ತುಮಕೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನನಗೆ ಮತನೀಡಿ ಗೆಲ್ಲಿಸಿದರೆ, ಗ್ರಾಮಪಂಚಾಯತ್‌ಗಳಿಗೆ ಕೇಂದ್ರ ಹಾಗೂ ರಾಜ್ಯಸರ್ಕಾರದಿಂದ ಹೆಚ್ಚಿನ ಅನುದಾನ ತಂದುಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿಬಿಜೆಪಿ ಅಭ್ಯರ್ಥಿ ಎನ್.ಲೋಕೇಶ್ ಗೌಡ ತಿಳಿಸಿದರು.
ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲಸೇರಿದಂತೆ ವಿವಿಧ ಕಡೆ ಭಾನುವಾರಮತಪ್ರಚಾರ ಮಾಡಿ ನಂತರ ನಡೆದ ಗ್ರಾಪಂಸದಸ್ಯರ ಸಭೆಯಲ್ಲಿ ಮಾತನಾಡಿ, ಗ್ರಾಮಗಳಅಭಿವೃದ್ಧಿಯಾಗಲು ಗ್ರಾಮ ಪಂಚಾಯತ್‌ಗಳಪಾತ್ರ ಬಹಳ ದೊಡ್ಡದಾಗಿದ್ದು, ಕೆಲವುಪಂಚಾಯತ್ ಆರ್ಥಿಕ ಸಂಕಷ್ಟದಲ್ಲಿ ಇವೆ.ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ನಮ್ಮ ಬಿಜೆಪಿಸರ್ಕಾರ ಇದ್ದು, ನಾನು ಈ ಚುನಾವಣೆಯಲ್ಲಿಗೆಲುವು ಸಾಧಿಸಿದರೆ, ನಮ್ಮ ಮುಖ್ಯಮಂತ್ರಿ,ಸಚಿವರು ಮತ್ತು ಶಾಸಕರ ಸಹಕಾರದಿಂದನಮ್ಮ ಜಿಲ್ಲೆಗೆ ಹೆಚ್ಚಿನ ಅನುದಾನ ತಂದುಜನಪರ ಕಾರ್ಯಗಳಿಗೆ ಒತ್ತು ನೀಡುವುದಾಗಿ ತಿಳಿಸಿದರು.
ಇಲ್ಲೇ ನೆಲೆಸಲು ತೀರ್ಮಾನ: ನಾನು ಮೂಲತಃ ಕೊರಟಗೆರೆ ತಾಲೂಕಿನ ವಡ್ಡಗೆರೆಗ್ರಾಮದವನಾಗಿದ್ದು, ಬೆಂಗಳೂರಿನಲ್ಲಿರಾಜಕೀಯ ಅವಕಾಶ ಸಿಕ್ಕಿತ್ತು, ಈಗತುಮಕೂರು ಜಿಲ್ಲೆಯಲ್ಲಿ ನೆಲೆಸಲುತೀರ್ಮಾನಿಸಿದ್ದು, ಜಿಲ್ಲಾ ಉಸ್ತುವಾರಿಸಚಿವರು, ಪಕ್ಷ ಸಂಘಟನೆ ದೃಷ್ಟಿಯಿಂದತುಮಕೂರಿನಲ್ಲಿ ನೆಲೆಸುವಂತೆ ಸೂಚಿಸಿದ್ದಾರೆ.
ಮುಂದೆ ಇಲ್ಲಿಯೇ ಮನೆ ಮಾಡಿ, ನನ್ನ ಮಗನ ಶಿಕ್ಷಣವನ್ನೂ ಇಲ್ಲಿಯೇ ಕೊಡಿಸಿ ಇಲ್ಲೇನೆಲೆಸಲು ತೀರ್ಮಾನ ಮಾಡಿದ್ದೇನೆ ಎಂದರು. ಜಿಲ್ಲೆಯ ಎಲ್ಲಾ ಕಡೆ ಪ್ರವಾಸ ಮಾಡಿ,ಎಲ್ಲಾ ಮುಖಂಡರ ಸಹಕಾರದಿಂದ ಪ್ರತಿಪಂಚಾಯಿತಿಯ ಸದಸ್ಯತರನ್ನು ಭೇಟಿಮಾಡಿ ಬಂದಿದ್ದೇನೆ. ಎಲ್ಲಾ ಕಡೆ ಉತ್ತಮವಾತಾವರಣ ಇದೆ. ಗೆಲ್ಲುವ ವಿಶಾಸ ನನಗೆ ಎಂದು ನುಡಿದರು.
ಈ ವೇಳೆ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಪಂ ಮಾಜಿ ಅಧ್ಯಕ್ಷವೈ.ಎಚ್.ಹುಚ್ಚಯ್ಯ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಹೆಬ್ಟಾಕ, ಜಿಲ್ಲಾಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾದಪ್ರಧಾನ ಕಾರ್ಯದರ್ಶಿ ಕೆ.ವೇದಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ನಡೆಯಲಿರುವಚುನಾವಣೆಯಲ್ಲಿ ನಮ್ಮ ಬಿಜೆಪಿ ಪಕ್ಷದಿಂದ ಎನ್.ಲೋಕೇಶ್ ಗೌಡ ಸ್ಪರ್ಧಿಸಿದ್ದು, ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿಗೆ ಒಳ್ಳೆಯ ವಾತಾವರಣಸೃಷ್ಟಿಯಾಗಿದೆ. ನಮ್ಮ ಪಕ್ಷದ ಎಲ್ಲಾ ಮುಖಂಡರೂ ನಮ್ಮ ಅಭ್ಯರ್ಥಿಯಗೆಲುವಿಗೆ ಶ್ರಮಿಸುತ್ತಿದ್ದು, ಈಬಾರಿಯ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯ ಗೆಲುವು ಖಚಿತ.
ಜಿ.ಬಿ.ಜ್ಯೋತಿಗಣೇಶ್, ಶಾಸಕ