Advertisement
ಈ ಮೂಲಕ ವಿದ್ಯಾರ್ಥಿಗಳಿಗೆ ತಕ್ಕಮಟ್ಟಿಗೆ ಪರೀಕ್ಷೆ ಗಳ ಹೊರೆ ತಗ್ಗಿಸಲು ನಿರ್ಧರಿಸಲಾಗಿದೆ.ಖಾಸಗಿ ವಿ.ವಿ.ಗಳಲ್ಲಿ ಸಾಮಾನ್ಯವಾಗಿ ಒಟ್ಟಾರೆ ಶೇ. 100 ಸೀಟುಗಳಲ್ಲಿ 40ರಷ್ಟಕ್ಕೆ ಸರಕಾರಗಳು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿನ (ಸಿಇಟಿ) ಮೆರಿಟ್ ಆಧಾರದ ಮೇಲೆ ಪ್ರವೇಶ ಕಲ್ಪಿಸಲಾಗುತ್ತದೆ. ಉಳಿದವುಗಳಿಗೆ ವಿವಿಧ ರೀತಿಯ ಪರೀಕ್ಷೆಗಳು ಅಥವಾ ತಮ್ಮದೇ ಆದ ಪ್ರತ್ಯೇಕ ಪರೀಕ್ಷೆ ನಡೆಸಿ ಸೀಟು ಹಂಚಿಕೆ ಮಾಡಲಾಗುತ್ತಿದೆ. ಇದರಲ್ಲಿ ಏಕರೂಪ ವ್ಯವಸ್ಥೆ ತರಲು ಈ ನಿರ್ಣಯ ಕೈಗೊಳ್ಳಲಾಗಿದೆ.
Related Articles
Advertisement
ಶುಲ್ಕದಲ್ಲೂ ಏಕರೂಪತೆಗೆ ಸಮಿತಿಇದಲ್ಲದೆ ಖಾಸಗಿ ವಿ.ವಿ.ಗಳಲ್ಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಶುಲ್ಕದಲ್ಲೂ ಏಕರೂಪತೆ ತರಲು ಉದ್ದೇಶಿಸಿದ್ದು, ಈ ಸಂಬಂಧ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ದೇಶನ ನೀಡಲಾಗಿದೆ ಎಂದು ಡಾ| ಸುಧಾಕರ್ ತಿಳಿಸಿದರು. ಈಗಿರುವ ವ್ಯವಸ್ಥೆಯಲ್ಲಿ ಖಾಸಗಿ ವಿ.ವಿ.ಗಳು ಬೇಕಾಬಿಟ್ಟಿ ಶುಲ್ಕ ನಿಗದಿಪಡಿಸುತ್ತಿವೆ. ಅದನ್ನು ನಿಯಂತ್ರಿಸಿ ಏಕರೂಪ ವ್ಯವಸ್ಥೆ ಜಾರಿಗೊಳಿಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸುವ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (ಕೆಇಎ) ಈಗಾಗಲೇ ಶುಲ್ಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ಇದ್ದು, ದಾಖಲಾಗುವ ದೂರುಗಳ ಅನ್ವಯ ಅದು ಕ್ರಮ ಕೈಗೊಳ್ಳುತ್ತಿದೆ. ಪ್ರವೇಶ, ಸಂಯೋಜನೆಗೂ ವೇಳಾಪಟ್ಟಿ
ಬರುವ ಶೈಕ್ಷಣಿಕ ವರ್ಷಕ್ಕೆ ರಾಜ್ಯದ ಎಲ್ಲ ವಿ.ವಿ.ಗಳು ಪ್ರವೇಶಾತಿ, ಪರೀûಾ ವೇಳಾಪಟ್ಟಿ, ಫಲಿತಾಂಶ ಪ್ರಕಟನೆ ಹಾಗೂ ಸಂಯೋಜನೆಗೂ ಸಚಿವ ಡಾ| ಸುಧಾಕರ್ ವೇಳಾಪಟ್ಟಿ ಪ್ರಕಟಿಸಿದರು. ಕಾಲೇಜುಗಳು ಹೊಸ ಕೋರ್ಸ್‌ಗಳ ಸಂಯೋಜನೆ ಹಾಗೂ ತಮ್ಮಲ್ಲಿ ಲಭ್ಯವಿರುವ ಸೀಟುಗಳ (ಇನ್‌ಟೇಕ್) ಮಾಹಿತಿ ಪ್ರಕಟಿಸಲು ವೇಳಾಪಟ್ಟಿ ಪ್ರಕಟಿಸಿದೆ. ಪ್ರತೀ ಮಾರ್ಚ್ ವೇಳೆಗೆ ಸರಕಾರಕ್ಕೆ ಮಾಹಿತಿ ನೀಡಬೇಕು ಎಂದರು. ಏಕೆ ಈ ನಿರ್ಧಾರ?
– ವಿದ್ಯಾರ್ಥಿಗಳಿಗೆ ತಕ್ಕಮಟ್ಟಿಗೆ ಪರೀ ಕ್ಷೆಗಳ ಹೊರೆ ತಗ್ಗಿಸಲು ಈ ನಿರ್ಧಾರ
– ತಮ್ಮದೇ ಆದ ಪ್ರತ್ಯೇಕ ಪರೀಕ್ಷೆಗಳನ್ನು ನಡೆಸಿ ಸೀಟು ಹಂಚಿ ಕೆಗೆ ಕಡಿವಾಣ
– ಕೇಂದ್ರ-ರಾಜ್ಯ ಸರಕಾರಗಳು ನಡೆ ಸುವ ಪರೀ ಕ್ಷೆಯೇ ಮಾನ ದಂಡ
-ಶುಲ್ಕದಲ್ಲೂ ಏಕರೂಪತೆಗೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