Advertisement

Private Hospital: ಡೆಂಗ್ಯೂ ಪರೀಕ್ಷೆಗೆ ಏಕರೂಪ ದರ

12:47 AM Jul 04, 2024 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಹೆಚ್ಚು ತ್ತಿರುವ ಡೆಂಗ್ಯೂ ಪ್ರಕರಣಗಳ (Dengue Case) ನಿಯಂತ್ರಣಕ್ಕೆ ಕ್ರಮ ಕೈಗೊಂಡಿರುವ ರಾಜ್ಯ ಸರಕಾರ ಡೆಂಗ್ಯೂ ಪರೀಕ್ಷೆ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ ಹಾಕುವ ಸಂಬಂಧ ದರ ನಿಗದಿಪಡಿಸಿ ಆದೇಶಿಸಿದೆ.

Advertisement

ಎಲಿಸಾ ಹಾಗೂ ರ್ಯಾಪಿಡ್‌ ಟೆಸ್ಟ್‌ಗಳಿಗೆ ಸರಕಾರದಿಂದ ದರ ನಿಗದಿಯಾಗದ ಕಾರಣ ಖಾಸಗಿ ಆಸ್ಪತ್ರೆಗಳು ಮನ ಬಂದಂತೆ ಶುಲ್ಕ ವಸೂಲಿ ಮಾಡುತ್ತಿ ದ್ದವು. ಆದ್ದರಿಂದ ಪರೀಕ್ಷಾ ಶುಲ್ಕ ನಿಗದಿ ಪಡಿಸ ಬೇಕೆಂಬ ಆಗ್ರಹ ಗಳೂ ಕೇಳಿಬಂದಿದ್ದವು. ಇಲಾಖಾ ಅಧಿಕಾರಿ ಗಳೊಂದಿಗೆ ಬುಧವಾರ ಸಭೆ ನಡೆಸಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಡೆಂಗ್ಯೂ ಪ್ರಕರಣಗಳ ಇಳಿಕೆಗೆ ಕ್ರಮ ಕೈಗೊಳ್ಳುವುದರ ಜತೆಗೆ ತಪಾಸಣ ಶುಲ್ಕ ನಿಗದಿ ಬಗ್ಗೆಯೂ ಸೂಚಿಸಿದ್ದರು.

ಸರಕಾರಿ ಆಸ್ಪತ್ರೆಗಳಿಗೆ ಉಚಿತ ಟೆಸ್ಟಿಂಗ್‌ ಕಿಟ್‌ ಕೊಟ್ಟಿದ್ದು, ಡೆಂಗ್ಯೂ ಪರೀಕ್ಷೆಯನ್ನೂ ಉಚಿತವಾಗಿ ಮಾಡಲಾಗುತ್ತಿದೆ. ಆದರೆ ಖಾಸಗಿ ಆಸ್ಪತ್ರೆಗಳು, ಪ್ರಯೋಗಾಲಯಗಳು, ಡಯಾಗ್ನಾಸ್ಟಿಕ್‌ ಪ್ರಯೋಗಾಲಯಗಳಲ್ಲಿ ವಿವಿಧ ದರಗಳನ್ನು ವಿಧಿಸುತ್ತಿದ್ದು, ಏಕರೂಪದ ದರ ನಿಗದಿಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಅಧಿಕೃತ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆ, ಡೆಂಗ್ಯೂ ಜ್ವರ ಪತ್ತೆ ಹಚ್ಚುವ ಎಲಿಸಾ ಮತ್ತು ರ್ಯಾಪಿಡ್‌ ಕಾರ್ಡ್‌ ಟೆಸ್ಟ್‌ಗಳ ದರವನ್ನು ಪರಿಷ್ಕರಿಸಿ ಆದೇಶಿಸಿದೆ.

ಸರಕಾರಿ ನಿಗದಿತ ದರ
ಡೆಂಗ್ಯೂ ಎಲಿಸಾ ಎನ್‌ಎಸ್‌1 ಪರೀಕ್ಷೆಗೆ 300 ರೂ., ಡೆಂಗ್ಯೂ ಎಲಿಸಾ ಐಜಿಎಂ ಪರೀಕ್ಷೆಗೆ 300 ರೂ. ಹಾಗೂ ಎನ್‌ಎಸ್‌1, ಐಜಿಎಂ ಮತ್ತು ಐಜಿಜಿ ರ್ಯಾಪಿಡ್‌ ಕಾರ್ಡ್‌ ಟೆಸ್ಟ್‌ಗೆ 250 ರೂ. ಪಡೆಯಬೇಕು. ಹೆಚ್ಚಿನ ದರ ಪಡೆಯಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಆದೇಶವನ್ನು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರ ಸೆಕ್ಷನ್‌ 4 (1) ಮತ್ತು ಸೆಕ್ಷನ್‌ 4 (2)ರ ಅಡಿ ಹೊರಡಿಸಲಾಗಿದೆ.

