Advertisement
ರಾಮನಗರ ಭಾಗದಲ್ಲಿ ಆನೆದಾಳಿ ತಡೆಗಟ್ಟುವ ಸಂಬಂಧ ನಿಯಮ 33ರ ಅಡಿಯಲ್ಲಿ ಕಾಂಗ್ರೆಸ್ ಸದಸ್ಯ ಎಸ್.ರವಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ವನ್ಯಜೀವಿ ತಜ್ಞರ ವರದಿ ಕೇಳಲಾಗಿದೆ. ರಾಜ್ಯದಲ್ಲಿ 6,395 ಆನೆಗಳಿದ್ದು ಈ ವರ್ಷ 55 ಮಂದಿ ವನ್ಯಜೀವಿ ದಾಳಿಯಿಂದ ಸಾವನ್ನಪ್ಪಿದ್ದು ಸರಕಾರ ಕೂಡ ಅದಕ್ಕೆ ಪರಿಹಾರ ನೀಡಿದೆ. ಆನೆ ದಾಳಿ ತಡೆಗಟ್ಟಲು ಕಂದಕ, ಸೋಲಾರ್ ಬೇಲಿ ಮತ್ತು ರೈಲ್ವೇ ಬ್ಯಾರಿಕೇಡ್ ನಿರ್ಮಾಣ ಮಾಡುವ ಕಾರ್ಯ ನಡೆದಿದೆ. ರೈಲ್ವೇ ಬ್ಯಾರಿಕೇಡ್ ಒಂದೇ ಆನೆ ದಾಳಿ ತಡಗಟ್ಟಲು ಶಾಶ್ವತ ಪರಿಹಾರ ಎಂದು ಆಲೋಚಿಸಲಾಗಿದ್ದು, ಆ ಹಿನ್ನೆಲೆಯಲ್ಲಿ ಈ ಸಾಲಿನ ಬಜೆಟ್‌ನಲ್ಲಿ 100 ಕೋಟಿ.ರೂ. ಹೆಚ್ಚುವರಿಯಾಗಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ರಾಮನಗರ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಭಾಗದಲ್ಲಿ ಆನೆಗಳ ದಾಳಿಯನ್ನು ಹಿಮೆಟ್ಟಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಆನೆ ಕಾರ್ಯ ಪಡೆ ರಚಿಸಲಾಗಿದೆ. ಆನೆ ಪಡೆಯ ಕಂಟ್ರೋಲ್ ರೂಮ್ ಮೂಲಕ ಕಾಡಂಚಿನ ಗ್ರಾಮಗಳ ಗ್ರಾಮಸ್ಥರ ಮೊಬೈಲ್ ದೂರವಾಣಿ ಸಂಖ್ಯೆಯನ್ನು ನೋಂದಣಿ ಮಾಡಿ ಎಸ್‌ಎಂಎಸ್ ಮೂಲಕ ಕಾಡಾನೆಗಳ ಚಲನವಲನದ ಮೇಲೆ ಅರಣ್ಯಾಧಿಕಾರಿಗಳು ಕಣ್ಣಿಟ್ಟಿದ್ದಾರೆ ಎಂದು ಹೇಳಿದರು. ಕಾಡಾನೆಗಳು ರೈತರ ಜಮೀನಿಗೆ ಬರದಂತೆ ತಡೆಯಲು ಅರಣ್ಯ ಪ್ರದೇಶದ ಗಡಿಗಳಲ್ಲಿ 4 ಆನೆ ಹಿಮ್ಮೆಟ್ಟಿಸುವ ತಂಡ, 8 ಕಳ್ಳಬೇಟೆ ತಡೆ ಶಿಬಿರ, 2 ಆನೆ ಕಾರ್ಯಪಡೆ ತಂಡಗಳು ಹಾಗೂ ಇಲಾಖೆಯ ಸಿಬ್ಬಂದಿಗಳು ಹಗಲುರಾತ್ರಿ ಪಹರೆ ಮಾಡುತ್ತಾರೆ ಎಂದು ತಿಳಿಸಿದರು.
Related Articles
Advertisement