ಸಂಘಟನೆ ಮುಷ್ಕರ ಕರೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಸಂಚಾರ ವಿರಳವಾಗಿದೆ. ಪರಿಣಾಮ ಹಲೆವೆಡೆ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ.
ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟೆ ಭಾಗದಲ್ಲಿ ಬಸ್ ಸಂಚಾರ ಬಹುತೇಕ ಕ್ಷೀಣಿಸಿದ್ದು, ಖಾಸಗಿ ವಾಹನಗಳ ದರ್ಬಾರ್ ಹೆಚ್ಚಿದೆ. ಖಾಸಗಿ ವಾಹನಗಳ ಮಾಲೀಕರು ಮನಬಂದಂತೆ ಪ್ರಯಾಣ ದರ ವಸೂಲಿಗೆ ಇಳಿದಿದ್ದಾರೆ. ಇದರಿಂದ ಬೇರೆ ಬೇರೆ ಪ್ರದೇಶಗಳಿಂದ ಬಂದಿರುವ ಪ್ರಯಾಣಿಕರು ತಮ್ಮ ಊರಿಗೆ ತೆರಳಲು ಪರದಾಡುವಂತಾಗಿದೆ.
ಇದನ್ನೂ ಓದಿ:ಕೊಪ್ಪಳ ಬಸ್ ಬಂದ್ ಬಿಸಿ: ಸಾರಿಗೆ ಘಟಕದಲ್ಲಿ ಟ್ಯಾಕ್ಸಿಗಳ ಓಡಾಟ, ಪೊಲೀಸ್ ಭದ್ರತೆ
ಜಿಲ್ಲೆಯಲ್ಲಿ ಮುಷ್ಕರಕ್ಕೆ ಬೆಂಬಲಿಸುವುದಿಲ್ಲ ಎಂದು ಕಾರ್ಮಿಕರ ಸಂಘಟನೆಗಳ ನಾಯಕರು ಹೇಳಿದ್ದರು. ಇದನ್ನು ನಂಬಿ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪರ್ಯಾಯ ಸಾರಿಗೆ ವ್ಯವಸ್ಥೆ ಅಗತ್ಯವಿಲ್ಲ ಎಂದಿದ್ದರು.
ಆದರೆ ಬುಧವಾರ ಬೆಳಿಗ್ಗೆ ಚಾಲಕ- ನಿರ್ವಾಹಕರು ಬಹುತೇಕ ಎಲ್ಲಾ ಕಡೆ ಕರ್ತವ್ಯಕ್ಕೆ ಹಾಜರಾಗದೇ ಆಘಾತ ನೀಡಿದ್ದಾರೆ. ಹಲವೆಡೆ ಕರ್ತವ್ಯಕ್ಕೆ ಹಾಜರಾಗಲು ಘಟಕಕ್ಕೆ ಬಂದವರನ್ನು ಕಾರ್ಮಿಕ ಸಂಘಟನೆ ಪ್ರಮುಖರು ಮರಳಿ ಕಳಿಸಿದರು. ಇದರಿಂದಾಗಿ ಬಹುತೇಕ ಎಲ್ಲೆಡೆ ಬಸ್ ಸಂಚಾರ ಕ್ಷೀಣಿಸಿದೆ.
ಇದನ್ನೂ ಓದಿ: ಕರಾವಳಿಗೆ ತಟ್ಟದ ಬಸ್ ಬಂದ್ ಬಿಸಿ: ಮಂಗಳೂರು KSRTC ಬಸ್ ನಿಲ್ದಾಣದೊಳಗೆ ಬಂದ ಖಾಸಗಿ ಬಸ್ ಗಳು
ಪರಿಣಾಮ ಖಾಸಗಿ ವಾಹನಗಳು ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಪ್ರವೇಶಿಸಿದ್ದು, ನಿಗದಿಗಿಂತ ಅಧಿಕ ಪ್ರಯಾಣ ದರ ವಿಧಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ. ಹಲವೆಡೆ ಹಣ ಕೊಟ್ಟರೂ ತಮ್ಮ ಗ್ರಾಮಗಳಿಗೆ ತೆರಳು ವಾಹನಗಳಿಲ್ಲದೇ ಪ್ರಯಾಣಿಕರು ಪರದಾಟ ನಡೆಸಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ: ಖಾಸಗಿ ಬಸ್ ಓಡಾಟ, ಪ್ರಯಾಣಿಕರ ಪರದಾಟ