Advertisement

ಕೈಗಾರಿಕೆ ಸ್ಥಾಪಿಸಲು ಆದ್ಯತೆ: ಶಾಸಕಿ ರೂಪಕಲಾ

12:52 PM Jan 27, 2021 | Team Udayavani |

ಕೆಜಿಎಫ್: ತಾಲೂಕಿನ ಜನತೆ ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ನಗರದಲ್ಲಿ ಮತ್ತು ಅಶ್ವತ್ಥ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಸುತ್ತಮುತ್ತಲಿನ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸಲು ಆದ್ಯತೆ ನೀಡಲಾಗುವುದು ಎಂದು ಶಾಸಕಿ ಎಂ.ರೂಪಕಲಾ ತಿಳಿಸಿದರು.

Advertisement

ನಗರದ ನೂತನ ಕ್ರೀಡಾಂಗಣದಲ್ಲಿ ಮಂಗಳ ವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಬೆಮಲ್‌ ಕಾರ್ಖಾನೆ ಉಪಯೋಗಿಸದೆ ಬಿಟ್ಟಿದ್ದ 1000 ಎಕರೆ ಜಾಗದಲ್ಲಿ ಕೈಗಾರಿಕೆ ಸ್ಥಾಪಿಸಲು ಸಿದ್ಧತೆ ನಡೆದಿದೆ ಎಂದು ಹೇಳಿದರು.

ಕ್ರೀಡೆಗೆ ಬೆಂಬಲ ನೀಡಲು ಹೋಂಡಾ ಕಂಪನಿ 5 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಿಕೊಟ್ಟಿದೆ. ರಾಜೇಶ್‌ ಕ್ಯಾಂಪ್‌ ನಲ್ಲಿ 14 ಎಕರೆ ಜಾಗದಲ್ಲಿ ಬಡವರಿಗೆ ನಿವೇಶನ ನೀಡಿ, ಸಹಭಾಗಿತ್ವದಲ್ಲಿ ಮನೆ ಕಟ್ಟಲು ರಾಜೀವ್‌ ಗಾಂಧಿ ವಸತಿ ಕಾರ್ಪೊರೇಷನ್‌ ಸಹಕಾರ ದೊಂದಿಗೆ ಸಿದ್ಧತೆ ನಡೆಯುತ್ತಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ 8 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:37ನೇ ರಾಷ್ಟ್ರೀಯ ನೃತ್ಯೋತವ್ಸ ಮಡಿಕೇರಿಯಲ್ಲಿ ಆಯೋಜನೆ

ನಗರಸಭೆಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ಮಾತನಾಡಿ, ರಾಬರ್ಟಸನ್‌ಪೇಟೆ ನಗರಸಭೆ ಯನ್ನು ಮಾದರಿ ನಗರವನ್ನಾಗಿ ಮಾಡಬೇಕೆ ನ್ನುವುದುಆಶಯವಾಗಿದೆ. 15 ನೇ ಹಣ ಕಾಸು ಯೋಜನೆಯಲ್ಲಿ 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಈಗಾಗಲೇ 92 ಲಕ್ಷ ರೂ.ವೆಚ್ಚದಲ್ಲಿ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ. ಬೀದಿ  ವ್ಯಪಾರಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಈಗಿನ ಕೌನ್ಸಿಲ್‌ಅಧಿಕಾರಕ್ಕೆ ಬರುವ ಮುನ್ನ ಕೇವಲ 200-300 ಸಂಖ್ಯೆಯ ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡ ಲಾಗುತ್ತಿತ್ತು. ಈಗ 1,245 ಬೀದಿ ವ್ಯಾಪಾರಿಗಳಿಗೆ 1.24 ಕೋಟಿ ರೂ.ಸಾಲ ಕೊಡುವ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದರು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್‌, ಕೆಜಿಎಫ್ ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷೆ ಅಶ್ವಿ‌ನಿ, ತಾಪಂ ಅಧ್ಯಕ್ಷೆ  ಸುನಂದಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಚಂದ್ರಶೇಖರ್‌ ಮಾತನಾಡಿದರು. ನಗರಸಭೆ ಆಯುಕ್ತೆ ಸರ್ವರ್‌ ಮರ್ಚೆಂಟ್‌, ನಗರಸಭೆ ಉಪಾಧ್ಯಕ್ಷೆ ದೇವಿ ಗಣೇಶ್‌, ತಾಪಂ ಉಪಾಧ್ಯಕ್ಷೆ ಗಿರಿಜಮ್ಮ, ತಹಶೀಲ್ದಾರ್‌ ಕೆ.ಎನ್‌.ಸುಜಾತ, ಡಿವೈಎಸ್ಪಿ ಬಿ.ಕೆ.ಉಮೇಶ್‌ ವೇದಿಕೆಯಲ್ಲಿದ್ದರು. ಪೊಲೀಸ್‌, ಎನ್‌ಸಿಸಿ, ಹೋಂಗಾರ್ಡ್ಸ್‌ ತಂಡದಿಂದ ಪಥಸಂಚಲನ ನಡೆಯಿತು. ಕೊರೊನಾ ವಾರಿಯರ್ ಹಾಗೂ ಇತರ  ಸಾಧಕರಿಗೆಕೂಡ ಸನ್ಮಾನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next