Advertisement

Private Job Quota:ಖಾಸಗಿ ವಲಯದಲ್ಲಿ ಮೀಸಲಾತಿ ವಿಧೇಯಕ ಜಾರಿಯಾದರೆ…ಮುಂದಿನ ಪರಿಣಾಮವೇನು?

12:20 PM Jul 19, 2024 | Team Udayavani |

ಖಾಸಗಿ ವಲಯದ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಅನುಷ್ಠಾನದ ಕುರಿತಾಗಿ ಕರ್ನಾಟಕ ಸರ್ಕಾರ ತೆಗೆದುಕೊಳ್ಳುವ ನಿರ್ಣಯ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಹುಟ್ಥಿ ಬೆಳೆದು ಬೇರೆ ಬೇರೆ ರಾಜ್ಯ ಗಳಲ್ಲಿ ಕೆಲಸ ಹುಡುಕಿಕೊಂಡು ಹೇೂಗುವವರಿಗೆ ಮತ್ತು ಉದ್ಯೋಗದಲ್ಲಿರುವ ಲಕ್ಷಾಂತರ ಮಂದಿಯ ಬದುಕಿನ ಮೇಲೆ ಅತಿ ದೊಡ್ಧ ಪರಿಣಾಮ ಬೀರಿದರು ಆಶ್ಚರ್ಯ ಪಡ ಬೇಕಾಗಿಲ್ಲ..ಇಂದಿನ ರಾಜ್ಯ ಸರ್ಕಾರ ಜನರನ್ನು ತಾತ್ಕಾಲಿಕವಾಗಿ ಖುಶಿ ಪಡಿಸುವ ದೃಷ್ಟಿಯಿಂದ ಈ ಮೀಸಲಾತಿ ತರಲು ಮುಂದಾಗಿರಬಹುದು. ಆದರೆ ಮುಂದೆ ಇದರ ಪರಿಣಾಮದ ಬಗ್ಗೆಯೂ ಪರಾಮರ್ಶೆ, ಚರ್ಚೆ ನಡೆದಿದೆಯೇ ಅನ್ನುವುದು ನಮ್ಮ ಪ್ರಶ್ನೆ.?..

Advertisement

ನಾಳೆ ಕರ್ನಾಟ ರಾಜ್ಯದ ರೀತಿಯಲ್ಲಿ ವಿಧೇಯಕವನ್ನು ಬೇರೆ ಬೇರೆ ರಾಜ್ಯಗಳಲ್ಲಿಯೂ ಮಂಡಿಸಲು ಮುಂದಾದರೆ ಆ ರಾಜ್ಯಗಳಲ್ಲಿ ಬದುಕು ಕಟ್ಟಿಕೊಂಡಿರುವ ನಮ್ಮ ಜನರ ಪಾಡು ಏನಾಗಬಹುದು ಅನ್ನುವ ಗಂಭೀರತೆಯ ಬಗ್ಗೆ ಕಾಂಗ್ರೆಸ್ ಸರ್ಕಾರ ಆಲೇೂಚನೆ ಮಾಡಿದೆಯಾ?ಬೇರೆ ರಾಜ್ಯಗಳಲ್ಲಿ ಖಾಸಗಿ ವಲಯದಲ್ಲಿ ದುಡಿಯುತ್ತಿರುವವರಿಗೆ ಕರ್ನಾಟಕ ಸರ್ಕಾರಕ್ಕೆ ಉದ್ಯೋಗ ನೀಡುವ ಸಾಮರ್ಥ್ಯ ಇದೆಯಾ?ನಾವು ಮಾತ್ರ ಬುದ್ಧಿವಂತರು ಅಂತ ತಿಳಿದುಕೊಳ್ಳುವುದು ಮೂರ್ಖತನ. ಬೇರೆಯವರು ಇದೇ ಬುದ್ಧಿವಂತಿಕೆ ಪ್ರದರ್ಶನ ಮಾಡಿದರೆ ಅವರನ್ನು ಪ್ರಶ್ನೆ ಮಾಡುವ ನೈತಿಕತೆ ನಮಗೆ ಇದೆಯಾ?

