Advertisement

ಆಂತರಿಕ ರಸ್ತೆ ಅಭಿವೃದ್ದಿಗೆ ಆದ್ಯತೆ ನೀಡಿ: ನಡಹಳ್ಳಿ

05:54 PM Feb 09, 2022 | Shwetha M |

ಮುದ್ದೇಬಿಹಾಳ: ನಗರೋತ್ಥಾನ ಯೋಜನೆಯ ಹಂತ-2ರಡಿ ಬಿಡುಗಡೆಯಾಗಿರುವ ವಿಶೇಷ ಅನುದಾನದಲ್ಲಿ ಪಟ್ಟಣ ಪ್ರದೇಶದ ವಿವಿಧ ಬಡಾವಣೆಗಳ ಆಂತರಿಕ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿಯವರು ಪುರಸಭೆ ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಮಂಗಳವಾರ ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ಸಂಚರಿಸಿ ಮುಖ್ಯ ರಸ್ತೆಗಳನ್ನು ಸಂಪರ್ಕಿಸುವ ಆಂತರಿಕ ರಸ್ತೆಗಳ ದುರವಸ್ಥೆಯನ್ನು ಅಧಿಕಾರಿಗಳು, ಪುರಸಭೆ ಸದಸ್ಯರು ಮತ್ತು ಬಡಾವಣೆಯ ಪ್ರಮುಖರೊಂದಿಗೆ ಪರಿಶೀಲಿಸಿದ ಅವರು ಎಲ್ಲೆಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟು ಸಾರ್ವಜನಿಕರಿಗೆ ತೊಂದರೆ ಆಗಿದೆಯೋ ಅಂಥ ರಸ್ತೆಗಳಿಗೆ ಮೊದಲ ಆದ್ಯತೆ ನೀಡಿ ಕ್ರಿಯಾಯೋಜನೆಯಲ್ಲಿ ಅಳವಡಿಸಿಕೊಳ್ಳಲು ಸೂಚಿಸಿದರು.

ಈ ವೇಳೆ ಬಡಾವಣೆಯ ನಿವಾಸಿಗಳಿಂದ ಕೇಳಿ ಬಂದ ಅಹವಾಲು, ಬೇಡಿಕೆಗಳನ್ನೂ ದಾಖಲಿಸಿಕೊಂಡು ಅಗತ್ಯ ಪರಿಹಾರ ಕಲ್ಪಿಸುವಂತೆ ತಿಳಿಸಿದರು. ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಬಸವರಾಜ ಮುರಾಳ, ಸುನೀಲ ಹಡಲಗೇರಿ, ಬಿಜೆಪಿ ಧುರೀಣರಾದ ರಾಜೇಂದ್ರಗೌಡ ರಾಯಗೊಂಡ, ಬಸವರಾಜ ಬೂದಿಹಾಳಮಠ, ವಿಜಯಕುಮಾರ ಬಡಿಗೇರ, ಪಿಡಬ್ಲೂಡಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್‌.ಎಂ.ಹುಂಡೇಕಾರ, ಪುರಸಭೆ ಮುಖ್ಯಾಕಾರಿ ಸುನೀಲ ಪಾಟೀಲ, ಇಂಜಿನೀಯರುಗಳಾದ ಅಶೋಕ ಬಿರಾದಾರ, ಬಗಲಿ, ಪುರಸಭೆಯ ಪರಿಸರ ಮತ್ತು ಆರೋಗ್ಯ ವಿಭಾಗದ ಸಿಬ್ಬಂದಿಗಳು, ಬಡಾವಣೆಯ ಪ್ರಮುಖರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next