Advertisement
ಕಳೆದ ಒಂದು ತಿಂಗಳಲ್ಲಿ ಬಸ್‌ಗಳ ವೇಗ ತುಸು ಹೆಚ್ಚಿದ್ದು, ಬಿಎಂಟಿಸಿಯ ಪ್ರಾಥಮಿಕ ಅಧ್ಯಯನದಪ್ರಕಾರ ಸುಮಾರು 15 ನಿಮಿಷಗಳಷ್ಟು ಪ್ರಯಾಣದ ಸಮಯದಲ್ಲಿ ಉಳಿತಾಯ ಆಗುತ್ತಿದೆ. ಇದರ ಫಲವಾಗಿ ನಾಲ್ಕೈದು ಕಂಪನಿಗಳು ಗುತ್ತಿಗೆ ರೂಪದಲ್ಲಿಬಸ್ ಸೇವೆ ಪಡೆಯಲು ಆಸಕ್ತಿ ತೋರಿಸಿದ್ದು, ತಲಾ ಒಂದು ಕಂಪೆನಿಯು ಕನಿಷ್ಠ 40ರಿಂದ 50 ಬಸ್‌ಗಳ ಬೇಡಿಕೆ ಇಟ್ಟಿವೆ. ಅಂದರೆ, 200ರಿಂದ 250 ಬಸ್‌ಗಳಿಗೆ ಬೇಡಿಕೆ ಬಂದಿದೆ. ಪ್ರಸ್ತುತ ಈ ಮಾರ್ಗದಲ್ಲಿ ಬಿಎಂಟಿಸಿಯ 140 ಬಸ್‌ಗಳು ಗುತ್ತಿಗೆ ರೂಪದಲ್ಲಿ ಸೇವೆ ಸಲ್ಲಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಲೆಕ್ಕಾಚಾರ ಹೀಗೆ: ಸಾಮಾನ್ಯವಾಗಿ ಹೊರವರ್ತುಲದಲ್ಲಿ ಅದರಲ್ಲೂ ಸೆಂಟ್ರಲ್ ಸಿಲ್ಕ್ಬೋರ್ಡ್‌ನಿಂದ ಕೆ.ಆರ್.ಪುರ ನಡುವೆ ಹೆಚ್ಚಾಗಿ ಸಂಚರಿಸುವವರು ಐಟಿ ಉದ್ಯೋಗಿಗಳು. ಕೆಲ ಕಂಪೆನಿಗಳು ಖಾಸಗಿ ವಾಹನಗಳನ್ನು ಗುತ್ತಿಗೆ ಪಡೆದುಕೊಂಡಿದ್ದರೆ, ಉಳಿದವರು ಸ್ವಂತ ವಾಹನಗಳಲ್ಲಿ ಬರುತ್ತವೆ. ಆ್ಯಪ್‌ಆಧಾರಿತ ಕ್ಯಾಬ್‌ಗಳಲ್ಲೂ ಆಗಮಿಸುತ್ತಾರೆ. ಒಂದು ಬಸ್ ಗುತ್ತಿಗೆ ಪಡೆದರೆ, ಅದು ಕನಿಷ್ಠ 40 ಜನರನ್ನು ಕೊಂಡೊಯ್ಯುತ್ತದೆ. ಇನ್ನು ಒಂದು ಕಾರಿನಲ್ಲಿ ಸರಾಸರಿಇಬ್ಬರು ಸಂಚರಿಸುತ್ತಾರೆ ಎಂದು ಲೆಕ್ಕಹಾಕಿದರೂ, ಕನಿಷ್ಠ 20 ವಾಹನಗಳು ಕಡಿಮೆ ಆಗುತ್ತವೆ.
ಪ್ರಸ್ತುತ ಬಂದ ಬೇಡಿಕೆ ಪ್ರಕಾರವೇ 200 ಬಸ್ ಗಳಿಗೆ ಇದನ್ನುಲೆಕ್ಕಹಾಕಿದರೆ, 1,500 ಖಾಸಗಿ ವಾಹನಗಳಿಗೆಅನಾಯಾಸವಾಗಿ ಬ್ರೇಕ್ ಬಿದ್ದಂತಾಗುತ್ತದೆ. ಜತೆಗೆ ಇದರಿಂದ ಪ್ರಯಾಣಿಕರ ಸಂಖ್ಯೆ ಏರಿಕೆ ಮಾತ್ರವಲ್ಲ; ಸಂಸ್ಥೆಯ ಆದಾಯವೂ ಹೆಚ್ಚಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ. ತಿಂಗಳ ಹಿಂದೆ ಪರಿಚಯಿಸಿದ ಪಥದಲ್ಲಿ ಬಸ್‌ಗಳ ಸಂಚಾರ ಸಮಯ ಕಡಿಮೆ ಆಗಿರುವುದು ಕಂಡುಬಂದಿದೆ.
ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ಜಾರಿಗೊಳಿಸುವ ಮೂಲಕ ಇದು ಇನ್ನಷ್ಟು ಅಂದರೆ 40ನಿಮಿಷಗಳಷ್ಟು ಸಮಯ ಉಳಿತಾಯ ಮಾಡುವ ಗುರಿ ಬಿಎಂಟಿಸಿ ಹೊಂದಿದೆ. ಈ ನಿಟ್ಟಿನಲ್ಲಿ ಎಲ್ಲ ಸರ್ಕಾರಿ ಸಂಸ್ಥೆಗಳು ಇದಕ್ಕೆ ಆದ್ಯತೆ ನೀಡುತ್ತಿವೆ. ಇನ್ನೂ 12 ಕಡೆಗಳಲ್ಲಿ ಜಾರಿಗೊಳಿಸುವ ಉದ್ದೇಶವೂ ಇದೆ. ಆದ್ದರಿಂದ ಐಟಿ ಕಂಪೆನಿಗಳು ಮನಸ್ಸು ಮಾಡುತ್ತಿವೆ.
-ವಿಜಯಕುಮಾರ ಚಂದರಗಿ