ಭಾರತ ಒಂದು ಒಕ್ಕೂಟ ವ್ಯವಸ್ಥೆ ಇದಕ್ಕೆ ಚ್ಯುತಿ ತರುವ ಯಾವುದೇ ನಿರ್ಣಯ ಯಾವುದೇ ಸರಕಾರ ಮಾಡಿದರು ಅದು ಖಂಡಿತವಾಗಿಯೂ ಸಂವಿಧಾನ ವಿರೇೂಧಿ ಅನ್ನಿಸುತ್ತದೆ. ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುಲು ಇಂತಹ ವಿವಾದಿತ ಪ್ರಾದೇಶಿಕವಾದ ನಿಣ೯ಯ ತೆಗೆದುಕೊಳ್ಳುವುದು ಖೇಧಕರ. ಸರ್ಕಾರಿ ಉದ್ಯೋಗದಲ್ಲಿ ಬೇಕಾದರೆ ಇಂತಹ ನಿರ್ಣಯ ತೆಗೆದುಕೊಳ್ಳಲಿ.. ಜನರ ಮತ್ತು ಆಡಳಿತದ ನಡುವಿನ ಭಾಷಾ ಸಂಬಂಧದ ದೃಷ್ಟಿಯಿಂದ ಈ ರೀತಿಯಲ್ಲಿ ಪ್ರಾದೇಶಿಕ ಆರ್ಹತೆ ನಿಗದಿ ಪಡಿಸ ಬೇಕಾದ ಅನಿವಾರ್ಯತೆ ಇದೆ. ಅದೂ ಕೂಡಾ ಕೆಲವೊಂದು ಮಿತಿಯ ಆಧಾರದಲ್ಲಿಯೇ ಒಪ್ಪಿಗೆ ಸೂಚಿಸಲಾಗಿದೆ. ಇದು ಮುಂದುವರಿದರೆ ಭಾರತದ ಒಕ್ಕೂಟದ ವ್ಯವಸ್ಥೆಗೆ ಅತಿ ದೊಡ್ಧ ಸವಾಲಾಗ ಬಹುದು. ಜೊತೆಗೆ ಬಹು ಮುಖ್ಯವಾಗಿ ಮಲ್ಟಿ ನ್ಯಾಶನಲ್ ಕಂಪನಿಗಳು ತಮಗೆ ಬೇಕಾಗುವ ಪ್ರತಿಭಾವಂತ ಅಭ್ಯರ್ಥಿಗಳ ಆಯ್ಕೆಗೂ ಈ ವಿಧೇಯಕ ತಡೆ ಒಡ್ಧಬಹುದು. ಇದರಿಂದಾಗಿ ಐ.ಟಿ. ಹಬ್ ಅನ್ನಿಸಿಕೊಂಡ ಬೆಂಗಳೂರಿನ ಪರಿಸ್ಥಿತಿ ಎಲ್ಲಿಗೆ ಬರಬಹುದು. ಪ್ರತಿಷ್ಠಿತ ಕಂಪನಿಗಳು ಬೇರೆ ರಾಜ್ಯಗಳನ್ನು ಹುಡುಕಿಕೊಂಡು ಹೇೂದರೂ ಆಶ್ಚರ್ಯ ಪಡಬೇಕಾಗಿಲ್ಲ.

Advertisement

ರಾಜ್ಯದಲ್ಲಿ ನಮ್ಮ ಪರಿಸ್ಥಿತಿ ಹೇಗಿದೆ ಅಂದರೆ ಮನೆಗೆಲಸದಿಂದ ಹಿಡಿದು ಕೃಷಿ ಕೆಲಸದ ತನಕ; ಕ್ಷೌರದಂಗಡಿಯಿಂದ ಹಿಡಿದು ಹೊಟೇಲಂಗಡಿ ತನಕ ; ಗೂಡಂಗಡಿಯಿಂದ ಹಿಡಿದು ಮಲ್ಟಿ ಸ್ಟೇೂರ್ ಮಹಲ್ ತನಕ ಉತ್ತರ ಭಾರತದ ಕಾರ್ಮಿಕರನ್ನೇ ನಂಬಿ ಬದುಕ ಬೇಕಾದ ಪರಿಸ್ಥಿತಿ ನಮ್ಮದಾಗಿರುವ ಕಾಲ ಘಟ್ಟದಲ್ಲಿ ನಾವಿರುವಾಗ ನಮ್ಮ ರಾಜ್ಯ ಸರ್ಕಾರ ಖಾಸಗಿ ವಲಯದಲ್ಲಿ ಮೀಸಲಾತಿ ಬಗ್ಗೆ ವಿಧೇಯಕ ಮಂಡನೆಯ ಬಗ್ಗೆ ಕನಸು ಕಾಣುತ್ತಿದೆ.. ಮೊದಲು ರಾಜ್ಯ ವಾಸ್ತವಿಕತೆಯ ಕುರಿತಾಗಿ ಗಮನ ಹರಿಸಲಿ…ಅನಂತರ ಮೀಸಲಾತಿ ಕುರಿತಾಗಿ ಚಿಂತನೆ ನಡೆಸುವುದು ಉತ್ತಮ.

ಕರ್ನಾಟಕ ಸರ್ಕಾರ ಮಾಡ ಬೇಕಾದ ಮೊದಲ ಕೆಲಸವೆಂದರೆ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಭತಿ೯ ಮಾಡುವುದರ ಮೂಲಕ ಜನರನ್ನು ಸಂತೃಪ್ತಿ ಪಡಿಸುವ ಕೆಲಸಕ್ಕೆ ಮುಂದಾಗಲಿ ಅನ್ನುವುದು ನಮ್ಮೆಲ್ಲರ ಅನಿಸಿಕೆ…

ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ .

Advertisement

Udayavani is now on Telegram. Click here to join our channel and stay updated with the latest news.

Next