ಇಂದು ಡಿಸಿ, ಸಿಇಒ ಜತೆಗೆ ಸಂವಾದ
ಡೆಂಗ್ಯೂ ನಿಯಂತ್ರಣ ಹಾಗೂ ಜನಜಾಗೃತಿ ಮೂಡಿಸುವ ಸಲುವಾಗಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಮಹಿಳಾ ಸ್ವಸಹಾಯ ಸಂಘಗಳ ನೆರವು ಪಡೆಯಲು ಸರಕಾರ ಬಯಸಿದ್ದು, ಇದರೊಂದಿಗೆ ಶಾಲಾ ಶಿಕ್ಷಕರಿಗೆ ತರಬೇತಿ ಕೊಟ್ಟು ವಿದ್ಯಾರ್ಥಿಗಳಲ್ಲೂ ಜಾಗೃತಿ ಮೂಡಿಸಲು ಇಚ್ಛಿಸಿದೆ. ಗುರುವಾರ ಎಲ್ಲ ಡಿಸಿ ಮತ್ತು ಪಂಚಾಯತ್‌ಗಳ ಸಿಇಒ ಜತೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ವೀಡಿಯೋ ಸಂವಾದ ನಡೆಸಲಿದ್ದಾರೆ.

Advertisement

ಪ್ರಕರಣಗಳ ಸಂಖ್ಯೆ 6,390ಕ್ಕೇರಿಕೆ
ಬೆಂಗಳೂರು: ದಿನದಿಂದ ದಿನಕ್ಕೆ ಡೆಂಗ್ಯೂ ಹೆಚ್ಚಳಕ್ಕೆ ಡೆಂಗ್ಯೂ ಹೊಸ ಸ್ಟೀರಿಯೋ ಹಾವಳಿ, ನಗರದಲ್ಲಿ ಹೆಚ್ಚುತ್ತಿ ರುವ ಕಟ್ಟಡ ಕಾಮಗಾರಿ, ಹವಾಮಾನ ವೈಪರೀತ್ಯ ಮುಖ್ಯ ಕಾರಣ ಎನ್ನಲಾಗುತ್ತಿದೆ. ರಾಜ್ಯವ್ಯಾಪಿ ಜು.3ರ ವರೆಗೆ 143 ತಾಲೂಕುಗಳಲ್ಲಿ ಡೆಂಗ್ಯೂ ಆವರಿಸಿಕೊಂಡಿದ್ದು, 2,447 ಗ್ರಾಮದ 41.62 ಲಕ್ಷ ಮಂದಿ ಪೀಡಿತ ಪ್ರದೇಶದಲ್ಲಿ ವಾಸವಿ ¨ªಾರೆ. ಜೂನ್‌ 1ರಿಂದ ಜು. 2ರ ವರೆಗೆ 2 ಸಾವಿರ ಮಂದಿ ಈ ಜ್ವರಕ್ಕೆ ತುತ್ತಾಗಿ¨ªಾರೆ. ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ಬುಧವಾರ 13 ಹೊಸ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 6,390ಕ್ಕೆ ಹೆಚ್ಚಳವಾಗಿದೆ.

ಜನರಿಗಾಗಿ ಏಕರೂಪದ ದರ
ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಖಾಸಗಿ ಆಸ್ಪತ್ರೆಗಳ ಜವಾಬ್ದಾರಿಯೂ ಪ್ರಮುಖವಾಗಿದೆ. ಈ ಸಂದರ್ಭವನ್ನು ಲಾಭ ಗಳಿಕೆಗೆ ಬಳಸಿಕೊಳ್ಳಬಾರದು. ಹೀಗಾಗಿ ಡೆಂಗ್ಯೂ ಪರೀಕ್ಷೆ, ಚಿಕಿತ್ಸೆಗಾಗಿ ಸರಕಾರವು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಏಕರೂಪದ ದರ ನಿಗದಿ ಮಾಡಿದೆ. ಈ ಆದೇಶವನ್ನು ಎಲ್ಲ ಖಾಸಗಿ ಆಸ್ಪತ್ರೆಗಳು ಪಾಲಿಸಬೇಕು.
-ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next