ಲಂಡನ್: ಬ್ರಿಟನ್ ನೂತನ ಪ್ರಧಾನಿಯಾಗಿ ಲಿಸ್ ಟ್ರುಸ್ ಅವರು ಆಯ್ಕೆಯಾದ ಬೆನ್ನಲ್ಲೇ ಭಾರತೀಯ ಮೂಲದ ಪ್ರೀತಿ ಪಟೇಲ್ ಬ್ರಿಟನ್ ಗೃಹ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅಗ್ನಿ ದುರಂತದಲ್ಲಿ ನಾಲ್ವರ ಬಲಿ ಪಡೆದ ಲೆವನಾ ಹೋಟೆಲ್ ನೆಲಸಮಕ್ಕೆ ಮುಂದಾದ ಪಾಲಿಕೆ
ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಲಿಸ್ ಟ್ರುಸ್ ಅವರ ನೂತನ ಕ್ಯಾಬಿನೆಟ್ ನಲ್ಲಿ ತಾನು ಮುಂದುವರಿಯುವುದಿಲ್ಲ ಎಂದು ಪಟೇಲ್ ತಿಳಿಸಿದ್ದಾರೆ.
ನಿರ್ಗಮಿತ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಪ್ರೀತಿ ಪಟೇಲ್ ಬರೆದ ಪತ್ರದಲ್ಲಿ, ದೇಶದ ಸಾರ್ವಜನಿಕರ ಸೇವೆಯನ್ನು ಮುಂದುವರಿಸುವುದು ನನ್ನ ಆಯ್ಕೆಯಾಗಿದೆ. ಲಿಸ್ ಟ್ರುಸ್ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾದ ಮೇಲೆ ಅವರು ನೂತನ ಗೃಹ ಕಾರ್ಯದರ್ಶಿಯನ್ನು ನೇಮಕ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ದೇಶದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಲಿಸ್ ಟ್ರುಸ್ ಅವರಿಗೆ ಪ್ರೀತಿ ಪಟೇಲ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ನೂತನ ಪ್ರಧಾನಿ ಟ್ರುಸ್ ಗೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಪಟೇಲ್ ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
ಕಳೆದ ಮೂರು ವರ್ಷಗಳ ಕಾಲ ಬ್ರಿಟನ್ ನ ಗೃಹ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲು ದೊರಕಿರುವ ಅವಕಾಶಕ್ಕಾಗಿ ಕೃತಜ್ಞತೆ ಸಲ್ಲಿಸುವುದಾಗಿ ಪ್ರೀತಿ ಪಟೇಲ್ ತಿಳಿಸಿದ್ದು, ನಮ್ಮ ವಲಸೆ ನೀತಿಯನ್ನು ಸುಧಾರಿಸುವ ಮತ್ತು ನಮ್ಮ ದೇಶವನ್ನು ರಕ್ಷಿಸುವ ಕಾರ್ಯದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.