Advertisement

ಬಿಎಂಡಬ್ಲ್ಯು ಕಾರು ಖರೀದಿಸಿದ ಕ್ರಿಕೆಟಿಗ ಪೃಥ್ವಿ ಶಾ

11:04 PM Oct 18, 2021 | Team Udayavani |

ಮುಂಬಯಿ: ಮುಂಬಯಿಯ ಆರಂಭಕಾರ ಪೃಥ್ವಿ ಶಾ ಅವರ ಬಹು ದಿನಗಳ ಕನಸೊಂದು ನನಸಾಗಿದೆ. ಅವರೀಗ 68 ಲಕ್ಷ ರೂ. ಮೌಲ್ಯದ ನೂತನ ಬಿಎಂಡಬ್ಲ್ಯು 630ಐ ಎಂ ಸ್ಟೋರ್ಟ್‌ ಕಾರಿನ ಮಾಲಕ.

Advertisement

“ತೀರಾ ಕೆಳ ಹಂತದಲ್ಲಿದ್ದ ನಾವೀಗ ಈ ಹಂತವನ್ನು ಮುಟ್ಟಿದ್ದೇವೆ’ ಎಂದಿರುವ ಪೃಥ್ವಿ ಶಾ, ತಂದೆ ಪಂಕಜ್‌ ಶಾ ಅವರೊಂದಿಗೆ ಕಾರಿನ ಮುಂದೆ ನಿಂತಿರುವ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ.

ಚಿಕ್ಕ ಪ್ರಾಯದಲ್ಲೇ ತಾಯಿಯನ್ನು ಕಳೆದುಕೊಂಡ ಪೃಥ್ವಿ ಶಾಗೆ ತಂದೆಯೇ ಸರ್ವಸ್ವವಾಗಿದ್ದರು. ಅವರಿಂದಾಗಿಯೇ ಪೃಥ್ವಿಗೆ ಕ್ರಿಕೆಟ್‌ನಲ್ಲಿ ಇಷ್ಟೊಂದು ಎತ್ತರ ತಲುಪಲು ಸಾಧ್ಯವಾಗಿದೆ.

ಇದನ್ನೂ ಓದಿ:ಶ್ರೀಲಂಕಾ ವಿರುದ್ಧ 96ಕ್ಕೆ ಉದುರಿದ ನಮೀಬಿಯಾ

ಐ‌ಪಿ‌ಎಲ್ ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ಪರ ಆಡುವ ಪೃಥ್ವಿ ಶಾ ಈ ಬಾರಿ 15 ಪಂದ್ಯಗಳಲ್ಲಿ 479 ರನ್ ಗಳಿಸಿದ್ದಾರೆ. 21 ವರ್ಷದ ಪೃಥ್ವಿ ಶಾ, ರೂ. 68.50 ಲಕ್ಷ ನೀಡಿ ಈ ಐಷಾರಾಮಿ ಕಾರು ಖರೀದಿಸಿದ್ದಾರೆ. ಅವರು ಖರೀದಿಸಿರುವ ಕಾರು ಬಿಳಿ ಬಣ್ಣದಲ್ಲಿದ್ದು ಆಕರ್ಷಕವಾಗಿ ಕಾಣುತ್ತದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next