Advertisement

ಕೋವಿಡ್‌: 4,500 ಹಾಸಿಗೆ; ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಕಾಯ್ದಿರಿಸಲು ಒಪ್ಪಿಗೆ

02:04 AM Jul 01, 2020 | Hari Prasad |

ಬೆಂಗಳೂರು: ಖಾಸಗಿ ಆಸ್ಪತ್ರೆಗಳ ಅನಂತರ ಖಾಸಗಿ ವೈದ್ಯಕೀಯ ಕಾಲೇಜುಗಳು ಕೂಡ

Advertisement

ಕೋವಿಡ್ 19 ಸೋಂಕಿನ ಚಿಕಿತ್ಸೆಗೆ ಹಾಸಿಗೆ ಕಾಯ್ದಿರಿಸಲು ಒಪ್ಪಿಗೆ ನೀಡಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ನಡೆಸಿದ ಮಾತುಕತೆ ಯಶಸ್ವಿಯಾಗಿದೆ.

ಮಂಗಳವಾರ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಒಂದು ಹಂತದ ಸಭೆಯ ಬಳಿಕ ಮತ್ತೂಂದು ಹಂತದ ಸಭೆ ಡಾ| ಸುಧಾಕರ್‌ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ಪರಿಸ್ಥಿತಿ ಅರಿತು ಖಾಸಗಿ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಗಳು ಸರ ಕಾರದ ನಿರ್ಧಾರಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಭರವಸೆ ನೀಡಿದವು.

ರಾಜಧಾನಿಯ ಖಾಸಗಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ 10 ಸಾವಿರ ಹಾಸಿಗೆಗಳಿದ್ದು, ಈ ಪೈಕಿ ಶೇ.50ರಷ್ಟು ಅಂದರೆ 4.500 ಹಾಸಿಗೆಗಳನ್ನು ಕಾಯ್ದಿರಿಸಲು ಒಪ್ಪಿವೆ. ತೀವ್ರ ನಿಗಾ ಘಟಕದ ಹಾಸಿಗೆ, ವೆಂಟಿಲೇಟರ್‌ ಸಹಿತ ಹಾಸಿಗೆ ಒಳಗೊಂಡಂತೆ ತಜ್ಞರು, ವೈದ್ಯರು, ಅರೆವೈದ್ಯಕೀಯ ಸಿಬಂದಿ ಕೂಡ ಕೋವಿಡ್‌ ಚಿಕಿತ್ಸೆಗೆ ನೆರವು ನೀಡಲಿದ್ದಾರೆ ಎಂದು ಖಾಸಗಿ ವೈದ್ಯಕೀಯ ಕಾಲೇಜುಗಳ ಮಾಲಕರು ಹೇಳಿದ್ದಾರೆ. ಮುಂದಿನ 10 -15 ದಿನಗಳಲ್ಲಿ 4,500 ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಕಾಯ್ದಿರಿಸಲಿದ್ದೇವೆ ಎಂದರು.

ಇದರ ಬೆನ್ನಲ್ಲೇ ಸರಕಾರವು ಮಾರ್ಗಸೂಚಿ ಹೊರಡಿಸಲು ಸಿದ್ಧತೆ ನಡೆಸಿದೆ. ಕೋವಿಡ್ 19 ಸೋಂಕು ಪೀಡಿತರ ಪೈಕಿ ರೋಗ ಲಕ್ಷಣ ಇರುವವರು, 60 ವರ್ಷ ದಾಟಿದವರು, ಗಂಭೀರ ಕಾಯಿಲೆ ಇರುವ ವರನ್ನು ಮಾತ್ರ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲು ತೀರ್ಮಾನಿಸಿದೆ.

Advertisement

ಖಾಸಗಿ ಆಸ್ಪತ್ರೆಗಳಿಗೆ ಗೊತ್ತುಪಡಿಸಿದ ಚಿಕಿತ್ಸಾ ದರದ ಕ್ರಮದಲ್ಲೇ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲೂ ಚಿಕಿತ್ಸಾ ದರ ನಿಗದಿಪಡಿಸಲಾಗಿದೆ. ಮಾರ್ಗಸೂಚಿ ಸದ್ಯದಲ್ಲೇ ಹೊರಬೀಳುವ ನಿರೀಕ್ಷೆಯಿದೆ.

ಉತ್ತಮ ಸ್ಪಂದನೆ
ಸಭೆ ಬಳಿಕ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ಖಾಸಗಿ ವೈದ್ಯಕೀಯ ಕಾಲೇಜುಗಳ ಮಾಲಕರು, ಅಧ್ಯಕ್ಷರು ಉತ್ತಮವಾಗಿ ಸ್ಪಂದಿಸಿದ್ದಾರೆ. ತಮ್ಮ ಆಸ್ಪತ್ರೆಗಳಲ್ಲಿ ಶೇ.50ಕ್ಕಿಂತ ಹೆಚ್ಚು ಹಾಸಿಗೆಗಳನ್ನು ಅಗತ್ಯ ಸೌಲಭ್ಯದೊಂದಿಗೆ ನೀಡುವುದಾಗಿ ಭರವಸೆಯಿತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next