ಉಡುಪಿ: ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿ ನಲ್ಲಿ ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಾರು ಕಟ್ಟೆಯಲ್ಲಿ ಮಾರಾಟ ಮಾಡಲು ಅನು ಕೂಲವಾಗುವಂತೆ ರಫ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಕೃಷಿ ಸಹಿತ ಸರಕಾರದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮಲ್ಲಿರುವ ಬುದ್ಧಿ ಶಕ್ತಿಯನ್ನು ಉಪ ಯೋಗಿಸಿ ಹೊಸತನವನ್ನು ಹುಡುಕಬೇಕು ಎಂದು ಕೇಂದ್ರ ಕೃಷಿ (ರಾಜ್ಯಖಾತೆ) ಇಲಾಖೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿ ಕಾರ, ಲಘು ಉದ್ಯೋಗ ಭಾರತಿ- ಕರ್ನಾಟಕ, ಐಎಂಎಫ್ ಫೌಂಡೇ ಶನ್ ವತಿಯಿಂದ ಶುಕ್ರವಾರ ಕಿದಿಯೂರು ಹೊಟೇಲ್‌ನ ಶೇಷಶಯನ ಸಭಾಂ
ಗಣ ದಲ್ಲಿ ಹಮ್ಮಿಕೊಂಡಿದ್ದ ಕರಾವಳಿ ಕರ್ನಾಟಕದ ಕೃಷಿ ಉತ್ಪನ್ನ ಉತ್ತೇ ಜನಕ್ಕೆ ಹಮ್ಮಿಕೊಂಡಿದ್ದ ರಫ್ತುದಾರರ ಸಮಾವೇಶ ಹಾಗೂ ಪ್ರದರ್ಶನ ಉದ್ಘಾ ಟಿಸಿ ಅವರು ಮಾತನಾಡಿದರು.
ಕರಾವಳಿ ಕರ್ನಾಟಕದಲ್ಲಿ ಕಡಲ ಉತ್ಪನ್ನ (ಮೀನು)ಗಳ ಕೊಯ್ಲು ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗುತ್ತದೆ. ಆದರೆ ಉತ್ಪನ್ನಗಳನ್ನು ಪಕ್ಕದ ಕೇರಳದ ಮೂಲಕ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಕರ್ನಾಟಕ ದಿಂದಲೇ ರಫ್ತು ಮಾಡಲು ಪಿಪಿಪಿ ಮಾದರಿಯಲ್ಲಾದರೂ ಕ್ರಮವಾಗ ಬೇಕು. ಅಲ್ಲದೆ ಕಡಲ ಉತ್ಪನ್ನಗಳ ಮೌಲ್ಯವರ್ಧನೆಗೆ ಸಂಬಂಧಿಸಿ ವಿಶೇಷ ಸಮಾವೇಶ ಮಾಡಬೇಕು ಎಂದರು.
ರೈತರ ಆತ್ಮಹತ್ಯೆ ತಡೆ ನಿಟ್ಟಿನಲ್ಲಿ ಕೃಷಿ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್, ಸಂಸ್ಕರಣೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಅತೀ ಆವಶ್ಯಕ. ಅನೇಕ ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಹೇಗೆ ಮಾರುಕಟ್ಟೆ ಸೃಷ್ಟಿಮಾಡಿಕೊಳ್ಳಬೇಕು ಎಂಬುದು ತಿಳಿದಿರುವುದಿಲ್ಲ. ರಫ್ತು ಹೆಚ್ಚಿಸುವ ಮೂಲಕ ಮಾರುಕಟ್ಟೆ ವ್ಯವಸ್ಥೆ ಸಿಗು ವಂತೆ ಮಾಡಬೇಕು. 2023ರನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ವಾಗಿ ಆಚರಿಸಲಾಗುತ್ತದೆ. ಸಿರಿ ದಾನ್ಯದ ಬಗ್ಗೆ ಎಲ್ಲರಲ್ಲೂ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
Related Articles
