Advertisement

ಕಾರಾಗೃಹ ಸಿಬ್ಬಂದಿ ಆರೋಗ್ಯ ತಪಾಸಣೆಗೆ ಹಣ ಮಂಜೂರು

07:00 AM Jul 12, 2018 | Team Udayavani |

ಬೆಂಗಳೂರು: ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ವಾರ್ಷಿಕ ಆರೋಗ್ಯ ತಪಾಸಣೆಗಾಗಿ 1,000 ರೂ. ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Advertisement

ಕಾರಾಗೃಹ ಇಲಾಖೆಯಲ್ಲಿರುವ ಐಪಿಎಸ್‌ ಅಧಿಕಾರಿಗಳು, ಲಿಪಿಕ ಸಿಬ್ಬಂದಿ ಹೊರತು ಪಡಿಸಿ ಇನ್ನುಳಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾತ್ರ ವಾರ್ಷಿಕ 1,000 ರೂ. ಅನ್ನು ಆರೋಗ್ಯ ತಪಾಸಣೆಗಾಗಿ ಮಂಜೂರು ಮಾಡಿದೆ.

ಕಾರಾಗೃಹಗಳಲ್ಲಿರುವ ಪಾತಕಿಗಳು, ನಕ್ಸಲರು, ಅಪರಾಧಿಗಳ ಭದ್ರತೆ ದೃಷ್ಠಿಯಿಂದ ಪೊಲೀಸರು ತಮ್ಮ ಆರೋಗ್ಯದ ಕಡೆ ಗಮನ ಹರಿಸದೆ ದೈಹಿಕ ಮಾನಸಿಕ ಒತ್ತಡಕ್ಕೊಳಗಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಲಾಖಾ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಹಣ ಮಂಜೂರು
ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next