ಉತ್ಪಾದನೆಯ ಜತೆಗೆ ಗುಣಮಟ್ಟಕ್ಕೂ ಆದ್ಯತೆ ನೀಡಬೇಕು. ಭಾರತದಿಂದ ಆಹಾರ ದಾನ್ಯಗಳ ರಫ್ತು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದೆ. ಈ ಪ್ರಮಾಣ ಇನ್ನಷ್ಟು ಹೆಚ್ಚಿಸಲು ಗುಣಮಟ್ಟದ ಉತ್ಪಾದನೆ ಅಗತ್ಯವಿದೆ. ಕೃಷಿ ಉತ್ಪನ್ನ ರಫ್ತಿಗೆ ಅನುಕೂಲ ಆಗುವಂತೆ ಕೈಗಾರಿಕೆ ಇಲಾಖೆಯಲ್ಲಿ ಪ್ರತ್ಯೇಕ ಘಟಕ ಆರಂಭಿಸಲು ಈಗಾಗಲೇ ಮುಖ್ಯಮಂತ್ರಿ ಸಹಿತ ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಡಾ| ಎಂ.ವಿ.ವೆಂಕಟೇಶ್ ಮಾತನಾಡಿ, ರೈತರಿಗೆ ಉತ್ಪನ್ನದ ಮೌಲ್ಯವರ್ಧನೆಯ ಬಗ್ಗೆ ತಿಳಿಸಬೇಕು. ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸುವ ನಿಟ್ಟಿನಲ್ಲಿ ಸರಕಾರದಿಂದಲೇ ಹೊಸ ಬ್ರ್ಯಾಂಡಿಂಗ್ ವ್ಯವಸ್ಥೆ ಮಾಡಲಾಗುತ್ತಿದ್ದು ಶೀಘ್ರವೇ ಬಿಡುಗಡೆಯಾಗಲಿದೆ ಎಂದರು.
ರಾಜ್ಯ ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ| ಎ.ಬಿ.ಪಾಟೀಲ್ ಮಾತನಾಡಿ, ಕೃಷಿ ಉತ್ಪನ್ನಗಳ ರಫ್ತಿ ನಲ್ಲಿ ಭಾರತ ಸಾಕಷ್ಟು ಮುಂದಿದೆ. 2021-22ರಲ್ಲಿ 50 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನ ರಫ್ತು ಮಾಡಿ ಜಾಗತಿಕ ಮಟ್ಟದಲ್ಲಿ 8ನೇ ಸ್ಥಾನದಲ್ಲಿದ್ದೇವೆ ಎಂದು ಹೇಳಿದರು.
ಲಘು ಉದ್ಯೋಗ ಭಾರತಿ- ಕರ್ನಾಟಕದ ಅಧ್ಯಕ್ಷ ಸಚಿನ್ ಬಿ. ಸಬಿ°ಸ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ. ನಾರಾಯಣ ಪ್ರಸನ್ನ, ಗೌರವ ಕಾರ್ಯದರ್ಶಿ ಭೋಜರಾಜ ಸಿ.ಎನ್., ವಾಣಿಜ್ಯ ಇಲಾಖೆಯ ಅಪೇಡ ಅಧ್ಯಕ್ಷ ಡಾ| ಎಂ. ಲಿಂಗ ಮುತ್ತು, ನಬಾರ್ಡ್ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ಟಿ. ರಮೇಶ್, ಕೆಎಪಿಪಿಇಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ. ಪರ್ವೇಜ್ ಬಂಟನಾಳ ಉಪಸ್ಥಿತರಿದ್ದರು.
ವಿವಿಧ ಉತ್ಪನ್ನಗಳ ಪ್ರದರ್ಶನ
ವಿವಿಧ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ಸಿದ್ಧಪಡಿಸಿರುವ ವಿವಿಧ ಸಂಸ್ಥೆಗಳ, ಸ್ವ-ಸಹಾಯ ಸಂಘಗಳ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನವಿತ್ತು. ಶುದ್ಧ ತೆಂಗಿನ ಎಣ್ಣೆ, ಮೀನಿನ ಚಟ್ನಿ, ಹಪ್ಪಳ, ಸಿಗಡಿ ಉಪ್ಪಿನಕಾಯಿ, ಸಿರಿಧಾನ್ಯಗಳು, ತೆಂಗಿನಕಾಯಿಯ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.